ದಾವಣಗೆರೆ ವಿವಿ ಘಟಿಕೋತ್ಸವ; ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗೆ ಗೌರವ ಡಾಕ್ಟರೇಟ್

Date:

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಸಾಮಾಜಿಕ ಸೇವೆ, ಸಮಾಜದ ಕಳಕಳಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ, ಸೇವೆಗಳ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯವು 2025-26ನೇ ಸಾಲಿನ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಿಸಿದ್ದು, ಏಪ್ರಿಲ್ 2ರ ಬುಧವಾರ ನಡೆದ ಘಟಿಕೋತ್ಸವದಲ್ಲಿ ನಿರಂಜನಾನಂದಪುರಿ ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.

ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಹೆಚ್ಚು ಮೂಢನಂಬಿಕೆಗಳನ್ನು ಪರಿಪಾಲಿಸುವ ಸಮುದಾಯಗಳನ್ನು ಎಚ್ಚರಿಸಿ ಪ್ರಾಕೃತಗೊಳಿಸಿ ಜತೆಯಾಗಿ ಕರೆದುಕೊಂಡು ಹೋಗುವ ಮತ್ತು ಸಮಾಜಪರ ಚಿಂತನೆ ಮಾಡುವ ಕನಕ ಗುರುಪೀಠದ ನಿರಂಜನಾನಂದ ಶ್ರೀಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿರುವುದು ಸ್ವಾಗತಾರ್ಹ ಮತ್ತು ಇದು ಅಹಿಂದ ಸಮಾಜಕ್ಕೆ ನೀಡಿರುವ ಗೌರವ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಮೂಢನಂಬಿಕೆಗಳನ್ನು ಪರಿಪಾಲಿಸುವ ಸಮುದಾಯಗಳನ್ನು ಜಾಗೃತಗೊಳಿಸಿ ಜೊತೆಜೊತೆಯಾಗಿ ಕರೆದು ಒಟ್ಟಗೂಡಿಸುವ ಶ್ರಮ ಮತ್ತು ಅವರ ನಿರಂತರ ಸಮಾಜಪರ ಚಿಂತನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯವು ಅತ್ಯಂತ ಸೂಕ್ತ ತೀರ್ಮಾನ ತೆಗೆದುಕೊಂಡು ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರುಪೀಠ ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳಿಗೆ ನೀಡುತ್ತಿರುವ ಗೌರವ ಎಲ್ಲ ಅಹಿಂದ ವರ್ಗಕ್ಕೆ ನೀಡಿದ ಗೌರವವಾಗಿದೆ ಎನ್ನುವ ಹರ್ಷ ವ್ಯಕ್ತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಕನಕ ಗುರುಪೀಠ

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಆದಿಕೇಶವರಾಯನ ಪರಮ ಭಕ್ತನಾಗಿ ವಿಜಯನಗರ ಅರಸರ ದಂಡನಾಯಕನಾಗಿದ್ದ ತಿಮ್ಮಪ್ಪನಾಯಕ ನಂತರ ಅಧ್ಯಾತ್ಮ ಚಿಂತಕ, ಮಾನವಕುಲದ ಸಮಾನತೆ ಸಾರಿದ, ದಾಸ ಶ್ರೇಷ್ಠ ಕನಕದಾಸರಾಗಿ ಮರುಹುಟ್ಟು ಪಡೆದ ‘ಕನಕದಾಸ’ರ ಕರ್ಮಭೂಮಿಯಾದ ಕಾಗಿನೆಲೆ ಕನಕ ಗುರುಪೀಠದ ಎರಡನೆಯ ಶ್ರೀಗಳಾಗಿ ಸೇವೆ ಸಲ್ಲಿಸುತ್ತಿರುವವರು ನಿರಂಜನಾನಂದಪುರಿ ಶ್ರೀಗಳು.

ಕುಲಗುರು ಪರಂಪರೆಯಿದ್ದರೂ ಅನಕ್ಷರತೆ ಹೊದ್ದುಮಲಗಿದ್ದ ಹಾಗೂ ಅಲೆಮಾರಿ ವೃತ್ತಿಯಿಂದಾಗಿ ಪರಸ್ಪರ ಸಂಪರ್ಕವಿಲ್ಲದೇ, ಸಂಘಟಿತರಾಗದೇ ಬಡತನ, ದೌರ್ಜನ್ಯ ಅನುಭವಿಸುತ್ತಿರುವ ಸಮಾಜಕ್ಕೆ ಒಂದೆಡೆ ಸಂಘಟಿತರಾಗುವ ಅನಿವಾರ್ಯವಿತ್ತು.
ಇತ್ತೀಚೆಕಗೆ ಅಲ್ಪಸ್ವಲ್ಪ ಜಾಗೃತರಾದ ಸಮಾಜದ ಕೆಲವರು ಸಮಾಜಕ್ಕೊಂದು ಗುರುಪೀಠದ ಅವಶ್ಯಕತೆ ಮನಗಂಡು, ಹಿಂದುಳಿದ ಹಾಲುಮತ ಸಮಾಜವನ್ನು ಮೇಲೆತ್ತಲು, ಸಮಾಜದ ಒಗ್ಗೂಡಿಕೆಗಾಗಿ ಅವಿರತ ಶ್ರಮದಿಂದ ನಾಡಿನಾದ್ಯಂತ ಸಂಚರಿಸಿ ಜನಜಾಗೃತಗೊಳಿಸಿದ್ದು, ಸಮಾಜದ ಗುರುಪೀಠ ಸ್ಥಾಪನೆಗೆ ನಾಂದಿಯಾಯಿತು.

ದಾವಣಗೆರೆ ವಿವಿ 1

ಸಮಾಜಿಕ ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಬಹಳ ಹಿಂದಿರುವುದರಿಂದ ಮಠ ಮತ್ತು ಪೀಠಾಧಿಪತಿಯನ್ನು ನೇಮಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೂ ಸಮಾಜದ ಹಿರಿಯರ, ಅನೇಕ ನಾಯಕರ ಪರಿಶ್ರಮದಿಂದ ಕನಕ ಗುರುಪೀಠವನ್ನು ಕಾಗಿನೆಲೆಯಲ್ಲಿ ಸ್ಥಾಪಿಸಲಾಯಿತು.

ಕಾಗಿನೆಲೆ ಕನಕಗುರು ಪೀಠದ ಪ್ರಥಮ ಶ್ರೀಗಳಾಗಿ “ಶ್ರೀ ಬೀರೇಂದ್ರಕೇಶವ ತಾರಕಾನಂದಪುರಿಶ್ರೀ” ಗಳನ್ನು ಪೀಠಾಧಿಪತಿಯನ್ನಾಗಿಸಲಾಯಿತು. ಆವಾಗಿನಿಂದಲೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಜನಜಾಗೃತಿ ಕೆಲಸಕಾರ್ಯಗಳು ಸಾಗುತ್ತಾ ಬಂದಿವೆ.

ಕಾಗಿನೆಲೆ ಕನಕದಾಸರು

ಅವರ ಕಾಲಾಂತರದಲ್ಲಿ ಗುರು ಪೀಠಾಧಿಪತಿಯ ಅನ್ವೇಷಣೆಯಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳನ್ನು ಸಮಾಜ ಗುರುತಿಸಿ ಅವರನ್ನು ಕನಕಗುರುಪೀಠದ ಶ್ರೀಗಳನ್ನಾಗಿ ನೇಮಕಮಾಡಲಾಯಿತು. ಅಂದಿನಿಂದಲೇ ಶ್ರೀ ನಿರಂಜನಾನಂದಪುರಿ ಶ್ರೀಗಳು ಸಮಾಜದ ಒಳಿತಿಗಾಗಿ, ಅಭಿವೃದ್ದಿಗಾಗಿ, ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.‌ ಹಲವು ಅಡೆತಡೆಗಳಿಲ್ಲದೆ ಕುಗ್ಗದೆ ಕುರುಬರಲ್ಲದೇ ಇತರೆ ಹಿಂದುಳಿದ ದೀನದಲಿತ ಸಮಾಜಗಳ ಸಾಮಾಜಿಕ ಸುಧಾರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಪ್ರಕಟಿತ ಪುಸ್ತಕಗಳ ಬೆಳಕಿಗೆ ತರುವ ಕೆಲಸವಾಗಬೇಕು: ಶಾಸಕ ಎಚ್‌ ಆರ್ ಗವಿಯಪ್ಪ

ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿರುವ ಕುರಿತು ಕುರುಬ ಸಮಾಜದ ಮುಖಂಡ ಶ್ರೀನಿವಾಸ್ ನಂದಿಗಾವಿ ಮಾತನಾಡಿ, “ಶ್ರೀಗಳಿಗೆ ಗೌರವ ಡಾಕ್ಟರ್ ನೀಡಿರುವುದು ಇಡೀ ಸಮಾಜಕ್ಕೆ ಖುಷಿ ತಂದಿದೆ. ಶ್ರೀಗಳು ಹಿಂದುಳಿದಿದ್ದ ಕುರುಬ ಸಮುದಾಯವನ್ನು ಮುನ್ನೆಲೆಗೆ ತರುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಇಂದು ಕುರುಬರು ಸಮಾಜದಲ್ಲಿ ಅಲ್ಪಸ್ವಲ್ಪ ಗುರುತಿಸಿಕೊಳ್ಳಲು ಶ್ರೀಗಳ ಶ್ರಮ ದೊಡ್ಡದಿದೆ. ಇಡೀ ದೇಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದ, ಸಂಕಷ್ಟ ಸ್ಥಿತಿಯಲ್ಲಿದ್ದ, ಸಾಮಾಜಿಕವಾಗಿ ಹಿಂದುಳಿದಿದ್ದ ಕುರುಬ ಸಮಾಜವನ್ನು ಗುರುತಿಸುವಂತೆ ಮಾಡಿರುವ ಕಾರ್ಯದಲ್ಲಿ ಶ್ರೀಗಳ ಹೋರಾಟ, ಸಾಧನೆ ಗುರುತರವಾದದ್ದು. ಅವರಿಗೆ ನೀಡಿರುವ ಗೌರವ ಡಾಕ್ಟರೇಟ್ ಇಡೀ ಸಮಾಜಕ್ಕೆ ಸಂದ ಗೌರವವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...