ದಾಂಡೇಲಿ | ಕಾಳಿ ಹುಲಿ ರಕ್ಷಿತಾರಣ್ಯದ ಭದ್ರತೆಗೆ ‘ಅವನಿ-ತಾರ’ ಶ್ವಾನ ಬಲ: ಅರಣ್ಯ ಕಳ್ಳರ ಪತ್ತೆಗೆ ಹದ್ದಿನ ಕಣ್ಣು

Date:

ದಾಂಡೇಲಿ: ಚಾಮರಾಜನಗರದಲ್ಲಿ ಇತ್ತೀಚೆಗೆ ನಡೆದ ಹುಲಿ ಹತ್ಯೆ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ರಾಜ್ಯಾದ್ಯಂತ ವನ್ಯಜೀವಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವ್ಯಾಪ್ತಿಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ (KTR) ಶ್ವಾನದಳವನ್ನು ಬಲಪಡಿಸಲಾಗಿದ್ದು, ‘ಅವನಿ’ ಮತ್ತು ‘ತಾರ’ ಎಂಬ ಇಬ್ಬರು ಹೊಸ ಸದಸ್ಯರ ಸೇರ್ಪಡೆಯಾಗಿದೆ.

ಕಾಳಿ ರಕ್ಷಿತಾರಣ್ಯದಲ್ಲಿ 2016ರಿಂದಲೂ ಶ್ವಾನದಳ ಕಾರ್ಯಾಚರಣೆಯಲ್ಲಿದೆ. ಇದುವರೆಗೆ ‘ಕ್ವೀಪರ್’ ಎಂಬ ಒಂದೇ ಶ್ವಾನ ಇಡೀ ವಿಭಾಗದ ಜವಾಬ್ದಾರಿ ಹೊತ್ತಿತ್ತು. ಈಗ ಬೆಲ್ಜಿಯಂ ಷಫರ್ಡ್ ತಳಿಯ ಅವನಿ ಮತ್ತು ತಾರ ಸೇರ್ಪಡೆಯೊಂದಿಗೆ ಶ್ವಾನಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಮೂಲಕ ಅರಣ್ಯ ಅಪರಾಧಗಳ ಮೇಲೆ ನಿಗಾ ಇಡಲು ಇಲಾಖೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ನವ ತಲೆಮಾರಿನ ಸಿದ್ಧತೆಸುಮಾರು 11 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ‘ಕ್ವೀಪರ್’, ಇದುವರೆಗೆ 120ಕ್ಕೂ ಹೆಚ್ಚು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸಿ ಸೈ ಎನಿಸಿಕೊಂಡಿದೆ.

1000404822

ಆದರೆ, ಈಗ ಕ್ವೀಪರ್ ನಿವೃತ್ತಿಯ ಹಂತಕ್ಕೆ ತಲುಪಿರುವ ಕಾರಣ, ಅದರ ಸ್ಥಾನವನ್ನು ತುಂಬಲು ಮತ್ತು ಕಾರ್ಯದೊತ್ತಡ ಕಡಿಮೆ ಮಾಡಲು ಈ ಹೊಸ ಶ್ವಾನಗಳನ್ನು ತರಲಾಗಿದೆ. ವಿಶೇಷವೆಂದರೆ, ಅವನಿ ಮತ್ತು ತಾರ ಶ್ವಾನಗಳು ಬಂಡಿಪುರದ ಅರಣ್ಯ ಇಲಾಖೆಯ ಸ್ವಂತ ತರಬೇತಿ ಕೇಂದ್ರದಲ್ಲಿ ಸಿದ್ಧಗೊಂಡ ಮೊದಲ ಬ್ಯಾಚ್‌ನ ಸದಸ್ಯರು.

ಈ ಹಿಂದೆ ತರಬೇತಿಗಾಗಿ ಹೊರಗಿನ ಸಂಸ್ಥೆಗಳನ್ನು ಅವಲಂಬಿಸಬೇಕಿತ್ತು. 2024ರ ಡಿಸೆಂಬರ್‌ನಿಂದ ತರಬೇತಿ ಪಡೆದಿರುವ ಈ ಒಂದೂವರೆ ವರ್ಷ ಪ್ರಾಯದ ಶ್ವಾನಗಳು, “ಐದು ಹುಲಿಗಳಿರುವ ಪ್ರದೇಶಕ್ಕೆ ಒಂದು ಶ್ವಾನ” ಎಂಬ ಗುರಿಯೊಂದಿಗೆ ಅಖಾಡಕ್ಕಿಳಿದಿವೆ.

ಈ ಸುದ್ದಿ ಓದಿದ್ದೀರಾ? ಶಿರಸಿ | ಕೆಡಿಸಿಸಿ ಮಂಡಳಿ ಆಯ್ಕೆ ವಿಳಂಬದಿಂದ ರೈತರಿಗೆ ಹಿನ್ನಡೆ; ಬೇಡ್ತಿ–ವರದಾ ಯೋಜನೆಗೆ ತಡೆ ಅಗತ್ಯ: ಶಿವರಾಮ ಹೆಬ್ಬಾರ್

ಕೇವಲ ಕಳ್ಳಬೇಟೆ ಅಷ್ಟೇ ಅಲ್ಲದೆ, ಮರಗಳ ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ಪತ್ತೆ ಹಾಗೂ ಮಾದಕ ವಸ್ತುಗಳ ಸಾಗಾಟದಂತಹ ಸುಮಾರು 14 ವಿವಿಧ ಬಗೆಯ ಅರಣ್ಯ ಅಪರಾಧಗಳನ್ನು ಪತ್ತೆಹಚ್ಚುವ ವಿಶೇಷ ಸಾಮರ್ಥ್ಯವನ್ನು ಇವು ಹೊಂದಿವೆ. ಇತ್ತೀಚೆಗೆ ಅರಣ್ಯದಲ್ಲಿ ಅಳವಡಿಸಲಾಗಿದ್ದ ಕ್ಯಾಮರಾಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲೂ ಈ ಶ್ವಾನಗಳು ಪ್ರಮುಖ ಸುಳಿವು ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ.

ಎಸಿಎಫ್ ಎಂ.ಎಸ್. ಕರಳೀಮಠ್ ಅವರ ಮಾರ್ಗದರ್ಶನದಲ್ಲಿ, ಡಿಆರ್‌ಎಫ್‌ಓ ವೆಂಕಟೇಶ್ ಅಮೀಲ್ ಸಾಬ್ ಹಾಗೂ ಸಿಬ್ಬಂದಿಗಳಾದ ದೊಂಡು ಮತ್ತು ಬೊಮ್ಮ ಅವರು ಈ ಶ್ವಾನಗಳ ಆರೈಕೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ಮತ್ತು ಅರಣ್ಯ ಅಪರಾಧಗಳ ನಡುವೆ, ಶ್ವಾನದಳದ ಈ ಬಲವರ್ಧನೆ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...