ದಾವಣಗೆರೆ | ಮೂರು ಅಂಕಗಳಿಂದ ಯುಪಿಎಸ್‌ಸಿ ರ್‍ಯಾಂಕ್‌ ತಪ್ಪಿಸಿಕೊಂಡಿದ್ದ ಆಕಾಂಕ್ಷಿಗೆ 101ನೇ ರ್‍ಯಾಂಕ್‌

Date:

ಕಳೆದ ಬಾರಿ ಕೇವಲ ಮೂರು ಅಂಕಗಳಿಂದ ಯುಪಿಎಸ್‌ಸಿ ರ್‍ಯಾಂಕ್‌ ತಪ್ಪಿಸಿಕೊಂಡಿದ್ದ ಆಕಾಂಕ್ಷಿಯೊಬ್ಬರು ಈಬಾರಿ ನಿತ್ಯ ಅಭ್ಯಾಸದಿಂದ 101ನೇ ರ್‍ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ.

ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ ಅವರು  ಯುಪಿಎಸ್‌ಸಿ  ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸೌಭಾಗ್ಯ ಅವರು 101ನೇ ರ್‍ಯಾಂಕ್‌ ಪಡೆಯುವ ಮೂಲಕ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ನಿತ್ಯವೂ ಆರರಿಂದ ಏಳು ಗಂಟೆ ಓದುತ್ತಿದ್ದ, ಪರೀಕ್ಷೆ ಹತ್ತಿರ ಅಂದರೆ ಎರಡು ತಿಂಗಳು ಇದ್ದ ವೇಳೆ ದಿನಕ್ಕೆ 10ರಿಂದ 11 ಗಂಟೆ ಅಭ್ಯಾಸ ಮಾಡುತ್ತಿದ್ದ ಸೌಭಾಗ್ಯ ಬೀಳಗಿಮಠ, ಯುಪಿಎಸ್‌ಸಿ ಪರೀಕ್ಷೆ ಮೊದಲ ಬಾರಿ ಬರೆದಿದ್ದಾಗ ಕೇವಲ ಮೂರು ಅಂಕಗಳಿಂದ ವಂಚಿತಳಾಗಿದ್ದರು. ಆದ್ರೆ, ಈ ಬಾರಿ ಆ ರೀತಿ ಆಗಿಲ್ಲ. ಹೆಚ್ಚಿನ ಅಂಕಗಳೇ ಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಾವಣಗೆರೆ ನಗರದ ಆಂಜನೇಯ ಬಡಾವಣೆಯ ವಾಸಿಯಾದ ಶರಣಯ್ಯ ಸ್ವಾಮಿ ಹಾಗೂ ಶರಣಮ್ಮ ಅವರ ಪುತ್ರಿಯಾದ ಸೌಭಾಗ್ಯ ಎಸ್. ಬೀಳಗಿಮಠ ಅವರು, ರಾಜ್ಯಕ್ಕೆ 101ನೇ ರ್‍ಯಾಂಕ್‌ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ.

ತಂದೆ ಶರಣಯ್ಯ ಸ್ವಾಮಿ ಅವರು ನರ್ಸರಿ ನಡೆಸುತ್ತಿದ್ದರೆ, ತಾಯಿ ಶರಣಮ್ಮ ಗೃಹಿಣಿಯಾಗಿದ್ದಾರೆ. ಯಾವುದೇ ಕೋಚಿಂಗ್ ಸೆಂಟರ್ ಮೊರೆ ಹೋಗದೇ  ಸಾಧನೆ ಮಾಡಿರುವ ಸೌಭಾಗ್ಯ ಅವರಿಗೆ ಸ್ನೇಹಿತರು ಬಂಧುಗಳ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.

ದಾವಣಗೆರೆಯಲ್ಲಿ ಪಿಯುಸಿ ಓದಿದ್ದ ಸೌಭಾಗ್ಯ ಎಸ್. ಬೀಳಗಿಮಠ ಅವರು, 2018 ರಲ್ಲಿ ಪದವಿ ವ್ಯಾಸಂಗಕ್ಕೆ ಧಾರವಾಡಕ್ಕೆ ಹೋಗಿದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಅಗ್ರಿ ಪದವಿ ಪಡೆಯುತ್ತಿರುವ ಸೌಭಾಗ್ಯ ಎಸ್. ಬೀಳಗಿಮಠ ಅವರಿಗೆ ಯುಪಿಎಸ್ ಸಿ ಪರೀಕ್ಷೆ ತೇರ್ಗಡೆಯಾಗಬೇಕೆಂಬ ಕನಸಿತ್ತು.  ಇನ್ನು ಯಾವುದೇ ಐಎಎಸ್ ಕೋಚಿಂಗ್ ಸೆಂಟರ್ ಗೆ ಹೋಗದೇ ಕಷ್ಟಪಟ್ಟು ಈಗ 101ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಯಾವುದೇ ತರಬೇತಿ ಸಂಸ್ಥೆಗೆ ಹೋಗಿ ತರಬೇತಿ ಪಡೆಯದೆ ಪ್ರಾಧ್ಯಾಪಕಿಯೊಬ್ಬರ ಮನೆಯಲ್ಲೇ ಉಳಿದು ಅವರದೇ ಮಾರ್ಗದರ್ಶನದಲ್ಲಿ ಯಶಸ್ಸು ಕಂಡಿರುವುದು ವಿಶೇಷ. ಈಬಗ್ಗೆ ಪ್ರತಿಕ್ರಿಯಿಸಿರುವ ಸೌಭಾಗ್ಯ, ತನ್ನ ಈ ಸಾಧನೆ ಹಿಂದೆ ಡಾ. ಅಶ್ವಿನಿ ಅವರು ಇದ್ದಾರೆ. ಅವರ ಬಳಿಯೇ ಮಾರ್ಗದರ್ಶನ ಪಡೆದಿದ್ದೆ. ಅಪ್ಪ, ಅಮ್ಮ, ಸ್ನೇಹಿತರು ತುಂಬಾ ಸಹಕಾರ ನೀಡಿದರು ಎಂದಿದ್ದಾರೆ.

ಸೌಭಾಗ್ಯ ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿದ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರೂ ಸಹ ತನ್ನ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಅವರೇ ಹೇಳುವಂತೆ ಅವರು ಪರೀಕ್ಷೆಗೆ ಮುನ್ನ  6ರಿಂದ 7ಗಂಟೆ ಓದುತ್ತಿದ್ದರು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಕನಿಷ್ಠ ಎಂದರೂ 10 ರಿಂದ 11 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದರು. ಸತತ ಪರಿಶ್ರಮ, ನಿರಂತರ ಓದು ಈ ಸಾಧನೆಗೆ ಸಹಾಯವಾಯಿತು ಎನ್ನುತ್ತಾರೆ ಸೌಭಾಗ್ಯ ಎಸ್. ಬೀಳಗಿಮಠ.

ಇವರಿಗೆ ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಇತ್ತು. ಅದೇ ರೀತಿಯಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಪ್ರತಿನಿಧಿಸಿ ಸೈ ಎನಿಸಿಕೊಂಡವರು. ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಪುಸ್ತಕಗಳನ್ನು ತುಂಬಾ ಓದುವ ಗೀಳು ಹೊಂದಿದ್ದ ಸೌಭಾಗ್ಯ ಎಸ್. ಬೀಳಗಿಮಠ ಅವರು, ಕೇವಲ ಓದಿನಲ್ಲಿ ತಲ್ಲೀನರಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದರು. ಇವೆಲ್ಲಾ ಅಂಶಗಳು ಈ ಸಾಧನೆಗೆ ಕಾರಣ ಎಂದು ಹೇಳಿದ್ದಾರೆ.

ಅವರು ಅಂಕಗಳು ಎಷ್ಟು ಬಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 101 ನೇ ರ್ಯಾಂಕ್ ಬಂದಿರುವುದಷ್ಟೇ ಗೊತ್ತಾಗಿದೆ. ಯಾವ ಸೀಟ್ ಸಿಗುತ್ತೆ ಕಾದು ನೋಡಬೇಕಿದೆ. ಆ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...