ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಕನ್ನಡ ಭಾರತಿ ವಿಭಾಗದಿಂದ ರಾಧ ಎಚ್. ಎಂ ಅವರಿಗೆ ಪಿಎಚ್.ಡಿ ಪದವಿ ಘೋಷಣೆ.
ಡಾ. ಪ್ರಕಾಶ ಬಿ. ಎನ್. ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜು ಇವರ ಮಾರ್ಗದರ್ಶನದಲ್ಲಿ ಸಂಶೋದಕಿ ರಾಧ ಎಚ್. ಎಂ ಅವರು “ಹೊನ್ನಾಳಿ ಸೀಮೆಯ ಕಥನ ಸಾಹಿತ್ಯ: ಸಾಂಸ್ಕೃತಿಕ ವಿನ್ಯಾಸಗಳು” ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಕ್ಕೆ ಸಲ್ಲಿಸಿದ್ದಾರೆ. ಈ ಮಹಾ ಪ್ರಬಂಧಕ್ಕೆ ಕುವೆಂಪು ವಿವಿ ಪಿಎಚ್.ಡಿ ಪದವಿಯನ್ನ ಘೋಷಣೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಹರಗನಹಳ್ಳಿ ಗ್ರಾಮದ ತಂದೆ ಮಹೇಶಪ್ಪ, ತಾಯಿ ರತ್ನಮ್ಮ ದಂಪತಿಗಳ ಮಗಳಾದ ರಾಧ ಎಚ್. ಎಂ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ಘೋಷಣೆ ಮಾಡಿದ್ದಕ್ಕೆ ತಂದೆ, ತಾಯಿ, ಪತಿ – ಶರಣಪ್ಪ ಸಂಗನಾಳ, ಸ್ನೇಹಿತರು, ಗುರುಗಳು, ಸಂಬಂಧಿಕರು ಹಾಗು ಊರಿನ ಗ್ರಾಮಸ್ಥರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.
ಸದ್ಯ ಹಾವೇರಿ ಪಟ್ಟಣದಲ್ಲಿ ವಾಸ ಮಾಡುತ್ತಿದ್ದಾರೆ.





