ದಾವಣಗೆರೆ | ನಾಲೆಯ ಗೇಟ್‌ನಲ್ಲಿ ನೀರಿನ ಅಭಾವ; ನೀರಾವರಿ ಇಲಾಖೆ ವಿರುದ್ಧ ರೈತರ ಆಕ್ರೋಶ

Date:

ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನಲ್ಲಿ ನಾಲೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ. ನಾಲೆಯ ಗೇಟ್‌ನಲ್ಲಿ ಐದು ಅಡಿ ನೀರಿದ್ದಲ್ಲಿ ಮಾತ್ರ ರೈತರ ಜಮೀನಿಗೆ ನೀರು ಹರಿಯಲು ಸಾಧ್ಯ. ಗೇಟ್‌ನಲ್ಲಿ ಕೇವಲ ಒಂದೂವರೆ ಅಡಿ ಮಾತ್ರ ನೀರಿದೆ. ಇದರಿಂದ ಯಾವ ತೋಟಗಳಿಗೂ ನೀರು ಹಾಯಿಸಲು ಸಾಧ್ಯವಿಲ್ಲ ಎಂದು ನಾಲೆಗಿಳಿದು‌ ದಾವಣಗೆರೆ ಜಿಲ್ಲೆಯ ರೈತರು ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಡಾ ಸಮಿತಿ ಅಧಿಕಾರಿಗಳ ಅವೈಜ್ಞಾನಿಕ ನಿಲುವು ವಿರುದ್ಧ ಬಸವಾಪಟ್ಟಣ ಉಪ ವಿಭಾಗದ ಮಲೇಬೆನ್ನೂರು ಭಾಗದ ನೂರಾರು ರೈತರು ಭದ್ರಾ ನಾಲೆಗೆ ಉಳಿದು ಪ್ರತಿಭಟಿಸಿದರು. ಭದ್ರಾ ನಾಲೆಯ 8 ಮತ್ತು 9 ನೇ ವಲಯದ ನಾಲೆಗಳಲ್ಲಿ ಸಮರ್ಪಕ ನೀರು ಹರಿಯದ ಕಾರಣ, ತೋಟಗಳಿಗೆ ನೀರು ಹಾಯಿಸುವ ನಾಲೆಗೆ ಇಳಿದು ಕಿಡಿಕಾರಿದರು.

ನೀರಾವರಿ ಇತಿಹಾಸದಲ್ಲಿಯೇ ನಾಲೆ ಗೇಟ್ ಬಂದ್ ಮಾಡಿರಲಿಲ್ಲ, ಅಧಿಕಾರಿಗಳ ತಪ್ಪು ನಿರ್ಧಾರದಿಂದ ಈ ಗೇಟ್‌ನಿಂದ ಮೂರು ದಿನ ಮಾತ್ರ ನೀರು ಹರಿಸಲು ಆದೇಶ ಮಾಡಲಾಗಿದೆ. ಮೂರು ದಿನಗಳಲ್ಲಿ ಕುಣಬೆಳಕೆರೆ, ಆದಾಪುರ, ಬೂದಿಹಾಳು, ನಿಟ್ಟೂರು, ನೆಹರೂ ನಗರ, ಕುಂಬಳೂರು, ಹರಳಹಳ್ಳಿ, ಬನ್ನಿಕೋಡು ಗ್ರಾಮಗಳ ಎರಡು ಸಾವಿರ ಎಕರೆ ಅಚ್ಚುಕಟ್ಟಿಗೆ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಮುಖ್ಯ ಗೇಟ್ ನಿಂದ ಎರಡು ನಾಲೆಗಳು ಮತ್ತು ಉಪನಾಲೆಗಳಿಗೆ ನೀರು ಹರಿಯಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಿನವಿಡೀ ಎರಡು ಎಕರೆಗೆ ನೀರು ಹರಿಸಲು ಆಗಿಲ್ಲ. ಶಿವಮೊಗ್ಗ, ಭದ್ರಾವತಿ ಭಾಗದ ರೈತರ ಹಿತ ಕಾಯುವ, ಸಚಿವ ಮಧು ಬಂಗಾರಪ್ಪರಿಗೆ ರೈತರ ಕಷ್ಟಗಳು ತಿಳಿದಿಲ್ಲ.ಅಧಿಕಾರಿಗಳು ಫೋನ್ ಸ್ವೀಕರಿಸಲ್ಲ, ಜಿಲ್ಲಾ ಮಂತ್ರಿಗಳು ಮನೆ ಹತ್ತಿರ ಹೋದರೂ ಮಾತನಾಡಿಸುವವರಿಲ್ಲ. ನಮ್ಮ ನೋವು ಯಾರ ಬಳಿ ಹೇಳಿಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಾದ ಮಂಜಣ್ಣ, ವೆಂಕಟನಾರಾಯಣ, ಬೆನ್ನೂರು ನಾಗರಾಜ್, ನಂದೀಶ್, ಸ್ವಾಮಿ, ಹರೀಶ್, ಕೃಷ್ಣಮೂರ್ತಿ, ಅಣ್ಣಪ್ಪ, ಚಕ್ರಧರ, ರೇವಣಪ್ಪ, ಶೇಷಗಿರಿ, ರುದ್ರೇಶ್, ಪ್ರಸಾದ್ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...