ದ್ವೇಷ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ನೋಟಿಸ್ ಜಾರಿ, ಪ್ರಕರಣ ದಾಖಲು

Date:

ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ‘ದೀಪೋತ್ಸವ’ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣ ಧಾರ್ಮಿಕ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅ.30 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕಲಂ 35(3) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಂತೆ ವಿಚಾರಣೆಗೆ‌ ಹಾಜರಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಈಶ್ವರಿ ಪದ್ಮುಂಜ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

ಈ ಕುರಿತು ವಸಂತ್ ಗಿಳಿಯಾರ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ “ಕಲ್ಲಡ್ಕ ಪ್ರಭಾಕರ್ ಭಟ್ ಕೆಣಕಿ ಉಳಿದ ಸರ್ಕಾರವಿಲ್ಲ, ಕರಾವಳಿ ಕಿಡಿಯಾದೀತು” ಎಂದು ಮಾಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್ ಶಾಂತಿ ಕದಡುವ ಪರೋಕ್ಷ ಬೆದರಿಕೆಯಾಗಿದೆ, ಹಾಗಾಗಿ ವಸಂತ್ ಗಿಳಿಯಾರ್ ವಿರುದ್ಧ ಕಾನೂನು ಕ್ರಮಕ್ಕೆ ಜನ ಆಗ್ರಹಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಲ್ಲಡ್ಕ ಪ್ರಭಾಕರ್ ಭಟ್ ಎನ್ನುವ ಶಕ್ತಿಯನ್ನ ಕೆಣಕಿ ಉಳಿದ ಸರ್ಕಾರವಿಲ್ಲ! ಭಟ್ಟರ ಬಂಧನಕ್ಕೆ ಒತ್ತಡವಿದೆ ಎನ್ನುವ ಮಾತು ಕೇಳಿಸಿಕೊಂಡೆ. ಕರಾವಳಿ ಕಿಡಿ ಕಿಡಿಯಾದೀತು. ಪ್ರಭಾಕರ ಭಟ್ಟರ ಪ್ರಭಾವ ಏನೂ ಎನ್ನುವುದನ್ನು ಪ್ರದರ್ಶನ ಮಾಡುವ ರಿಸ್ಕಿಗೆ ಯಾರೂ ಕೈ ಹಾಕದೇ ಇರೋದು ಸೇಫ್! ಕರಾವಳಿ ಕರ್ನಾಟಕ ಶಾಂತಿಯಲ್ಲಿರಲಿ ಎನ್ನುವುದು ಸಲಹೆ” ಎಂದು ವಸಂತ್‌ ಗಿಳಿಯಾರ್ ಮಾಡಿರುವ ಪೋಸ್ಟ್‌ ನಲ್ಲಿದೆ.

ಈ ಪೋಸ್ಟ್‌ ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೆಣ್ಣು ಮಕ್ಕಳಿಗೆ ಗೌರವ ಕೊಡದ ಅಯೋಗ್ಯರು ಇಂತವರು. ಇವರಿಂದ ನಾವೇನು ಕಲಿಯಬೇಕಿಲ್ಲ ಎಂದು ಜನರು ಕಮೆಂಟ್‌ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?

Divyath K Poojary ಎಂಬ ಹೆಸರಿನವರು ಹೆಣ್ಣು ಮಕ್ಕಳಿಗೆ ರೆಸ್ಪೆಕ್ಟ್ ಕೊಡದ ಅಯೋಗ್ಯರು ಇಂತವರು. ಇವನ ಭಾಷಣ ಕೇಳಿ ಅರ್ಧದಿಂದ ಹೋದವ ನಾನು. ಧರ್ಮವನ್ನು ದ್ವೇಷ ಮಾಡಲು ಕಲಿಸೋ ಇವನಿಂದ ನಾವೇನು ಕಲಿಯಬೇಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Musthafa Mf ಎಂಬವರು, ನೀನು ಯಾವ ಸೀಮೆಯ ಪತ್ರಕರ್ತ ಮೊದಲು ಹೇಳು. ಮೊದಲು ಕಾನೂನಿಗೆ ಗೌರವ ಕೊಡೋದು ಕಲಿ. ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಅದು ಮೊದಲು ತಿಳ್ಕೋ. ಒಂದು ಧರ್ಮ ವನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡುವನನ್ನು ಬಂಧನ ಮಾಡಬೇಕು. ಅದರ ಆಯೋಜಕರನ್ನು ಬಂಧಿಸಬೇಕು. ಈತ ಕಾನೂನಿಗಿಂತ ದೊಡ್ಡವನಲ್ಲ. ನೀ ಮೊದಲು ಪತ್ರಕರ್ತನ ಕೆಲಸ ಮಾಡು. ಹೆದರಿಸುವುದು ಬಿಡು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Yadava Kuntalapady ಎಂಬವರು ಬಂಧನ ಮಾಡಿದರೆ ಏನೂ ಆಗೊದಿಲ್ಲ. ಅದು ನಿನ್ನ ಭ್ರಮೆ. ಈಗ ರೋಡಿಗೆ ಬಂದು ಗಲಾಟೆ ಮಾಡಿದರೆ, ಮಾಡಿಸಿದವನು ನೇರ ಹೊಣೆ. ಅವನನ್ನೇ ಒದ್ದು ಒಳಗೆ ಹಾಕುವಂತ ಪ್ರಾಮಾಣಿಕ 2 ಪೋಲಿಸ್ ಅಧಿಕಾರಿಗಳು ಇದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಆನಂದ ಕುಮಾರ ಹಾಲಗೆರೆ ಎಂಬ ಬಳಕೆದಾರರು, ಜಾಸ್ತಿ ತಲೆಕೆಡಿಸಿ ಇರೋದು ಬೇಡ ಹರಿಪ್ರಸಾದ್ ಗೃಹಮಂತ್ರಿ ಆಗಲಿ ನೋಡು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Sanatan Dharam ಎಂಬ ಖಾತೆ, ಈ ಪೋಸ್ಟ್‌ನಲ್ಲಿ ಪ್ರಚೋದನಕಾರಿ ವಿಷಯವಿರುವುದರಿಂದ ನಿಮಗೆ ಅಪಾಯವಾಗಬಹುದು! ಪೋಸ್ಟ್ ಅನ್ನು ಮಾರ್ಪಡಿಸಲು ಪ್ರಯತ್ನಿಸಿ ಎಂದು ಗಿಳಿಯಾರ್‌ ಗೆ ಸಲಹೆ ನೀಡಿದೆ. Prasanna Hegde ಎಂಬ ಫೇಸ್‌ ಬುಕ್‌ ಬಳಕೆದಾರರು, ನವೀನ್ ಸೂರಿಂಜೆಯ ಕಿತಾಪತಿ ಆದರೆ, ಒಂದು ಸಾರಿ ಹೊತ್ತಿ ಉರಿಯಲಿ ಬಿಡಿ. ಆಗ್ಲಾದ್ರೂ ನಮ್ಮ ಹಿಂದುಗಳಿಗೆ ಬುದ್ದಿ ಬರತ್ತಾ ನಿದ್ದೆಯಿಂದ ಏಳ್ತಾರ ಅಂತ ಎಂದು ಪ್ರತಿಕ್ರಿಯಿಸಿದ್ದಾರೆ.

Shivappa Gowda ಎಂಬವರು, ಇದು ಮರೀ ಖರ್ಗೆಯ ಅಡ್ವಾನ್ಸ್ ಅಂತಿಮ ವಿದಾಯದ ಸಂಕೇತ ಅಷ್ಟೇ ಬ್ರೋ.. ಎಂದು ಕಮೆಂಟ್‌ ಮಾಡಿದ್ದಾರೆ. Prakash KT ಎಂಬ ಬಳಕೆದಾರರು, ಪ್ರಭಾಕರ್ ಭಟ್ ವಿಚಾರದಲ್ಲಿ ಸರಕಾರ ಏನಾದ್ರೂ ಎಡವಟ್ಟು ಮಾಡಿದರೆ, ನನ್ನ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ, ಸಾರಿಗೆ, ಕಾರ್ಮಿಕ, ವೈದ್ಯಕೀಯ, ಶಿಕ್ಷಣ, ಹೋಟೆಲ್ ಸಹಿತ ಕೆಲ ಉದ್ಯಮಗಳು, ಸರಕಾರಕ್ಕೆ ತಕ್ಕ ಪಾಠ ಕಲಿಸಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Shashikanth Bc ಎಂಬವರು, ಮೊದಲು …ಮಗ ಪ್ರಿಯಾಂಕನನ್ನು ಮುಗಿಸಬೇಕು, ಜೈ ಭೀಮ್ ಎಂದು ಬೆದರಿಕೆ ಹಾಕಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...