ಮಂಗಳೂರು | ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ: ಬಿ ಕೆ ಇಮ್ತಿಯಾಜ್ ಆಗ್ರಹ

Date:

ಮನೆ, ಕಾರು, ಚಿನ್ನದ ಆಮಿಷವೊಡ್ಡಿ ಜನರಿಂದ ಹಣ ಪಡೆದು ಸಾವಿರಾರು ಮಂದಿಗೆ ಪಂಗನಾಮ ಹಾಕುತ್ತಿರುವ ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಒತ್ತಾಯಿಸಿದರು.

ನ್ಯೂ ಇಂಡಿಯಾ ಲಕ್ಕಿ ಸ್ಕೀಮ್ ಕಂಪೆನಿಯಿಂದ ವಂಚನೆಗೆ ಒಳಗಾದ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದರು.

“ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಮಂಗಳೂರು ನಗರದಲ್ಲಿ ಸುಮಾರು 100ಕ್ಕೂ ಹೆಚ್ಚು ಬ್ಲೇಡ್ ಕಂಪೆನಿಗಳು ಸಾವಿರಾರು ಕೋಟಿ ಜನರಿಂದ ಹಣ ಸಂಗ್ರಹಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಇವರ ವಂಚನೆ ವಿಸ್ತರಣೆಯಾಗಿದೆ. ಜಿಲ್ಲೆಯಲಿರುವ ಎಲ್ಲ ಲಕ್ಕಿ ಸ್ಕೀಮ್‌ಗಳು ಕಾನೂನು ಬಾಹಿರವಾಗಿ ಕಾರ್ಯಚರಿಸುತ್ತಿವೆ. ಹಾಗಾಗಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಸುನಿಲ್ ಕುಮಾರ್ ಬಜಾಲ್

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಬಡವರ ಪ್ರಾಮಾಣಿಕತೆಯನ್ನು ಹೈಜಾಕ್ ಮಾಡಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ಹೆಣ್ಣುಮಕ್ಕಳ ಮದುವೆಗೆ ಸಹಾಯವಾಗಲೆಂದು ಹೂಡಿಕೆ ಮಾಡಿದ್ದ ಬಡಪಾಯಿಗಳಿಗೆ ಅನ್ಯಾಯವಾಗಿದೆ. ನ್ಯೂ ಇಂಡಿಯಾ ಕಂಪೆನಿ ಮಾಲೀಕನಿಂದ 50 ಕೋಟಿ ರೂಪಾಯಿಯ ವಂಚನೆ ನಡೆದಿದೆ. ಪ್ರಭಾವಿ ರಾಜಕಾರಣಿಗಳ ಸಹಕಾರದಿಂದಾಗಿ ಈ ರೀತಿಯ ವಂಚನೆ ಮಾಡಲು ಸಾಧ್ಯವಾಗಿದೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಂಚನೆಯಾಗುತ್ತಿರಲಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಅದಾನಿ, ಅಂಬಾನಿಗಳನ್ನು ಗ್ರಾಮ ಪಂಚಾಯಿತಿಗೂ ತರುವ ಹುನ್ನಾರ ನಡೆದಿದೆ: ಸಚಿವ ಆರ್ ಬಿ ತಿಮ್ಮಾಪುರ್

ಸಿಐಟಿಯು ಮುಖಾಂಡ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ಮುಖಂಡ ತಯ್ಯುಬ್ ಬೆಂಗ್ರೆ ಮಾತನಾಡಿದರು. ಸಂತ್ರಸ್ತರ ವೇದಿಕೆಯ ಸಹ ಸಂಚಾಲಕ ಸಮದ್ ಕಾಟಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಂತ್ರಸ್ತರ ವೇದಿಕೆಯ ಪ್ರಮುಖರಾದ ಪರ್ವೀಜ್ ಬಂದರ್, ಖಲೀಲ್ ಬೆಂಗ್ರೆ, ನಟೇಶ್, ರಾಮ್ ಸುರತ್ಕಲ್, ಮನ್ಸೂರ್ ಅಡ್ಡೂರು, ಫಾರೂಕ್ ಕುಕ್ಕಾಜೆ, ಅಬ್ದುಲ್ ಅಜೀಜ್ ಕೃಷ್ಣಾಪುರ, ಖಾಸಿಂ ಕಾಟಿಪಳ್ಳ, ಸನಾ ಮಣಿಪಾಲ, ಜಯಲಕ್ಷ್ಮಿ ಉಳ್ಳಾಲ, ಖೈರುನ್ನಿಸ ಉಚ್ಚಿಲ, ಸುಜಾತ ಮಧ್ಯಪಾದವು, ಸುಹಾನಾ ಬೆಂಗಳೂರು, ಫೈಝಲ್ ಚಿಕ್ಕಮಗಳೂರು, ಮೊಹಮ್ಮದ್ ಪಾಷ ಶಿವಮೊಗ್ಗ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ, ಮಧ್ಯರಾತ್ರಿ ನೋಟಿಸ್ ಜಾರಿ !

ಧರ್ಮಸ್ಥಳ ಸೌಜನ್ಯ ‌ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ...

ಕರಾವಳಿ | LPG ಅಭಾವ; ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ (LPG) ಸರಬರಾಜಿನಲ್ಲಿ...

ಧರ್ಮಸ್ಥಳ ಪೊಲೀಸ್ ಠಾಣೆಗೆ ಆಯೋಗದ ಅಧ್ಯಕ್ಷರ ಭೇಟಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್.ಕೋಸಂಬೆ...

ಮಂಗಳೂರು | ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು...