ರಾಜ್ಯದಲ್ಲಿರುವ ಅತಿ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಣವಾನಂದ ಸ್ವಾಮಿಗಳು ತಿಳಿಸಿದರು.
ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಪಕ್ಷಕ್ಕಾಗಿ ದುಡಿದ ನಮ್ಮ ಸಮಾಜದ ನಿಷ್ಟಾವಂತ ನಾಯಕರನ್ನು ಇಂದಿನ ನಾಯಕರು ಸ್ವಾರ್ಥಕ್ಕಾಗಿ ದೂರವಿಟ್ಟಿದ್ದಾರೆ. ಕೆ ಸಿ ಕೊಂಡಯ್ಯ, ಶಿವಮೂರ್ತಿ ನಾಯಕ್, ಜನಾರ್ಧನ ಪೂಜಾರಿಯವರಂತಹ ನಾಯಕರನ್ನು ಮೂಲೆಗುಂಪು ಮಾಡಿರುವುದರಿಂದ ನಮ್ಮ ಸಮಾಜಗಳು ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯಲು ಕಾರಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಜಗತ್ತಿನಲ್ಲಿ ಎಲ್ಲದಕ್ಕಿಂತ ʼಜ್ಞಾನʼದ ಮೌಲ್ಯ ಹೆಚ್ಚು: ಕುಲಸಚಿವ ಎ ಚೆನ್ನಪ್ಪ
“ಅತಿ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾದಿಂದ ಕೆಲವು ಹಕ್ಕೊತ್ತಾಯಗಳಿದ್ದು, ಸರ್ಕಾರ ಕಾಂತರಾಜ ವರದಿಯನ್ನು ಸ್ವೀಕರಿಸಿ ಕೂಡಲೇ ಜಾರಿಗೆ ತರಬೇಕು. ಅತಿ ಹಿಂದುಳಿದ ವರ್ಗಗಳ ಪ್ರತಿ ನಿಗಮಕ್ಕೆ ₹500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕೋಲಾರ ಕೌನ್ಸಿಲರ್ ಶ್ರೀನಿವಾಸ ಅವರ ಬರ್ಬರ ಹತ್ಯೆಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.





