ಧರ್ಮಸ್ಥಳ ಸೌಜನ್ಯ ಅತ್ಯಾಚಾರ – ಹತ್ಯೆ ಪ್ರಕರಣಕ್ಕೆ 13 ವರ್ಷ ಕಳೆದರೂ, ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ಈ ಅನ್ಯಾಯದ ವಿರುದ್ಧ ರಾಜ್ಯದ ಜನರು ಮತ್ತೆ ಧ್ವನಿ ಎತ್ತಿದ್ದಾರೆ. ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ನೇತೃತ್ವದಲ್ಲಿ ಇಂದು ರಾಜ್ಯದ ವಿವಿಧ 60 ಸ್ಥಳಗಳಲ್ಲಿ ಪ್ರತಿಭಟನೆಗಳು, ಜನಾಗ್ರಹ ಸಭೆಗಳು, ಆಗ್ರಹ ಪತ್ರ ಸಲ್ಲಿಕೆಗಳು ಹಾಗೂ ಕ್ಯಾಂಡಲ್ ಲೈಟ್ ಪ್ರದರ್ಶನಗಳು ನಡೆಯಲಿವೆ.
ಈ ಹೋರಾಟದ ಭಾಗವಾಗಿ ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ, ಕೊಲೆ, ಭೂ ಕಬಳಿಕೆ, ದಲಿತರ ಮೀಸಲು ಭೂಮಿ ಕಬಳಿಕೆ ಹಾಗೂ ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಗಳ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಲಿದ್ದಾರೆ. ಈ ಅನ್ಯಾಯಗಳನ್ನು ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಆಯೋಜಿಸಲಾಗಿದೆ.
ಜನಾಗ್ರಹ ನಡೆದ ಪ್ರಮುಖ ಸ್ಥಳಗಳು ಮತ್ತು ಸಮಯ
ಬೆಂಗಳೂರು: ವಿಜನಾಪುರ (ಸಂಜೆ 6), ಚಿನ್ನಪ್ಪನಹಳ್ಳಿ (ಸಂಜೆ 6), ಬಿ. ಚೆನ್ನಸಂದ್ರ (ಸಂಜೆ 6), ಚಿಕ್ಕದೇವಸಂದ್ರ (ಸಂಜೆ 5), ಕಪಿಲಾ ನಗರ (ಸಂಜೆ 5), ಶ್ರೀಗಂಧ ನಗರ (ಸಂಜೆ 4), ಶ್ರೀನಿವಾಸ ನಗರ (ಸಂಜೆ 5), ಶಿವಾನಂದ ನಗರ (ಸಂಜೆ 5), ಹೊಯ್ಸಳ ನಗರ (ಸಂಜೆ 5), ಬೈರವೇಶ್ವರ ನಗರ (ಸಂಜೆ 6.30), ನಾಗರಭಾವಿ ವಿಲೇಜ್ (ಸಂಜೆ 6), ಶಾಂತಿನಗರ (ಸಂಜೆ 5), ತ್ಯಾಗರಾಜನಗರ (ಸಂಜೆ 5.30), ಹೊಸೂರು ಬಂಡೆ, ಕಣ್ಣೂರು (ಸಂಜೆ 6).
ಬೆಂಗಳೂರು ದಕ್ಷಿಣ ಜಿಲ್ಲೆ: ಆನೇಕಲ್ ತಾಲೂಕು ತಹಶೀಲ್ದಾರ್ ಕಚೇರಿ (ಮಧ್ಯಾಹ್ನ 12).
ಮಳವಳ್ಳಿ(ಮಂಡ್ಯ): ಬಿಜಿಪುರ ಗ್ರಾ.ಪಂ. ಕಚೇರಿ (ಬೆಳಿಗ್ಗೆ 10), ಪಂಡಿತಹಳ್ಳಿ (ಬೆಳಿಗ್ಗೆ 10), ಬಂಡೂರು (ಬೆಳಿಗ್ಗೆ 10), ದುಗ್ಗನಹಳ್ಳಿ (ಬೆಳಿಗ್ಗೆ 10), ತಳಗವಾಡಿ (ಬೆಳಿಗ್ಗೆ 10), ಹಿಟ್ಟನಹಳ್ಳಿ ಕೂಪ್ಪಲು (ಬೆಳಿಗ್ಗೆ 10), ತೊರೆಕಾಡನಹಳ್ಳಿ (ಬೆಳಿಗ್ಗೆ 10), ನಿಡ್ಲಘಟ್ಟ (ಬೆಳಿಗ್ಗೆ 10), ಕಂದೇಗಾಲ (ಬೆಳಿಗ್ಗೆ 10).
ಮದ್ದೂರು ತಾಲೂಕು: ದೊಡ್ಡ ಅರಸೀಕೆರೆ ಗ್ರಾ.ಪಂ. ಕಚೇರಿ (ಬೆಳಿಗ್ಗೆ 10).
ವಿಜಯನಗರ ಜಿಲ್ಲೆ: ಹೊಸಪೇಟೆ ಬೃಹತ್ ಮೆರವಣಿಗೆ (ಬೆಳಿಗ್ಗೆ 10, ಶ್ರಮಿಕ ಭವನದಿಂದ ಪುನೀತ್ ರಾಜ್‌ಕುಮಾರ್ ಪುತ್ಥಳಿಯವರೆಗೆ).
ತುಮಕೂರು: ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11).
ಮಡಿಕೇರಿ (ಕೊಡಗು): ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11).
ಬೀದರ್: ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11), ಬಸವಕಲ್ಯಾಣ ತಾ. ಕಚೇರಿ (ಬೆಳಿಗ್ಗೆ 11.30), ಹುಮನಾಬಾದ್ ತಾ. ಕಚೇರಿ (ಬೆಳಿಗ್ಗೆ 11.30).
ಮೈಸೂರು: ಗಾಂಧಿ ಚೌಕ (ಬೆಳಿಗ್ಗೆ 11).
ಹಾವೇರಿ: ತಹಶೀಲ್ದಾರ್ ಕಚೇರಿ (ಬೆಳಿಗ್ಗೆ 11).
ಕೋಲಾರ: ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11).
ರಾಯಚೂರು: ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11.30), ಸಿಂಧನೂರು ತಾಲೂಕು ಕಚೇರಿ (ಬೆಳಿಗ್ಗೆ 11), ದೇವದುರ್ಗ (ಬೆಳಿಗ್ಗೆ 11), ಲಿಂಗಸಗೂರು (ಬೆಳಿಗ್ಗೆ 11).
ಕಲಬುರಗಿ: ಜಿಲ್ಲಾಧಿಕಾರಿ ಕಚೇರಿ (ಬೆಳಿಗ್ಗೆ 11.30).
ಬಳ್ಳಾರಿ: ಗಾಂಧಿ ಭವನ (ಬೆಳಿಗ್ಗೆ 11).
ಹಾಸನ: ಮಹಾವೀರ ವೃತ್ತ (ಸಂಜೆ 6, ಬೃಹತ್ ಜನಾಗ್ರಹ ಸಭೆ, ಪುಸ್ತಕ ಬಿಡುಗಡೆ, ಕ್ಯಾಂಡಲ್ ಲೈಟ್).
ದಕ್ಷಿಣ ಕನ್ನಡ: ಬೆಳ್ತಂಗಡಿ ಅಂಬೇಡ್ಕರ್ ಭವನ (ಬೆಳಿಗ್ಗೆ 10.30), ಮಂಗಳೂರು ‘ವಿಕಾಸ’ ಸ್ಟೇಟ್ಬ್ಯಾಂಕ್ (ಸಂಜೆ 5), ಮುಡಿಪು ಕುರ್ನಾಡು ಜಂಕ್ಷನ್ (ಸಂಜೆ 5.30), ಹರೇಕಳ ಡಿವೈಎಫ್ಐ ಕಚೇರಿ (ಸಂಜೆ 7.30), ಕುತ್ತಾರ್ ತೇವುಲ ಪರಿಸರ (ಸಂಜೆ 7), ಬಜಾಲ್ ಪಕ್ಕಲಡ್ಕ ಜಂಕ್ಷನ್ (ಸಂಜೆ 7.30), ಉರ್ವಸ್ಟೋರ್ ಸುಂಕದಕಟ್ಟೆ (ಸಂಜೆ 7.30), ಬೆಂಗರೆ ಕಸಬ ಪಿ.ಜಿ ಪಾಯಿಂಟ್ (ಸಂಜೆ 5.30), ಬಂದರ್ ಸಿಟಿಪ್ರೆಸ್ ಬಳಿ (ರಾತ್ರಿ 8.30), ಬೈಕಂಪಾಡಿ ಅಂಗರಗುಂಡಿ ಬಳಿ (ಸಂಜೆ 7.30), ಸುರತ್ಕಲ್ ಕಾನ ಜಂಕ್ಷನ್ (ಸಂಜೆ 7.30), ಕೊಂಚಾಡಿ ಯೆಯ್ಯಾಡಿ ಕಚೇರಿ (ಸಂಜೆ 6.30), ಪಂಜಿಮೊಗರು ವಿದ್ಯಾನಗರ (ಸಂಜೆ 7.30), ವಾಮಂಜೂರು ತಿರುವೈಲ್ (ಸಂಜೆ 7.30).
ಈ ಪ್ರತಿಭಟನೆಗಳ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿರುವ ವೇದಿಕೆ, ಸರ್ಕಾರದಿಂದ ತ್ವರಿತ ಕ್ರಮಕ್ಕೆ ಒತ್ತಾಯಿಸಿದೆ. ಜನರ ಬೆಂಬಲದೊಂದಿಗೆ ಈ ಆಂದೋಲನ ಮುಂದುವರಿಯಲಿದೆ ಎಂದು ವೇದಿಕೆಯ ಸದಸ್ಯರು ತಿಳಿಸಿದ್ದಾರೆ.





