ಮೈಸೂರು ಜಿಲ್ಲೆ, ನಂಜನಗೂಡು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ದಸಂಸ (ಅಂಬೇಡ್ಕರ್ ವಾದ) ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ರೈತ ಸಂಘಟನೆಯವರ ಮೇಲಿನ ಕೇಸು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿದರು.
ದಿನಾಂಕ-13-01-2026ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸಮಿತಿಯು ನಂಜನಗೂಡು ತಹಶೀಲ್ದಾರ್ ಕಚೇರಿ ಮುಂದೆ, ತಾಲ್ಲೋಕಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನೆ ಮಾಡಿದ್ದರು. ಆದರೆ, ತಹಶೀಲ್ದಾರ್ ರವರು ಪ್ರತಿಭಟನೆಗೆ ನನ್ನ ಅನುಮತಿ ಪಡೆದಿಲ್ಲ ಮತ್ತು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೀರಿ ಎಂದು ಪ್ರತಿಭಟನೆ ಮಾಡಿದವರ ಮೇಲೆ ಕೇಸು ದಾಖಲು ಮಾಡಿಸಿದ್ದರು.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಪ್ರಸ್ತಾವಿತ ಯೋಜನೆಯ ಸಾಧಕ-ಬಾಧಕಗಳೇನು?
ಈ ವಿಚಾರವಾಗಿ ಸೋಮವಾರದಂದು ನಂಜನಗೂಡು ತಾಲ್ಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಮೈಸೂರು ಜಿಲ್ಲಾ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್ ರವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ರೈತರ ಮೇಲಿನ ಕೇಸನ್ನು ವಾಪಾಸ್ ಪಡೆಯಬೇಕೆಂದು ಮನವಿ ಸಲ್ಲಿಸಿದರು.
ಈ ವಿಶೇಷ ವಿಡಿಯೋ ನೋಡಿ:https://www.youtube.com/watch?v=NNlc_mA4os0&t=382s
ಪ್ರತಿಭಟನೆಯಲ್ಲಿ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ತಾಲ್ಲೂಕು ಪದಾಧಿಕಾರಿಗಳಾದ ಗೊನಹಳ್ಳಿ ನಾರಾಯಣ್, ಆನಂದ್ ಬ್ಯಾಳರು, ಹೂವಯ್ಯ ಮಲ್ಲಳ್ಳಿ, ಅನಿಲ್ ದೇಬೂರು, ಬಸವರಾಜ್ ಕೊಡಿನರಸೀಪುರ, ಮಹದೇವಪ್ರಸಾದ್ ಮೂಡಳ್ಳಿ, ಶಿವು ಕಪ್ಪಸೋಗೆ, ಬಸವರಾಜ್ ಕಪ್ಪಸೋಗೆ, ಸುರೇಶ್ ಕಡಬುರು, ಸಿದ್ದರಾಜು ವಳಗೆರೆ ಸೇರಿದಂತೆ ಹಲವರು ಇದ್ದರು.





