ಮಂಡ್ಯ ತಾಲ್ಲೂಕು ಹೊಳಲು ಗ್ರಾಮದಲ್ಲಿ ಕರ್ನಾಟಕ ಭೂಸೇನಾ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು ₹2.9 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಹೊಳಲು ಗ್ರಾಮದ ಚಿಕ್ಕಬೀದಿ, ದೊಡ್ಡ ಬೀದಿ, ಚರಂಡಿ ಕಾಂಕ್ರೀಟ್ ರಸ್ತೆ ಹಾಗೂ ಗ್ರಾಮದ ಕೆರೆ ಏರಿಯಿಂದ ಗದ್ದೆಯ ಕಡೆಗೆ ಸರಿ ಸುಮಾರು ನಾಲ್ಕು ಕಿಲೋಮೀಟರ್ ಡಾಂಬರ್ ರಸ್ತೆ ಕಾಮಗಾರಿ ನಡೆಯಲಿದೆ. ಚಿಕ್ಕ ಬೀದಿ ರಸ್ತೆಗೆ ₹45 ಲಕ್ಷ, ದೊಡ್ಡ ಬೀದಿ ರಸ್ತೆಗೆ ₹45 ಲಕ್ಷ ಒಟ್ಟು ₹90 ಲಕ್ಷ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ ₹2 ಕೋಟಿ ರೂಪಾಯಿ ಅನುದಾನದಲ್ಲಿ ರೈತರಿಗೆ ಅನುಕೂಲ ಆಗುವಂತೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಯುವಜನತೆ ಮತದಾನದ ಮಹತ್ವ ಅರಿಯಬೇಕು: ನ್ಯಾ. ಈಶ್ವರ್
ಮಾಜಿ ಶಾಸಕ ಎಚ್.ಬಿ. ರಾಮು, ಗ್ರಾಮ ಪಂಚಾಯತಿ ಅಧ್ಯಕ್ಷೆ ರಮ್ಯ ಚೇತನ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಲ್. ಅಭಿನಂದನ್, ಅರ್ಪಿತ, ಮಾಜಿ ಉಪಾಧ್ಯಕ್ಷ ನಾರಾಯಣಪ್ಪ, ಡೈರಿ ಅಧ್ಯಕ್ಷ ಸಾವಿತ್ರಮ್ಮ, ಸೊಸೈಟಿ ಅಧ್ಯಕ್ಷ ಸಚ್ಚಿದಾನಂದ, ಮಾಜಿ ಅಧ್ಯಕ್ಷ ನಿಂಗೇಗೌಡ, ಗ್ರಾಮದ ಮುಖಂಡರಾದ ಸದಾನಂದ, ಜೆಟ್ಟಿ ಕುಮಾರ್, ಪಟೇಲ್ ರಾಮ್, ತಿಮ್ಮೇಗೌಡ, ತಾಂಡವಯ್ಯ, ಶಿವಪ್ಪ, ತಂಟಿರ ಶಿವಪ್ಪ, ರಾಜಶೇಖರ್, ವಿನೋದ್, ಎಚ್.ಬಿ. ಕೃಷ್ಣ, ಚೇತನ್, ಬಾಬು, ನಿಂಗರಾಜಮ್ಮ, ಪದ್ಮ, ತಾಂಡವೇಶ್ವರ ದೇವಸ್ಥಾನದ ಅರ್ಚಕ ದೀಪು ದೀಕ್ಷಿತ್, ಕಿರಿಯ ಕಾರ್ಯಪಾಲಕ ಇಂಜಿನಿಯರ್ ಕೆಂಪರಾಜು, ಸಹಾಯ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್, ಗುತ್ತಿಗೆದಾರರಾದ ಅಭಿನಂದನ್, ಚಂದನ್, ಶ್ಯಾಮ್ ಹಾಗೂ ಗ್ರಾಮಸ್ಥರು, ಸ್ಥಳೀಯ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಇದ್ದರು.





