ಅನಧಿಕೃತವಾಗಿ ಶವ ಹೂಳಲಾಗಿದೆ ಎಂಬ ಆರೋಪದ ಮೇಲೆ ಸಾಕ್ಷೀದಾರ ಎಂದು ಹೇಳಲಾದ ಚಿನ್ನಯ್ಯ ಕೊಟ್ಟ ದೂರಿಗೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ ನಡೆದ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿ ಜಿತೇಂದ್ರ ನೇತೃತ್ವದ ತಂಡ ಇಂದು ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯಕ್ಕೆ ಸುಮಾರು 3,923 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಈ ಬಗ್ಗೆ ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗೃಹಸಚಿವ ಡಾ ಜಿ ಪರಮೇಶ್ವರ್, ತನಿಖಾ ವರದಿಯ ಬಗ್ಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲಗಳ ಅಧಿವೇಶನದಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.




