ಧರ್ಮಸ್ಥಳ ಪ್ರಕರಣ | ʼಕೊಂದವರು ಯಾರು?ʼ ಆಂದೋಲನ; ಮಹಿಳಾ ಆಯೋಗಕ್ಕೆ ಹಕ್ಕೊತ್ತಾಯ ಸಲ್ಲಿಕೆ

Date:

ಕಳೆದ ಇಪ್ಪತ್ತು ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ, ನಾಪತ್ತೆಯಾದ ಹೆಣ್ಣುಮಕ್ಕಳ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯನ್ನು ಎಸ್‌ಐಟಿ ಮಾಡಬೇಕು. ದೂರುದಾರರು ಮತ್ತು ಸಾಕ್ಷಿಗಳಿಗೆ ರಕ್ಷಣೆ ನೀಡುವ ಬಗ್ಗೆ ಸರ್ಕಾರ ಖಾತ್ರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗಕ್ಕೆ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಸೇರಿ “ಕೊಂದವರು ಯಾರು?” ಆಂದೋಲನದ ಭಾಗವಾಗಿ ಹಕ್ಕೊತ್ತಾಯ ಸಲ್ಲಿಸಿದರು.

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣಗಳ ಅಪರಾಧಿಗಳು ಯಾರು?

ಎಸ್.ಐ.ಟಿ ರಚನೆಗಾಗಿ ಆಗ್ರಹಿಸಿದ ಮಹಿಳಾ ಆಯೋಗವು ಮಹಿಳೆಯರ ನಾಪತ್ತೆ-ಕೊಲೆ ಪ್ರಕರಣಗಳನ್ನು ತನಿಖೆಯ ಕೇಂದ್ರವಾಗಿಸಿಕೊಳ್ಳಲು ಆಗ್ರಹಿಸಬೇಕು. ಸಮಗ್ರ ತನಿಖೆ ನಡೆಯಬೇಕು ಮತ್ತು ಅದು ತಾರ್ಕಿಕ ಅಂತ್ಯ ಮುಟ್ಟುವ ತನಕ ಅದನ್ನು ಅಡ್ಡಿಪಡಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ಅಥವಾ ಇನ್ನಾವುದೇ ಪ್ರಭಾವಿ ಶಕ್ತಿಗಳಿಂದಾಗಲೀ ನಡೆಯಬಾರದು. ಇಂತಹ ಮಹತ್ವದ ತನಿಖೆಗೆ ಅಡ್ಡಿಪಡಿಸುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕೆಲವು ಮಾಧ್ಯಮಗಳಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪುಣ್ಯಕ್ಷೇತ್ರವೆಂದು ಪೂಜಿಸಲ್ಪಡುವ ಧರ್ಮಸ್ಥಳದ ಸುತ್ತ ದುರದೃಷ್ಟವಶಾತ್, ವ್ಯಾಪಕ ಅತ್ಯಾಚಾರಗಳು, ಕೊಲೆಗಳು, ಅಪಹರಣಗಳು ಮತ್ತು ಅಮಾಯಕ ಜನರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕೊಲೆಗಳು ಸೇರಿದಂತೆ ಹೇಯ ಅಪರಾಧಗಳ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ. ಈ ಬಗ್ಗೆ ‘ಕೊಂದವರು ಯಾರು’-‘Who Killed Women in Dharmasthala’ ಜನಾಂದೋಲನದ ವತಿಯಿಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಇಂದು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಾಯಿತು.

“ಮಹಿಳಾ ಸಂಘಟನೆಗಳು, ಲಿಂಗನ್ಯಾಯಕ್ಕಾಗಿ ಶ್ರಮಿಸುತ್ತಿರುವ ಮತ್ತು ಮಾನವ ಹಕ್ಕು ಸಂಘಟನೆಗಳು ಹಾಗೆಯೇ, ನಾಡಿನ ಪ್ರಜ್ಞಾವಂತ ನಾಗರೀಕರು ಸೇರಿ ‘ಕೊಂದವರು ಯಾರುʼ-‘Who Killed Women in Dharmasthala’ ಎಂಬ ಜನಾಂದೋಲನವನ್ನು ಆರಂಭಿಸಿದ್ದೇವೆ. ಈ ಇಡೀ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕಿಸುವುದರ ಸುತ್ತ ಕೇಂದ್ರಿತವಾಗಿರಬೇಕೇ ಹೊರತು ಇನ್ನಾವುದೇ ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂದು ನಾವು ಗಟ್ಟಿದನಿಯಲ್ಲಿ ಪ್ರತಿಪಾದಿಸಲು ಬಯಸುತ್ತೇವೆ” ಎಂದು ಆಂದೋಲನ ಅಭಿಪ್ರಾಯಪಟ್ಟಿದೆ.

“ಕಳೆದ ವರ್ಷಗಳಲ್ಲಿ, 2012ರಲ್ಲಿ ಸೌಜನ್ಯ ಅವರ ಅಪಹರಣ ಮತ್ತು ಕೊಲೆ, ಅದಕ್ಕೂ ಕೇವಲ 20 ದಿನಗಳ ಮೊದಲು ಆನೆಮಾವುತ ನಾರಾಯಣರೊಂದಿಗೆ ಅವರ ತಂಗಿ ಯಮುನಾ ಅವರ ಕೊಲೆ, ಅದಕ್ಕೆ ಸಾಕಷ್ಟು ಮುಂಚೆ 1986ರಲ್ಲಿ ಪದ್ಮಲತಾ ಅವರ ಅಪಹರಣ, ಹಲವು ದಿನಗಳ ಕಾಲ ಬಂಧನದಲ್ಲಿರಿಸಿ ಅತ್ಯಾಚಾರ ಮತ್ತು ಕ್ರೂರ ಹತ್ಯೆ ಮತ್ತು 1979ರಲ್ಲಿ ಟೀಚರ್‌ ವೇದವಲ್ಲಿ ಅವರ ಮೇಲಿನ ದಾಳಿ, ಅತ್ಯಾಚಾರ ಮತ್ತು ಸುಟ್ಟು ಕೊಲೆ ಮಾಡಿದ ಘಟನೆಗಳೂ ಸೇರಿದಂತೆ ಇದುವರೆಗೂ ಬಗೆಹರಿಯದ, ಹಲವಾರು ಮಹಿಳೆಯರು ನಾಪತ್ತೆಯಾದ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಿಳೆಯರು ನಾಪತ್ತೆಯಾಗುವ, ಅತ್ಯಾಚಾರ ಮತ್ತು ಕೊಲೆಗೀಡಾಗುವ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗದಿದ್ದರೂ, ಸರ್ಕಾರ ಮತ್ತು ಸಮಾಜ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ನಮಗೆ ಆಘಾತ ತಂದಿದೆ. ಹಾಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಕೆಲವು ಮಾಧ್ಯಮಗಳಲ್ಲಿ ʼಮೀಡಿಯಾ ಟ್ರಯಲ್‌ʼ ನಡೆಯುತ್ತಿದೆ ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತನಿಖೆ ಮಹಿಳೆಯರ ಘನತೆ-ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ-ಧಾರ್ಮಿಕ ವಿಚಾರಗಳನ್ನಲ್ಲ” ಎಂದು ಕೊಂದವರು ಯಾರು ಆಂದೋಲನವು ಆಗ್ರಹಿಸಿದೆ.

“ಈ ವಿಚಾರದಲ್ಲಿ ಮಹಿಳಾ ಆಯೋಗದ ಸಕಾರಾತ್ಮಕ ಮಧ್ಯಪ್ರವೇಶವನ್ನು ಗುರುತಿಸಿದ್ದೇವೆ ಮತ್ತು ಅದನ್ನು ಶ್ಲಾಘಿಸುತ್ತೇವೆ. ಮಹಿಳಾ ಆಯೋಗ ಸರ್ಕಾರಕ್ಕೆ ಬರೆದ ಪತ್ರವನ್ನು ಆಧರಿಸಿ ರಾಜ್ಯದಲ್ಲಿ ಇಂದು ಇಂತಹ ಗಂಭೀರ ಪ್ರಕರಣಗಳ ವಿಚಾರಣೆಗೆಂದೇ ಎಸ್.ಐ.ಟಿ ರಚನೆಯಾಗಿದೆ. ಆದರೆ ಎಸ್‌.ಐ.ಟಿ ರಚನೆ ನಂತರದ ಬೆಳವಣಿಗೆಗಳ ಬಗ್ಗೆ ನಮಗೆ ಆತಂಕವಿದೆ” ಎಂದಿರುವ ಆಂದೋಲನವು, ಆಯೋಗದ ಪತ್ರ ಆಧರಿಸಿ ಸರ್ಕಾರ ಎಸ್‌ ಐ ಟಿ ರಚನೆ ಘೋಷಿಸಿ ನೀಡಿದ ನಡಾವಳಿಯಲ್ಲಿ “….ಕಳೆದ 20 ವರ್ಷಗಳಲ್ಲಿ ನಡೆದ ಪ್ರಕರಣಗಳ ಸಮಗ್ರ ತನಿಖೆಗಾಗಿ ಎಸ್‌ ಐ ಟಿ ರಚಿಸಲಾಗಿದೆ” ಎಂದಿರುವುದನ್ನು ಉಲ್ಲೇಖಿಸಿದೆ.

ಎಸ್‌.ಐ.ಟಿ ತನಿಖೆ ಅಬಾಧಿತವಾಗಿ ಮುಂದುವರೆಯಬೇಕು, ಪೂರ್ವನಿರ್ಧಾರಿತ ಹೇಳಿಕೆಗಳನ್ನು ಸರ್ಕಾರದ ಮಂತ್ರಿಗಳು ಮತ್ತಿತರ ರಾಜಕೀಯ ನಾಯಕರು ನೀಡುವುದನ್ನು ನಿಗ್ರಹಿಸಬೇಕು, ಸಾಕ್ಷಿಗಳ ರಕ್ಷಣೆಗೆ ವಿಶೇಷ ಕ್ರಮ ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ರಾಜ್ಯ ಮಹಿಳಾ ಆಯೋಗವು ಸರ್ಕಾರದ ಮುಂದಿಡಬೇಕು ಎಂಬುದನ್ನು ಸೇರಿ ಹಲವು ಹಕ್ಕೊತ್ತಾಯಗಳನ್ನು ಮುಂದಿಡಲಾಗಿದೆ (ಆಯೋಗಕ್ಕೆ ನೀಡಲಾದ ಹಕ್ಕೊತ್ತಾಯ ಪತ್ರವನ್ನು ಲಗತ್ತಿಸಲಾಗಿದೆ).

“ಎಸ್‌ಐಟಿ ರಚನೆಯಾಗುವುದರಲ್ಲಿ ಸಕಾರಾತ್ಮಕ ಪಾತ್ರವಹಿಸಿದ ಮಹಿಳಾ ಆಯೋಗದ ಪ್ರತಿಕ್ರಿಯೆಗೆ ಈ ಸಂದರ್ಭದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಸಕ್ರಿಯರಾಗಿ ಪ್ರಜ್ವಲ್‌ ರೇವಣ್ಣ ಪ್ರಕರಣದಂತಹ ಹಲವು ವಿಚಾರಗಳಲ್ಲಿ ಮಹಿಳೆಯರ ಪರವಾಗಿ ಪ್ರತಿಸ್ಪಂದಿಸುತ್ತಿರುವ ಡಾ. ನಾಗಲಕ್ಷ್ಮಿ ಚೌಧರಿಯವರು ಈ ಸಂದರ್ಭದಲ್ಲೂ ಮತ್ತೊಮ್ಮೆ ನ್ಯಾಯದ ಪರವಾಗಿ ದನಿಯೆತ್ತುತ್ತಾರೆಂದು ನಾವು ನಿರೀಕ್ಷಿಸುತ್ತೇವೆ. ಇದು ಕೇವಲ ಆಯೋಗದ ಜವಾಬ್ದಾರಿಯ ವಿಚಾರ ಮಾತ್ರವಲ್ಲದೆ, ಅಸಹಾಯಕರಾಗಿ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರ ಪರವಾಗಿ ನ್ಯಾಯವನ್ನು ಆಗ್ರಹಿಸುವ ಮಹಿಳಾ ಸಮುದಾಯದ ಚಾರಿತ್ರಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸವೂ ಹೌದು” ಎಂದು ಆಂದೋಲನದ ಪ್ರತಿನಿಧಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮಹಿಳಾ ಆಯೋಗವನ್ನು ಭೇಟಿಯಾದ ತಂಡದಲ್ಲಿ, ʼನಾವೆದ್ದು ನಿಲ್ಲದಿದ್ದರೆʼ ವತಿಯಿಂದ ಮಮತಾ ಯಜಮಾನ್‌, ಮಧುಭೂಷಣ್‌, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮಿ ಕೆ.ಎಸ್‌, ಮಾನಸ ಬಳಗದ ಚಂಪಾವತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರಿ, ದಲಿತ ಮಹಿಳಾ ಸಂಘಟನೆ ವತಿಯಿಂದ ನಾಗಮಣಿ, ಮಹಿಳಾ ಮುನ್ನಡೆ ಹಾಗೂ ಕರ್ನಾಟಕ ಜನಶಕ್ತಿಯಿಂದ ಮಲ್ಲಿಗೆ ಸಿರಿಮನೆ, ಸಾಧನಾ ಮಹಿಳಾ ಗುಂಪಿನ ವಿನುತಾ, ಚಂದ್ರಶೀ, ಗೀತಾ, ಆಯೆಷಾ, ಹಸಿರುದಳದ ವತಿಯಿಂದ ಮೀನಾಕ್ಷಿ ಮತ್ತು ಶಶಿಕಲಾ ಮೊದಲಾದವರಿದ್ದರು.

ಇದಕ್ಕೂ ಮೊದಲು, 28.08.2025ರಂದು ಪೊಲೀಸ್‌ ಮಹಾನಿರ್ದೇಶಕರನ್ನು ಭೇಟಿಯಾಗಿ ಆಂದೋಲನದ ಪ್ರತಿನಿಧಿಗಳಾದ ಮಧುಭೂಷಣ್‌, ಮನು ಚೌಧರಿ, ವಿನಯ್‌ ಶ್ರೀನಿವಾಸ್‌, ಮೀನಾಕ್ಷಿ, ಪದ್ಮಾವತಿ ಅವರುಗಳು, ಕೆಲವು ಮಾಧ್ಯಮಗಳು ಸುಜಾತಾ ಭಟ್‌ ಅವರನ್ನೂ ಒಳಗೊಂಡಂತೆ ಧರ್ಮಸ್ಥಳದ ವಿಚಾರದ ಸಾಕ್ಷಿಗಳ ʼಮಾಧ್ಯಮ ಟ್ರಯಲ್‌ʼ ನಡೆಸಿ ದಾಳಿ ನಡೆಸುತ್ತಿರುವ ವಿಚಾರ ಗಮನಕ್ಕೆ ತಂದು, ಇಂತಹವನ್ನು ತಡೆಗಟ್ಟಬೇಕೆಂದು ಕೂಡಾ ಆಗ್ರಹಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...