ಮಂಗಳೂರಿನಿಂದ ಜಗತ್ತಿಗೆ ಪರಿಚಯವಾಯ್ತು ‘ಸೌಲ್ಟ್’: ಇದು ವಿಶ್ವದ ಮೊದಲ ‘ಡಿಜಿಟಲ್ ಲೈಫ್ ವಾಲ್ಟ್’

Date:

ಡಿಜಿಟಲ್ ಯುಗದಲ್ಲಿ ಮನುಷ್ಯನ ಬದುಕು ಸಂಕೀರ್ಣವಾಗುತ್ತಿದ್ದಂತೆ, ಆತನ ನಂತರದ ‘ಲೆಗಸಿ’ ಅಥವಾ ಪರಂಪರೆಯನ್ನು ನಿರ್ವಹಿಸುವುದು ಒಂದು ಜಾಗತಿಕ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಮಂಗಳೂರು ಮೂಲದ ನವೋದ್ಯಮವೊಂದು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ‘ಡಿಜಿಟಲ್ ಲೈಫ್ ವಾಲ್ಟ್’ (Digital Life Vault) ಆಗಿರುವ ‘ಸೌಲ್ಟ್’ (Soult) ಅನ್ನು ಶನಿವಾರ (ಜ.17) ನಗರದಲ್ಲಿ ನಡೆದ ಪ್ರತಿಷ್ಠಿತ ‘ಟೈಕಾನ್ ಮಂಗಳೂರು-2026’ (TiECon Mangaluru) ಸಮಾವೇಶದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು.

ಏನಿದು ಸೌಲ್ಟ್?
ಇದು ಕೇವಲ ದಾಖಲೆಗಳನ್ನು ಸಂಗ್ರಹಿಸಿಡುವ ಕ್ಲೌಡ್ ಸ್ಟೋರೇಜ್ ಅಲ್ಲ. ಬದಲಿಗೆ, ವ್ಯಕ್ತಿಯೊಬ್ಬರು ತಮ್ಮ ಆರ್ಥಿಕ ಆಸ್ತಿ ವಿವರಗಳು, ಅತ್ಯಂತ ಪ್ರಮುಖ ದಾಖಲೆಗಳು, ವೈಯಕ್ತಿಕ ನೆನಪುಗಳು, ಕೊನೆಯ ಆಸೆಗಳು ಮತ್ತು ಕುಟುಂಬಕ್ಕೆ ನೀಡಬೇಕಾದ ಜೀವನದ ಸೂಚನೆಗಳನ್ನು (Life Instructions) ಒಂದೇ ಖಾಸಗಿ ವೇದಿಕೆಯಲ್ಲಿ ಸುರಕ್ಷಿತವಾಗಿ ಆಯೋಜಿಸಿಡಲು ‘ಸೌಲ್ಟ್’ ಅವಕಾಶ ನೀಡುತ್ತದೆ. ಡಿಜಿಟಲ್ ಬದುಕು ವಿಸ್ತಾರವಾಗುತ್ತಿದ್ದರೂ, ನಮ್ಮ ನಂತರ ಪ್ರೀತಿಪಾತ್ರರಿಗೆ ಆಸ್ತಿ ಮತ್ತು ಹಕ್ಕುಗಳ ಹಸ್ತಾಂತರ ಸುಲಭವಲ್ಲ. ಈ ನಿಟ್ಟಿನಲ್ಲಿ ಆರ್ಥಿಕ ಸಿದ್ಧತೆ ಮತ್ತು ಕೌಟುಂಬಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲುಪಿಸಲು ಇದು ಸೇತುವೆಯಾಗಿ ಕೆಲಸ ಮಾಡಲಿದೆ.

ಮಂಗಳೂರು ‘ಸಿಲಿಕಾನ್ ಬೀಚ್’
ಭಾರತದ ಉದಯೋನ್ಮುಖ ‘ಸಿಲಿಕಾನ್ ಬೀಚ್’ ಎಂದು ಕರೆಯಲ್ಪಡುವ ಕರಾವಳಿ ಕರ್ನಾಟಕದ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ‘ಟೈಕಾನ್ ಮಂಗಳೂರು-2026’ ವೇದಿಕೆಯನ್ನು ಸೌಲ್ಟ್ ತನ್ನ ಜಾಗತಿಕ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದೆ. ಜಾಗತಿಕ ಮಟ್ಟದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಉತ್ಪನ್ನಗಳನ್ನು ಕೇವಲ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ, ಮಂಗಳೂರಿನಂತಹ ಪ್ರಾದೇಶಿಕ ವ್ಯವಸ್ಥೆಯಿಂದಲೂ ರೂಪಿಸಬಹುದು ಎಂಬುದನ್ನು ಇದು ಸಾಬೀತುಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಜ್ಞರ ಸಾರಥ್ಯ
ಎಂಟರ್‌ಪ್ರೈಸ್ ಸಾಸ್‌ (SaaS) ಉತ್ಪನ್ನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಸಂಕೇತ್ ಕಂದ್ಲಿಕರ್ ಅವರು ‘ಸೌಲ್ಟ್’ನ ಸ್ಥಾಪಕರಾಗಿದ್ದಾರೆ. ಜಾಗತಿಕ ಉತ್ಪನ್ನಗಳ ವಿನ್ಯಾಸದಲ್ಲಿ ಇವರು ಅಪಾರ ಪರಿಣತಿ ಹೊಂದಿದ್ದಾರೆ. ಇವರಿಗೆ ಜೊತೆಯಾಗಿ, ದುಬೈ ಮೂಲದ ಉದ್ಯಮಿ ಹಾಗೂ ಮಂಗಳೂರು ಮೂಲದ ಸಲೀಂ ಅವರು ಸಹ-ಸ್ಥಾಪಕರಾಗಿದ್ದಾರೆ. ಇವರು ಕರಾವಳಿ ಭಾಗದ ನವೋದ್ಯಮಗಳಿಗೆ ಬೆಂಬಲ ನೀಡುವಲ್ಲಿ ಸಕ್ರಿಯವಾಗಿದ್ದು, ಸೌಲ್ಟ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ.

ಇದನ್ನು ಓದಿದ್ದೀರಾ? ಬೆಂಗಳೂರು ಕೌಶಲ್ಯ ಶೃಂಗಸಭೆ 2025: ಜಾಗತಿಕ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕರ್ನಾಟಕದ ಮಹತ್ವಾಕಾಂಕ್ಷಿ ವೇದಿಕೆ

ಸ್ಥಾಪಕರ ಮಾತು
ಬಿಡುಗಡೆ ಕುರಿತು ಮಾತನಾಡಿದ ಸ್ಥಾಪಕ ಸಂಕೇತ್ ಕಂದ್ಲಿಕರ್, “ನಾವು ನಮ್ಮ ಜೀವನವನ್ನು ಬಹಳ ಎಚ್ಚರಿಕೆಯಿಂದ ಕಟ್ಟಿಕೊಳ್ಳುತ್ತೇವೆ. ಆದರೆ ನಾವು ಹೋದ ನಂತರ ಏನಾಗಬೇಕು ಎಂಬುದನ್ನು ಸ್ಪಷ್ಟವಾಗಿ ಮತ್ತು ಸಮಗ್ರವಾಗಿ ಸಂಘಟಿಸುವಲ್ಲಿ ಎಡವತ್ತೇವೆ. ಈ ಕೊರತೆಯನ್ನು ನೀಗಿಸಲು ಸೌಲ್ಟ್ ರೂಪಿಸಲಾಗಿದೆ. ಮಂಗಳೂರಿನ ಟೈಕಾನ್ ವೇದಿಕೆಯಿಂದ ಇದನ್ನು ಬಿಡುಗಡೆ ಮಾಡುತ್ತಿರುವುದು ಸಾಂಕೇತಿಕವಾಗಿದೆ,” ಎಂದು ತಿಳಿಸಿದರು.

ಗೌಪ್ಯತೆಗೆ ಮೊದಲ ಆದ್ಯತೆ
ಸೌಲ್ಟ್ ಆ್ಯಪ್ ಅನ್ನು ‘ಝೀರೋ ನಾಲೆಡ್ಜ್ ಆರ್ಕಿಟೆಕ್ಚರ್’ (Zero-knowledge architecture) ತಂತ್ರಜ್ಞಾನದಡಿ ರೂಪಿಸಲಾಗಿದೆ. ಅಂದರೆ, ಬಳಕೆದಾರರು ಸಂಗ್ರಹಿಸಿದ ಮಾಹಿತಿಯು ಸಂಪೂರ್ಣ ಎನ್‌ಕ್ರಿಪ್ಟ್ ಆಗಿರುತ್ತದೆ ಮತ್ತು ಅದನ್ನು ಸ್ವತಃ ‘ಸೌಲ್ಟ್’ ಕಂಪನಿಯೂ ನೋಡಲು ಸಾಧ್ಯವಿಲ್ಲ. ಅಲ್ಲದೆ, ಕಂಪನಿಯು ಯಾವುದೇ ಜಾಹೀರಾತುಗಳನ್ನು ತೋರಿಸದಿರಲು ಮತ್ತು ಬಳಕೆದಾರರ ಡೇಟಾವನ್ನು ಮಾರಾಟ ಮಾಡದಿರಲು ನಿರ್ಧರಿಸಿದೆ.

ಹೆಚ್ಚಿನ ಮಾಹಿತಿಗಾಗಿ www.soult.life ಜಾಲತಾಣಕ್ಕೆ ಭೇಟಿ ನೀಡಬಹುದು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ, ಮಧ್ಯರಾತ್ರಿ ನೋಟಿಸ್ ಜಾರಿ !

ಧರ್ಮಸ್ಥಳ ಸೌಜನ್ಯ ‌ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ...

ಕರಾವಳಿ | LPG ಅಭಾವ; ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ (LPG) ಸರಬರಾಜಿನಲ್ಲಿ...

ಧರ್ಮಸ್ಥಳ ಪೊಲೀಸ್ ಠಾಣೆಗೆ ಆಯೋಗದ ಅಧ್ಯಕ್ಷರ ಭೇಟಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್.ಕೋಸಂಬೆ...

ಮಂಗಳೂರು | ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು...