ದಾವಣಗೆರೆ | ʼದೂಡಾ ಕಚೇರಿʼ ಉದ್ಘಾಟನೆ; ಆಹ್ವಾನ ನೀಡದ ಆಯುಕ್ತರಿಗೆ ಶಾಸಕ ಬಿ ಪಿ ಹರೀಶ್ ತರಾಟೆ

Date:

ʼದೂಡಾ ಕಚೇರಿʼ ಉದ್ಘಾಟನೆಗೆ ಆಹ್ವಾನ ನೀಡದ ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಹರಿಹರ ಶಾಸಕ ಬಿ ಪಿ ಹರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರಿಹರ ಪಟ್ಟಣದಲ್ಲಿ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಶಾಖಾ ಕಚೇರಿಯ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಕಾರ್ಯಕ್ರಮವಿತ್ತು. ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರು ದೂಡಾ ಕಚೇರಿ ಉದ್ಘಾಟನೆ ಕುರಿತಂತೆ ಸ್ಥಳೀಯ ಶಾಸಕ ಬಿ ಪಿ ಹರೀಶ್‌ಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ಹರಿಹರ ಶಾಸಕ ಬಿ ಪಿ ಹರೀಶ್ ತರಾಟೆಗೆ ತೆಗೆದುಕೊಂಡು ತೀವ್ರ ವಾಗ್ದಾಳಿ ನಡೆಸಿದರು.

ದೂಡಾ ಶಾಖಾ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹರೀಶ್ ಆಗಮಿಸುತ್ತಿದ್ದಂತೆ ಆಯುಕ್ತರು ಕಣ್ಣಿಗೆ ಬಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದುದರಿಂದ ಮೊದಲೇ ಸಿಟ್ಟಾಗಿದ್ದ ಶಾಸಕ ಬಿಪಿ ಹರೀಶ್, ಏರು ದನಿಯಲ್ಲೇ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಮಾತ್ರವಲ್ಲ, “ಕೇವಲ ಸಾಹುಕಾರರನ್ನು ಮೆಚ್ಚಿಸಲು ಬಂದಿದ್ದೀಯಾ, ಅವರನ್ನು ಮೆಚ್ಚಿಸಿದರೆ ಆಯ್ತಾ? ಪ್ರೋಟೋಕಾಲ್ ಪ್ರಕಾರ ನಡೆಸಬೇಕು ಎಂಬುದು ನೆನಪಿಲ್ಲವೇ? ನಾನೊಬ್ಬ ಕ್ಷೇತ್ರದಲ್ಲಿ ಎಂಎಲ್ಎ ಇರುವುದು ನಿನಗೆ ಗೊತ್ತಿಲ್ಲವೇ? ನನಗೆ ಸರಿಯಾಗಿ ಮಾತನಾಡಿ ಎಂದು ಹೇಳುತ್ತೀಯಾ? ಹೆಚ್ಚು ಮಾತನಾಡಿದರೆ ಸುಮ್ಮನಿರಲ್ಲ. ಏನು ಮುಖ ತೋರಿಸುತ್ತೀಯ ಹೋಗು ಆಚೆ” ಎಂಬಂತಹ ಇತ್ಯಾದಿ ಇತ್ಯಾದಿ ಮಾತುಗಳಿಂದ ಶಾಸಕ ಬಿ ಪಿ ಹರೀಶ್ ನಗರಸಭೆ ಆಯುಕ್ತರ ಮೇಲೆ ಕೆರಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಪ್ರತಿಯೊಂದಕ್ಕೆ ದೂಡಾ ಅಧ್ಯಕ್ಷರು ಫೋನ್ ಮಾಡಿದ್ದಾರೆ. ನೀನ್ ಏನ್ ಮಾಡಿದೆಯಾ? ಸರಿಯಾಗಿ ಮಾತನಾಡು ಎಂದು ನನಗೆ ಹೇಳ್ತೀಯಾ. ಮಾಡುವುದನ್ನು ಮಾಡಿ ಈಗ ಸರಿಯಾಗಿ ಮಾತನಾಡು ಎಂದು ಹೇಳುತ್ತೀಯಾ. ಸರ್ಕಾರಿ ಅಧಿಕಾರಿಗಳು ನೀವು ತಿಳಿದುಕೊಳ್ಳಬೇಕು. ಪ್ರತಿಯೊಂದು ಮಾಹಿತಿ ತಿಳಿಸುವಂತೆ ಈ ಹಿಂದೆಯೇ ಹೇಳಿದ್ದೇನೆ. ಯಾರ ಸೇವೆ ಮಾಡಲು ಬಂದಿದ್ದೀಯಾ. ಸಾಹುಕಾರರ ಸೇವೆ ಮಾಡಲು ಬಂದಿದ್ದೀಯಾ ಏನು? ಏನ್ ಆ ಕಡೆ ನೋಡ್ತೀಯಾ. ಏಯ್ ಹೋಗ್ ಆಕಡೆ ಮುಖ ತೋರಿಸಬೇಡ. ಮತ್ತೆ ಮಾತನಾಡಿದರೆ ಹುಷಾರು. ಗೌರವ ಬೇಡವೇ? ಇಲ್ಲಿ ಜಾಸ್ತಿಯಾಗಿದೆ. ನಾವು ಹೇಳಿದ್ದೇವೆಯಲ್ವಾ? ಎಲ್ಲಿದ್ದಾನೆ, ಎಲ್ಲಿ ಹೋಗಿದ್ದಾನೆ ಅವ್ನು” ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಸ್ಥಳದಲ್ಲಿಯೇ ಇದ್ದ ದೂಡ ಅಧ್ಯಕ್ಷ ದಿನೇಶ್ ಶೆಟ್ಟಿ ಶಾಸಕರನ್ನು ಸಮಾಧಾನ ಪಡಿಸಲು ಯತ್ನಿಸಿ ಕಚೇರಿಯೊಳಗೆ ಕರೆದುಕೊಂಡು ಹೋಗಲು ಯತ್ನಿಸಿದಾಗ, ಈ ವೇಳೆ ನಾವು ನಿಮಗೆ ಏನನ್ನೂ ಹೇಳುತ್ತಿಲ್ಲ. ದೂಡಾ ಅಧ್ಯಕ್ಷರೇ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂಬ ಆಹ್ವಾನ ನೀಡುತ್ತಾರೆ. ಆದರೆ ಪ್ರೋಟೋಕಾಲ್ ಪ್ರಕಾರ ಆಯುಕ್ತರಿಗೆ ಮಾತ್ರ ಶಾಸಕರು ಇರುವುದು ಗೊತ್ತಿಲ್ಲವಾ? ಸಾಹುಕಾರರನ್ನು ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡಿದರೆ ಹೇಗೆ? ಇಲ್ಲಿ ಏನೇನಾಗುತ್ತಿದೆ ಎಂಬುದು ನಿಮಗೆ ಗೊತ್ತಿಲ್ಲ ಎಂದು ಸಿಟ್ಟು ಹೊರಹಾಕಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರೈತರಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ: ಸಿಪಿಐಎಂ ಪಕ್ಷ ಆರೋಪ

ಆಗಿದ್ದೂ ಆಗಿ ಹೋಯ್ತು. ಬನ್ನಿ ಕಾರ್ಯಕ್ರಮಕ್ಕೆ ಎಂದು ದಿನೇಶ್ ಶೆಟ್ಟಿ ಹೇಳಿದಾಗ ಒಳಗೆ ಹೋದ ಶಾಸಕರು ಮತ್ತೆ ಹೊರಗೆ ಬಂದು ಮತ್ತೊಮ್ಮೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...