ಮಳೆ ಕೊರೆತೆಯಿಂದ ಅನ್ನದಾತ ತತ್ತರಿಸಿದ್ದಾರೆ. ಜಗಳೂರು ತಾಲೂಕಿನಲ್ಲಿ 90% ಬೆಳೆ ಹಾನಿಯಾಗಿದೆ. ಬರ ಸಮೀಕ್ಷೆ ನೆಡೆಸಿ ತಾಲೂಕನ್ನು ಶಾಶ್ವತ ಬರ ಪೀಡಿತವೆಂದು ಘೋಷಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜನ್ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಮಾಡುತ್ತೇವೆ ಎಂದು ಶಾಸಕ ಬಿ ದೇವೇಂದ್ರಪ್ಪ ಭರವಸೆ ನೀಡಿದ್ದಾರೆ.
ಜಗಳೂರು ತಾಲೂಕಿನ ಗೊಲ್ಲರಟ್ಟಿ, ಭರಮಸಮುದ್ರ, ಮುನ್ನೂರು, ಬಿಳಿಚೋಡು, ಸೊಕ್ಕೆ ಸೇರಿದಂತೆ ಹಳ್ಳಿಗಳಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ, ಅವರು ಮಾತನಾಡಿದರು. “ಜಗಳೂರು ತಾಲೂಕಿನಲ್ಲಿ 51% ಪ್ರದೇಶದಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ, ಸೂರ್ಯಕಾಂತಿ, ತೊಗರಿ ಹೀಗೆ ವಿವಿಧ ರೀತಿಯಾಗಿ ಬಿತ್ತನೆ ಮಾಡಲಾಗಿದೆ. ಅಲ್ಲದೆ, ಆಗಸ್ಟ್ ಅಂತ್ಯಕ್ಕೆ 57 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 15 ಮಿ.ಮೀ. ಮಳೆಯಾಗಿ 70% ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಬೆಳೆಗಳ ವಿವಿಧ ಬೆಳೆಗಳು ಸಂಪೂರ್ಣ ಒಣಗಿವೆ” ಎಂದು ತಿಳಿಸಿದ್ದಾರೆ.
“ನಮ್ಮ ರೈತರು ಹಾಕಿದ್ದ ಬಂಡವಾಳವೂ ಮರಳಿ ಬಾರರೆ, ಸಾಲವನ್ನು ಹೊತ್ತಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಮಳೆ ಇಲ್ಲದೆ ಆಕಾಶದತ್ತ ಮುಗಿಲು ನೋಡಿ ರೈತರು ವಿಚಲಿತರಾಗಿದ್ದಾರೆ. ಕೃಷಿ ತೋಟಗಾರಿಕೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿಬೇಕು. ತೀವ್ರ ಬರ ಪ್ರವೇಶವೆಂದು ಘೊಷಿಸಲು ಕ್ರಮ ಕೈಳ್ಳುವಂತೆ ಸಚಿವರ ಗಮನಕ್ಕೆ ತರಲಾಗುವುದು” ಎಂದರು.
ಸಮೀಕ್ಷೆ ಕಾರ್ಯದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟದಯ್ಯ. ಆರ್.ಐ ಧನಂಜಯ್,ಕೀರ್ತಿ, ಕೃಷಿ ಇಲಾಖೆ ಎ.ಡಿ.ಎ ಜೀವಿತಾ, ಪ್ರಸನ್ನ ಕುಮಾರ್, ವೆಂಕಟೇಶ್ ನಾಯ್ಕ
ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್, ಪಲ್ಲಾಗಟ್ಟಿ ಶೇಖರಪ್ಪ, ಮುಖಂಡರಾದ ಅನುಪ್ ರೆಡ್ಡಿ, ಜಗಳೂರು ಗೊಲ್ಲರಟ್ಟಿ ರಮೇಶ್,ಪ್ರಕಾಶ್ ರೆಡ್ಡಿ,ಹರೀಶ್ ಸೇರಿದಂತೆ ಅನೇಕರಿದ್ದರು.




