ಮಂಗಳೂರು: ಟಿಂಟ್‌ ಅಳವಡಿಸಿದ್ದ 223 ಕಾರಿನ ಮಾಲಕರಿಗೆ 1,11,500 ರೂ. ದಂಡ

Date:

ಮಂಗಳೂರು ಪೊಲೀಸ್‌ ಕಮಿಷನರ್‍‌ ವ್ಯಾಪ್ತಿಯಲ್ಲಿ ಜೂನ್‌ 2 ಮತ್ತು 3ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಗ್ಲಾಸ್‌ಗಳಿಗೆ ಟಿಂಟ್ ಸ್ಟಿಕ್ಕರ್‍‌‌ ಅಳವಡಿಸಿದ್ದ 223 ಕಾರುಗಳ ಮೇಲೆ ಪ್ರಕರಣ ದಾಖಲಿಸಿ 1,11,500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಪ್ರಕಟನೆ ತಿಳಿಸಿದೆ.

ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ಸಂಚಾರಿ ಪೊಲೀಸ್‌ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್‌ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕಾರಿನ ಗ್ಲಾಸ್‌ ಗಳಿಗೆ ಟಿಂಟ್‌ ಸ್ಟಿಕ್ಕರ್‍‌ ಅಳವಡಿಸಿದ ಮಾಲಕರು ಮತ್ತು ಚಾಲಕರಿಗೆ ದಂಡ ವಿಧಿಸಿದ್ದಾರೆ. ಒಟ್ಟು 223 ಕಾರುಗಳ ಚಾಲಕ ಮಾಲಕರಿಗೆ 1,11,500 ರೂಪಾಯಿ ದಂಡ ವಿಧಿಸಲಾಗಿದೆ. ಗ್ಲಾಸ್‌ಗೆ ಟಿಂಟ್‌ ಅಳವಡಿಸಿದ ಕಾರಿನ ಚಾಲಕರಿಂದಲೇ ಟಿಂಟ್‌ ತೆಗೆಸಿ ಇನ್ನು ಮುಂದೆ ಕಾರಿಗೆ ಟಿಂಟ್‌ ಅಳವಡಿಸದಂತೆ ಸೂಚನೆ ನೀಡಲಾಗಿದೆ.

ಅಲ್ಲದೆ ಮಂಗಳೂರು ಕಮಿಷನರ್‍‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರು ಶೋ ರೂಂ, ಕಾರಿನ ಬಿಡಿಭಾಗಗಳ ಅಂಗಡಿಗಳು, ಗ್ಯಾರೇಜ್‌, ಸ್ಟಿಕರ್ ಅಂಗಡಿಗಳ ಮಾಲಕರ ಸಭೆಯನ್ನು ಜೂನ್‌ 3ರಂದು ಪೊಲೀಸ್‌ ಆಯುಕ್ತರ ಕಚೇರಿ ಮತ್ತು ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಕರೆಯಲಾಗಿದೆ. ಅಪರಾಧ ಕೃತ್ಯ ನಡೆಸಲು ಆರೋಪಿಗಳು ಕಾರಿಗೆ ಟಿಂಟ್‌ ಅಳವಡಿಸುವ ಸಾಧ್ಯತೆ ಇರುವುದರಿಂದ ತಮ್ಮ ಬಳಿಗೆ ಬರುವ ಯಾವುದೇ ವಾಹನಗಳಿಗೆ ಟಿಂಟ್‌ ಅಳವಡಿಸದಂತೆ ಸಭೆಯಲ್ಲಿ ಅಂಗಡಿಗಳ ಮಾಲಕರಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಪ್ರಕಟನೆ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ, ಮಧ್ಯರಾತ್ರಿ ನೋಟಿಸ್ ಜಾರಿ !

ಧರ್ಮಸ್ಥಳ ಸೌಜನ್ಯ ‌ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ...

ಕರಾವಳಿ | LPG ಅಭಾವ; ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಪರಿಣಾಮವಾಗಿ ಅಡುಗೆ ಅನಿಲ (LPG) ಸರಬರಾಜಿನಲ್ಲಿ...

ಧರ್ಮಸ್ಥಳ ಪೊಲೀಸ್ ಠಾಣೆಗೆ ಆಯೋಗದ ಅಧ್ಯಕ್ಷರ ಭೇಟಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್.ಕೋಸಂಬೆ...

ಮಂಗಳೂರು | ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು...