ಚಿಕ್ಕಬಳ್ಳಾಪುರ: ಕಳೆದ 50 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ದಲಿತರು ಮತ್ತು ದಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಜೊತೆಗೆ ಜಾತಿ ಮತ್ತು ಹಸಿವುಮುಕ್ತ ಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ನಿರಂತರವಾಗಿ ತನ್ನ ಹೋರಾಟವನ್ನು ಮುಂದುವರಿಸುತ್ತಾ ಬಂದಿದೆ ಎಂದು ದಸಂಸ ರಾಜ್ಯ ಮುಖಂಡ ಕೆ.ಸಿ.ರಾಜಕಾಂತ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಸಬಾ ಹೋಬಳಿ ಸೇಠ್ ದಿನ್ನೆ ಬಳಿ ದಸಂಸ ವತಿಯಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 50 ವರ್ಷಗಳ ಸುಧೀರ್ಘ ಪಯಣದಲ್ಲಿ ದಲಿತ ಸಂಘರ್ಷ ಸಮಿತಿ ಅನೇಕ ಸಾಧನೆಗಳನ್ನೂ ಸವಾಲುಗಳನ್ನೂ ಎದುರಿಸಿದೆ ಜನಪರ ಹೋರಾಟಗಳ ಜೊತೆಗೆ ಭೂಮಿಗಾಗಿ ಕಡ್ಡಾಯ ಶಿಕ್ಷಣಕ್ಕಾಗಿ, ಸೂರಿಗಾಗಿ, ಸೇಂದಿ ಮುಕ್ತ ರಾಜ್ಯಕ್ಕಾಗಿ, ಶೋಷಣೆಯ ವಿಮುಕ್ತಿಗಾಗಿ ವಿಶ್ರಾಂತವಾಗಿ ಹೋರಾಟಗಳನ್ನು ಕಟ್ಟಿದೆ ಇವೆಲ್ಲಾ ಹೋರಾಟಗಳು ದಲಿತ ಚಳುವಳಿಯ ಇಚ್ಛಾಶಕ್ತಿಯ ಮೆರುಪರ್ವತಗಳಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ದ.ಸಂ.ಸದಲ್ಲಿ ಹೊಸ ವಾತಾವರಣ ಹೊಸ ನಾಯಕತ್ವ ಮತ್ತು ಹೊಸ ಚಿಂತನೆಗಳನ್ನು ರೂಪಿಸಿ ಪುನರ್‌ಸಂಘಟನೆ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಭೆಯ ಉದ್ಘಾಟನಾ ಭಾಷಣ ಮಾಡಿದ ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್ ದಲಿತರ ಮೇಲಿನ ದೌರ್ಜನ್ಯಗಳನ್ನು ಗಟ್ಟಿದನಿಯಲ್ಲಿ ತಡೆಯುವ ಕೆಲಸ ಮಾಡುವ ಜೊತೆಜೊತೆಗೆ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ನೀರು ನಿವೇಶನ ಮತ್ತು ಭೂಮಿ ಹಕ್ಕುಗಳಿಗಾಗಿ ದ.ಸಂ.ಸ ಹಲವು ಶಾಂತಿಯುತ ಹೋರಾಟಗಳನ್ನು ನಡೆಸಿದೆ ಈ ಹೋರಾಟಗಳ ಮೂಲಕ ಸರ್ಕಾರದ ಸೌಲಭ್ಯಗಳನ್ನು ದಮನಿತರ ಬಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದೆ ಎಂದರು.
ಸಭೆಯಲ್ಲಿ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ದಸಂಸ ಸಂವಿಧಾನವನ್ನು ಬೋಧಿಸಲಾಯಿತು.
ಇದನ್ನು ಓದಿದ್ದೀರಾ..? ಒಳ ಮೀಸಲಾತಿ:ಬೆಂಗಳೂರಿನ ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ ಮಾದಿಗ ಮುಖಂಡರುಗಳು
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಸಂಚಾಲಕರಾದ ಎನ್.ಪರಮೇಶ್, ಶಿಡ್ಲಘಟ್ಟ ತಾಲ್ಲೂಕು ಸಂಚಾಲಕರಾದ ತಿರುಮಲಪ್ಪ, ಬಾಗೇಪಲ್ಲಿ ತಾಲ್ಲೂಕು ಸಂಚಾಲಕರಾದ ಪೈಪಾಳ್ಯ ರವಿ, ಗುಡಿಬಂಡೆ ತಾಲ್ಲೂಕು ಸಮಿತಿಯ ಇಸುಕೂಲಪ್ಪ, ವರ್ಲಕೊಂಡ ರಾಜು,ಗುಡಿಬಂಡೆ ಅದಿನಾರಾಯಣಪ್ಪ,ನಾಗರಾಜಪ್ಪ,ಗಡಿನಾಡು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು ಸೇರಿದಂತೆ ಚಿಕ್ಕಬಳ್ಳಾಪುರ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಜಾತಿ ಮತ್ತು ಹಸಿವುಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ದಸಂಸ ಕೊಡುಗೆ ಆಪಾರ: ಕೆ.ಸಿ.ರಾಜಾಕಾಂತ್
Date:
ಪೋಸ್ಟ್ ಹಂಚಿಕೊಳ್ಳಿ:




