ದಾವಣಗೆರೆ | 40 ಜನ ಅಭ್ಯರ್ಥಿಗಳು; ಗಮನ ಸೆಳೆದ ಹತ್ತು ರೂ. ನಾಣ್ಯಗಳ ಠೇವಣಿ

Date:

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಏಪ್ರಿಲ್ 19ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸೇರಿದಂತೆ 40 ಅಭ್ಯರ್ಥಿಗಳ 54 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಕಾಂಗ್ರೆಸ್‌ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ 3 ನಾಮಪತ್ರ, ಬಿಜೆಪಿ ಯಿಂದ ಜಿ.ಎಸ್. ಗಾಯತ್ರಿ 3 ನಾಮಪತ್ರ, ಜಿ.ಎಂ. ಸಿದ್ದೇಶ್ವರ ಬಿಜೆಪಿ 3 ನಾಮಪತ್ರ, ದೊಡ್ಡಶಿ ಎಚ್.ಎಸ್. ಜನಹಿತ ಪಕ್ಷ, ತಿಪ್ಪೇಸ್ವಾಮಿ ಕೆ.ಎ ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ 2 ನಾಮಪತ್ರ, ಶ್ರೀನಿವಾಸ್ ಎಂ.ಸಿ. ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ಕೆಆರ್‌ಎಸ್ ಪಕ್ಷದಿಂದ ಕೆ.ಎಸ್. ವೀರಭದ್ರಪ ಉಳಿದಂತೆ ಎಲ್ಲಾ ಪಕ್ಷೇತರರಾಗಿದ್ದು ವಿನಯ್‌ ಕುಮಾರ್ ಜಿ.ಬಿ ಎರಡು ನಾಮಪತ್ರ, ಪೆದ್ದಪ್ಪ ಎಸ್. ಇರ್ಪಾನುಲ್ಲಾ, ಪ್ರಸನ್ನ ಬಿ.ಆರ್. ಮೆಹಬೂಬ ಪಾಷ, ಬರ್ಕತ್ ಅಲಿಭಾಷ, ಗಾಯಿತ್ರಿ ಜಿ.ಎಂ.ಕೋಂ ಸಿದ್ದೇಶಿ, ಕರಣಂ ಕೊಟ್ರಪ್ಪ ನಾಮಪತ್ರ ಸಲ್ಲಿಸಿದವರು ಎಂದು ಮಾಹಿತಿ ನೀಡಿದರು.

ಇದುವರೆಗೆ ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ.12ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ  9 ನಾಮಪತ್ರಗಳು ಹಾಗೂ ವಿ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ.18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಹಾಗೂ ಕೊನೆ: ದಿನ ಏ.19 ರಂದು 14 ಅಭ್ಯರ್ಥಿಗಳಿಂದ 20 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಂಗ್ರೆಸ್‌ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ನಾಲ್ಕು ನಾಮಪತ್ರ, ಬಿಜೆಪಿಯಿಂದ ಜಿ.ಎಸ್.ಗಾಯಿತ್ರಿ 4. ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ 3, ಕೆಆರ್‌ಎಸ್ ಪಕ್ಷದ ರಾಘವೇಂದ್ರ ಜಿ.ಪಿ 2. ಸೋಷಿಯಲ್ ಯುನಿಟ ಸೆಂಟರ್ ಆಫ್ ಇಂಡಿಯಾ ಪಕ್ಷದಿಂದ ತಿಪ್ಪೇಸ್ವಾಮಿ ಕೆ.ಎ 3 ನಾಮಪತ್ರ, ಪಕ್ಷೇತರರಾಗಿ ವಿನಯ್ ಕುಮಾರ್ ಜಿ.ಬಿ. 4 ನಾಮಪತ್ರ ಸಲ್ಲಿಸಿದ್ದು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದವರಾಗಿದ್ದಾರೆ ಎಂದರು.

ಜನಹಿತ ಪಕ್ಷದ ದೊಡ್ಡಶಿ ಎಚ್.ಎಸ್ ಇವರು ಠೇವಣಿ ಹಣ ಭರಿಸಲು ರೂ.10 ಮುಖಬೆಲೆಯ ನಾಣ್ಯಗಳನ್ನು ತಂದಿದ್ದು ಗಮನ ಸೆಳೆಯಿತು. ಈಬಗ್ಗೆ ಅವರ ಆಪ್ತರಲ್ಲಿ ವಿಚಾರಿಸಿದಾಗ ಸಾರ್ವಜನಿಕರು 10 ಮುಖಬೆಲೆಯ ನಾಣ್ಯಗಳ ಚಲಾವಣೆಗೆ ನಿರಾಕರಿಸುತ್ತಿದ್ದಾರೆ. ಈ ತಪ್ಪು ತಿಳುವಳಿಕೆ ನಿಲ್ಲಿಸಲು ಮತ್ತು ಚಲಾವಣೆಯಲ್ಲಿವೆ ಎಂದು ತಿಳಿಸಲು ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಏಪ್ರಿಲ್ 20ರಂದು ಬೆಳಗ್ಗೆ 11ಗಂಟೆಯಿಂದ ಆರಂಭವಾಗಲಿದೆ. ನಂತರ ಉಮೇದುವಾರರ ಪಟ್ಟಿ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...