ದಾವಣಗೆರೆ | ಬಸವಣ್ಣ ಮಾನವ ಕುಲಕ್ಕೆ ಬೇಕಾಗಿರುವಂತಹ ವಿಶ್ವಗುರು: ಬಸವಪ್ರಭು ಸ್ವಾಮೀಜಿ

Date:

ಬಸವಣ್ಣ ಕೇವಲ ಲಿಂಗಾಯತರ, ಕನ್ನಡಿಗರ ಸ್ವತ್ತಲ್ಲ. ಇಡೀ ಮಾನವ ಕುಲಕ್ಕೇ ಬೇಕಾಗಿರುವಂತಹ ವಿಶ್ವಗುರು. ಎಲ್ಲರ ಪರವಾಗಿ ಹೋರಾಟ ಮಾಡಿದ ಮಹಾ ಮಾನವತಾವಾದಿ ಎಂದರೆ ಅದು 12ನೇ ಶತಮಾನದ ಬಸವಣ್ಣನವರು ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆ ನಗರದ ವಿರಕ್ತಮಠದಲ್ಲಿ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ (ವೀರಶೈವ) ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತ್ಯೋತ್ಸವದ ಅಂಗವಾಗಿ ನಡೆದ 108ನೇ ವರ್ಷದ ಬಸವ ಪ್ರಭಾತ್ ಪೇರಿಯ ಮೊದಲ ದಿನದ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

“ಬಸವ ತತ್ವಗಳ ಪಾಲನೆಯಿಂದ ಸಮೃದ್ಧ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಕಾಯಕ ತತ್ವ, ದಾಸೋಹ ತತ್ವದಿಂದ, ಬಸವ ತತ್ವ ಪಾಲನೆಯಿಂದ ದೇಶದ ಉದ್ಧಾರ ಸಾಧ್ಯ ಇಂತಹ ತತ್ವಗಳನ್ನು ಪ್ರತಿಯೊಬ್ಬರೂ ಕೂಡಾ ಆಚರಣೆ ಮಾಡೋಣ. ಇಂತಹ ತತ್ವಗಳನ್ನು ಮನೆ-ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ 108 ವರ್ಷಗಳಿಂದ ಈ ವಿರಕ್ತಮಠದಿಂದ ಬಸವ ಪ್ರಭಾತ್ ಪೇರಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಸವ ಜಯಂತಿ ಆಚರಣೆ 1913ರಲ್ಲಿ ಮೊಟ್ಟ ಮೊದಲು ಪ್ರಾರಂಭವಾಗಿದ್ದು, ದಾವಣಗೆರೆಯ ವಿರಕ್ತಮಠದಿಂದ ಈ ಬಸವ ಪ್ರಭಾತ್ ಪೇರಿ ಆರಂಭವಾಗಲು ಕಾರಣ ಹರ್ಡೇಕರ್ ಮಂಜಪ್ಪ ಮತ್ತು ಜಯದೇವ ಜಗದ್ಗುರುಗಳು ಹಾಗೂ ಮೃತ್ಯುಂಜಯ ಅಪ್ಪಗಳು” ಎಂದು ಹೇಳಿದರು.

“ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಕಾಲದಲ್ಲಿ ಯಾರೂ ಕೂಡಾ ಒಟ್ಟಾಗಿ ಸೇರುವಂತಿರಲಿಲ್ಲ. ಜನ ಸೇರಿ ಸಭೆ ನಡೆಸಿದರು ಎಂದರೆ ಬ್ರಿಟೀಷರ ಗುಂಡೇಟಿಗೆ ಬಲಿ ಆಗಬೇಕಿತ್ತು. ಇವರೆಲ್ಲ ಒಗ್ಗಟ್ಟಾದರು ಎಂದರೆ ಇವರಿಗೆ ಸ್ವಾತಂತ್ರ್ಯ ಕೊಡಬೇಕು ಎಂದು ಯಾರಿಗೂ ಒಗ್ಗಟ್ಟಾಗಿ ಇರಲು ಬಿಡುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕ್ ಅವರು ಗಣೇಶನ ಹಬ್ಬ ಮಾಡಿ ಸಾವಿರಾರು ಜನರನ್ನು ಸೇರಿಸಿ ಸ್ವಾತಂತ್ರ್ಯ ಚಳುವಳಿಗೆ ಜನರನ್ನು ಸಂಘಟನೆ ಮಾಡಿದರು. ಅದೇ ರೀತಿ 1917ರಲ್ಲಿ ಹರ್ಡೇಕ‌ರ್ ಮಂಜಪ್ಪನವರು ದಾವಣಗೆರೆಯಲ್ಲಿ ಬಸವ ಪ್ರಭಾತ್ ಪೇರಿಯನ್ನು ಆರಂಭಿಸಿದರು” ಎಂದರು.

“ಬಸವಣ್ಣನವರ ವಚನಗಳೇ ಇಂದಿನ ಸಂವಿಧಾನದಲ್ಲಿ ಅಡಕವಾಗಿವೆ. ಅವರು ನೀಡಿದ ಸಮಾನತೆ, ಕಾಯಕ, ದಾಸೋಹ, ವಿಶ್ವ ಪ್ರೇಮ ಎಲ್ಲವೂ ಇಂದಿನ ಸಂವಿಧಾನದಲ್ಲಿವೆ. ಅಂತಹ ಬಸವಣ್ಣನವರನ್ನು ಬ್ರಿಟೀಷರು ಮೊಟ್ಟಮೊದಲ ಪ್ರಜಾಪ್ರಭುತ್ವದ ಪರಿಕಲ್ಪನೆಯ ಪಿತಾಮಹ ಎಂದು ಅರ್ಥ ಥೇಮ್ಸ್‌ ನದಿ ದಂಡೆಯ ಮೇಲೆ ಬಸವಣ್ಣವರ ಪ್ರತಿಮೆಯನ್ನು ಸ್ಥಾಪನೆ ಮಾಡಿದರು. ಬಸವಣ್ಣನವರು ವಿದೇಶದವರಿಗೆ ಅರ್ಥವಾಗುತ್ತಿದ್ದಾರೆ. ಆದರೆ ನಮ್ಮದೇಶ, ರಾಜ್ಯದ ಜನತೆಗೆ ಅರ್ಥವಾಗದೇ ಇರುವುದು ಬೇಸರದ ಸಂಗತಿ. ಬಸವಣ್ಣನವರ ತತ್ವಗಳನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ, ಯಾರು ಆಚರಣೆ ಮಾಡುತ್ತಾರೊ ಎಂದಿಗೂ ನೋವನ್ನು ಕೊಡಲು ಹೋಗುವುದಿಲ್ಲ. ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವವರು ಮನೆಯಲ್ಲಿನ ತಂದೆ-ತಾಯಿ, ಅತ್ತೆ-ಮಾವ, ಅವರ ಕುಟುಂಬದವರನ್ನು ಪ್ರೀತಿ ಮಾಡುತ್ತಾರೆ. ಬಸವತತ್ವ ಎಲ್ಲಿ ಇರುತ್ತೋ ಅಲ್ಲಿ ಪ್ರೀತಿ, ಶಾಂತಿ, ನೆಮ್ಮದಿ ಇರುತ್ತದೆ. ಇದರಿಂದ ಸುಖೀ ಕುಟುಂಬ, ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ” ಎಂದರು.

“ಬಸವ ತತ್ವ ಪಾಲನೆ ಮಾಡುತ್ತಾರೋ ಅಲ್ಲಿ ಯಾವುದೇ ದೇಶ- ದೇಶಗಳ ನಡುವೆ ಯುದ್ಧಗಳು ಆಗುವುದಿಲ್ಲ. ಮನೆಯಲ್ಲಿಯೂ ಜಗಳಗಳಾಗುವುದಿಲ್ಲ. ಮನೆ, ದೇಶಗಳಲ್ಲಿ ಜಗಳಗಳು ಇರಬಾರದು ಎಂದರೆ ಎಲ್ಲರೂ ಕೂಡಾ ಬಸವ ತತ್ವಗಳನ್ನು ಪಾಲಿಸಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಲೋಕ ಪ್ರಜ್ಞೆ ವಿಸ್ತರಿಸಿಕೊಳ್ಳಲು ವಚನಗಳ ಅನುಸಂಧಾನ ಅಗತ್ಯ : ಡಾ. ಭೀಮಶಂಕರ ಬಿರಾದರ್

ಈ ಸಂದರ್ಭದಲ್ಲಿ ಗುರುಮಠಕಲ್ ಮುರುಘ ಶಾಂತವೀರ ಸ್ವಾಮೀಜಿ, ಹಿರಿಯೂರಿನ ಆದಿ ಜಾಂಭವ ಮಠದ ಷಡಾಕ್ಷರಿಮುನಿ ಮಹಾ ಸ್ವಾಮೀಜಿ, ಕಣಕುಪ್ಪಿ ಮುರುಗೇಶಪ್ಪ, ಲಂಬಿ ಮುರುಗೇಶ, ಕುದರಿ ಉಮೇಶ, ಚನ್ನಬಸವ ಶೀಲವಂತ್, ಮಹಾದೇವಮ್ಮ ಮಹಾಲಿಂಗೇಶ್ವರ, ಶಿವಬಸಮ್ಮ ವೀಣಾ ಮಂಜುನಾಥ, ಮಲ್ಲಿಕಾ ರ್ಜುನ್, ಜಯರಾಜ್, ಬಿ ಎಚ್‌ ವೀರಭದ್ರಪ್ಪ, ಮಲ್ಲಿಕಾರ್ಜುನ್, ಹನುಮಂತಪ್ಪ, ವಿರಕ್ತಮಠ ಶಾಲೆಯ ರೋಷನ್, ಬಕ್ಕೇಶ್ವರ ಶಾಲೆ ಶಿಕ್ಷಕರು, ಶರಣಬಸವ, ಕೀರ್ತಿ, ಕುಮಾರಸ್ವಾಮಿ, ಶ್ರೀಮಠದ ಭಕ್ತರು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...