ದಾವಣಗೆರೆ | ಕುರಾನ್ ಬಗ್ಗೆ ಅವಹೇಳನಕಾರಿ ಭಾಷಣ; ಕ್ರಮಕ್ಕೆ ಆಗ್ರಹ

Date:

ದಾವಣಗೆರೆಯ ಹೊರವಲಯದ ಕರೂರು ಗ್ರಾಮದಲ್ಲಿರುವ ವಿಜ‌ನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕಳೆದ ಫೆ.17 ರಂದು ‘ಮಕ್ಕಳ ಪಾಲನೆಯಲ್ಲಿ ತಾಯಿಂದಿರ ಪಾತ್ರ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಮುಸ್ಲಿಂ ಹಾಗೂ ಕುರಾನ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಲಾಗಿದೆ. ಅಲ್ಲದೆ, ಕಾರ್ಯಕ್ರಮ ನಡೆದು ಮೂರು ದಿನಗಳ ನಂತರ ಖುರಾನನ್ನು ಸುಟ್ಟುಹಾಕಿದ್ದಾರೆ ಎಂದು ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ವಾಸೀಂ ಆರೋಪಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಘಟನೆ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದರೂ, ಪೊಲೀಸರು ಎಫ್‌ಐಆಆರ್ ದಾಖಲಿಸಿಲ್ಲ” ಎಂದು ದೂರಿದ್ದಾರೆ.

“ಶಾಲೆಯ ಆಡಳಿತ ಮಂಡಳಿಯ ಸಜ್ಜಾದ್ ಗೌಸ್, ನಸೀನ್, ಹಾಜೀರ ಹಾಗೂ ಇತರರು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಅಮಾಯಕ ಮುಸ್ಲಿಂ ಮಹಿಳೆಯರು ಸೇರಿದ್ದರು. ಕಾರ್ಯಕ್ರಮದಲ್ಲಿ ಹೈದರ್‌ಬಾದ್‌ನ ಅಯಲೇ ಅದೀಸ್ ಪಂಥದ ನೂರುದ್ದೀನ್ ಉಮೇರಿ ಎಂಬುವವರು ಪ್ರಚೋದನಕಾರಿ ಭಾಷಣ ಮಾಡಿಸಿದ್ದಾರೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೋಟ್ಯಾಂತರ ಮುಸ್ಲಿಂರು ಪಾಲಿಸುವ, ಅನುಸರಿಸುವ ಪವಿತ್ರ ಗ್ರಂಥವಾದ ಖುರಾನ್ ಅನ್ನು ಸುಡುವಂತೆ ಪ್ರಚೋದನೆ ನೀಡಿದ್ದು.. ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾದ್ಯಾಂತ ಹರಿದಾಡಿರುತ್ತವೆ. ಇದರಿಂದ ನಮಗೆ ಧಾರ್ಮಿಕ ನೋವುಂಟಾಗಿರುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಿಂದ ಪ್ರೇರಿತರಾದ ಗ್ಲೋಬಲ್ ಶಾಲೆಯವರು ತಮ್ಮ ಶಾಲೆಯಿಂದ ಸುನ್ನಿ ಪಂಗಡದವರು ಅನುಸರಿಸುವ ಖುರಾನ್ ಪ್ರತಿಗಳನ್ನು ತಮ್ಮ ಶಾಲೆಯಿಂದ ತೆಗೆದು ಸುಟ್ಟು ಚರಂಡಿಯಲ್ಲಿ ಹಾಕಿರುತ್ತಾರೆ. ಈ ಖುರಾನ್ ಪ್ರತಿಗಳನ್ನು ಸುಡಲು ಗ್ಲೋಬಲ್ ಶಾಲೆಯ ಅಸಾದುಲ್ಲಾ, ರಸೂಲ್ ಹಾಗು ಇತರೆಯವರು ಆದೇಶ ನೀಡಿರುವುದು ಹಾಗೂ ಸುಡಲು ಸಹಾಯ ಮಾಡಿರುವುದು ತಿಳಿದು ಬಂದಿರುತ್ತದೆ.

ಇಷ್ಟಾದರೂ ಅವರುಗಳ ಮೇಲೆ ಸೋಮೊಟೊ ದಾಖಲಿಸಿ, ತನಿಖೆ ಮಾಡಬೇಕಾದ ಪೊಲೀಸರು ಮೌನವಹಿಸಿರುತ್ತಾರೆ. ಈ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮುಸ್ಲಿಂಮರು ಸೇರಿ ಪ್ರತಿಭಟಿಸಲು ಮುಂದಾದಾಗ ನಾಮಕಾವಸ್ಥೆ ಪ್ರಕರಣವನ್ನು ದಾಖಲಿಸಿದ ಪೊಲೀಸರು ಅಮಾಯಕ ನೌಕರರನ್ನು ಬಂಧಿಸಿ, ಪ್ರಕರಣವನ್ನು ಮುಚ್ಚಿಹಾಕುವಂತೆ ಕಾಣುತ್ತದೆ ಎಂದು ಆರೋಪಿಸಿದರು.

ಞಷಪೊಲೀಸರು ಇದುವರೆಗೂ ಸಹ ಎರಡು ಶಾಲೆಯ ಸಿಸಿಟಿವಿ ಪುಟೇಜ್ ಸಾಕ್ಷಿಗಳನ್ನು ಸದರಿಯವರನ್ನು ಒಳಪಡಿಸದೇ, ಮಾಡದೆ. ಕಲೆ ಹಾಕದೇ. ವಿಚಾರಣೆಗೆ ಪರೋಕ್ಷವಾಗಿ ಈ ಪ್ರಕರಣದ ಸಾಕ್ಷಿ ನಾಶಮಾಡಲು ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ. ಈ ಕುರಿತು ಮಾ.1ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸಹ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳದಿದ್ದರೆ  ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಬ್ದುಲ್ ರಜಾಕ್, ಡಿ.ಕೆ. ನಯಾಜ್, ಸುಹೇಲ್ ಖಾನ್ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...