ನಾಮಫಲಕವನ್ನು ಕಿತ್ತು ಹಾಕಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ದಲಿತ ಸಂಘಟನೆಗಳ ಒತ್ತಾಯ

Date:

ಚಿಂತಾಮಣಿ : ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್ ಪ್ರಕರಣ ನಡೆಯುತ್ತಿರುವ ಬಗ್ಗೆ ನಾಮಫಲಕವನ್ನು ಅಳವಡಿಸಿದ್ದು, ನಾಮಫಲಕವನ್ನು ಕಿತ್ತು ಹಾಕಿರುವವರ ವಿರುದ್ಧ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ದಲಿತ ಪರ ಸಂಘಟನೆಗಳ ಮುಖಂಡರುಗಳು ನಗರ ಪೊಲೀಸ್ ಠಾಣೆ ಎದುರುಗಡೆ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ರವರಿಗೆ ಸಲ್ಲಿಸಿದರು.

ಪ್ರತಿಭಟನಾ ವೇಳೆ ಮಾತನಾಡಿದ ದಲಿತ ಮುಖಂಡ ವಿಜಯ ನರಸಿಂಹ ಚಿಂತಾಮಣಿ ತಾಲ್ಲೂಕು ಕಸಬಾ ಹೋಬಳಿ ಚಿಂತಾಮಣಿ ಗ್ರಾಮದ ಹಳೇ ಸರ್ವೆ ನಂ:31 ಆಗಿದ್ದು, ಹೊಸ ಸರ್ವೆ ನಂ:146 ರ.02 ಎಕರೆ ಜಮೀನು ಮುನಿಕದಿರಪ್ಪ ರವರಿಗೆ ಸರ್ಕಾರದಿಂದ ಮಂಜುರಾಗಿದ್ದು.ಸದರಿ ಜಮೀನು ಈಗಾಗಲೇ ಪರಭಾರೆಯಾಗಿದ್ದು, ಜಮೀನು ಪರಭಾರೆಯಾಗಿರುವ ಬಗ್ಗೆ ಪಿ.ಟಿ.ಸಿ.ಎಲ್ ಪ್ರಕರಣವು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ, ಚಿಕ್ಕಬಳ್ಳಾಪುರ ರವರಲ್ಲಿ ಪ್ರಕರಣ ನಡೆಯುತ್ತಿದ್ದು,ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ,ಸದರಿ ಜಮೀನಿನಲ್ಲಿ ನಾಮಫಲಕವನ್ನು ನಾಟಿ ಮಾಡಲಾಗಿದ್ದು,ನಾಮಫಲಕವನ್ನು ರಾತ್ರಿ ಸಮಯದಲ್ಲಿ ಕೆಲ ವ್ಯಕ್ತಿಗಳು ಕಿತ್ತು ಹಾಕಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದವರು ಹೇಳಿದರು.

ಇದನ್ನು ಓದಿದ್ದೀರಾ..? ಕ್ರಿಸ್‌ಮಸ್‌ ಸಂಭ್ರಮ: ಆಚರಣೆಗೆ ಸಕಲ ಸಿದ್ಧತೆ

ಪ್ರತಿಭಟನೆಯಲ್ಲಿ ಕವಾಲಿ ವೆಂಕಟರವಣಪ್ಪ,ಮೂರ್ತಿ,ವೆಂಕಟಪ್ಪ, ಆನಂದಪ್ಪ,ರವಿ,ಮಂಜು ಪಿ ವಿ,ಎಂ ವಿ ರಾಮಪ್ಪ,ನರಸಿಂಹಪ್ಪ,ಸಂತೋಷ್, ಜನ,ಮುನೆಯ್ಯ,ಅಂಜಿ,ಹರೀಶ್,ಕೃಷ್ಣ,ಪಿ ವಿ ರವಿ,ಪಿ ವಿ ನಾಗ,ಬಾಲು,ಸೇರಿದಂತೆ ಮತ್ತಿತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...