ದಾವಣಗೆರೆ | ಮದುವೆ ಸಂಭ್ರಮ; ಹತ್ತಕ್ಕೂ ಹೆಚ್ಚು ಮನೆಗಳ ಸರಣಿ ಕಳ್ಳತನ

Date:

ಮದುವೆ ಸಂಭ್ರಮದಲ್ಲಿ ಮುಳುಗಿದ್ದ ಜನರು ತಮ್ಮ ಮನೆಗಳಿಗೆ ಬೀಗಹಾಕಿ ಮದುವೆಗೆ ತೆರಳಿದ್ದ ವೇಳೆ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿರುವ ದುರ್ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಬಿಳಿಚೋಡು ಸಮೀಪದ ಮುಗಿದರಾಗಿಹಳ್ಳಿ ಗ್ರಾಮದ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು.‌ ಊರಿನವರು ಹಾಗೂ ಸಂಬಂಧಿಕರನ್ನು ಮದುವೆಗೆ ಆಹ್ವಾನಿಸಿದ್ದರು. ಗ್ರಾಮದ ಬಹಳಷ್ಟು ಕುಟುಂಬದವರು ತಮ್ಮ ಮನೆಗಳಿಗೆ ಬೀಗಹಾಕಿ ಕುಟುಂಬ ಸಮೇತರಾಗಿ ವಿವಾಹ ಸಮಾರಂಭಕ್ಕೆ ತೆರಳಿದ್ದರು.

ಇದೇ ಅವಕಾಶವನ್ನು ಬಳಸಿಕೊಂಡಿರುವ ಕಳ್ಳರು ಭಾನುವಾರ ಮುಂಜಾನೆ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಎಸಗಿದ್ದಾರೆ. ಮನೆಯಲ್ಲಿ ಇರುವಂಥ ಬಂಗಾರದ ಆಭರಣಗಳು, ಬೆಳ್ಳಿ ಒಡವೆಗಳು ನಗದು ದೋಚಿದ್ದಾರೆ ಹಾಗೂ ಹೆಣ್ಣುಮಕ್ಕಳು ಆಪತ್ಕಾಲಕ್ಕೆ ಹಣ ಕೂಡಿಡುವ ‘ದುಬ್ಬೇಗಡಿಗಿ’ಯನ್ನೂ ಹೊತ್ತುಕೊಂಡು ಅಪಹರಿಸಿದ್ದಾರೆ. ರಾಧಮ್ಮ, ಅನಿತಾ, ಅಂಜಿನಪ್ಪ, ಸುರೇಶ್, ಹನುಮಂತಪ್ಪ, ಚೌಡಮ್ಮ ಎನ್ನುವವರ ಮನೆಗಳು ಸೇರಿದಂತೆ ಒಟ್ಟು 11 ಮನೆಗಳನ್ನು ದೋಚಿದ್ದಾರೆ.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001616989
ಮನೆಯೊಂದರಲ್ಲಿ ಬೀರುವಿನ ಲಾಕರ್ ಒಡೆದು ಹಣ ಆಭರಣ ದೋಚಿರುವುದು

ಇದೇ ದಿನ ದಾವಣಗೆರೆ ತಾಲೂಕಿನ ಎಲೆ ಬೇತೂರು ಗ್ರಾಮದಲ್ಲಿ ಮದುವೆಗೆಂದು ಇಟ್ಟಿದ್ದ ಮದುಮಗಳ ಒಡವೆಗಳನ್ನು ಕದ್ದಿದ್ದಾರೆ. ಕಷ್ಟಪಟ್ಟು ಮಗಳ ಮದುವೆಗೆಂದು ಕೂಡಿಟ್ಟಿದ್ದ ಆಭರಣಗಳನ್ನು ಕಳೆದುಕೊಂಡ ತಂದೆ ತಾಯಿ ಕಣ್ಣೀರಿಟ್ಟಿದ್ದಾರೆ.

ಈಗ ಬಿಳಿಚೋಡು ಪೊಲೀಸ್ ಠಾಣೆ ಮತ್ತು ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ದೂರಿನ ಅನ್ವಯ ಪೊಲೀಸ್ ಇಲಾಖೆ ಕ್ರಮ ಕೈಗೊಂಡು, ಕಳ್ಳರ ಹೆಡೆಮುರಿ ಕಟ್ಟಲು ತನಿಖೆಗೆ ಇಳಿದಿದೆ. ಕುಟುಂಬಗಳಿಗೆ ಪರಿಹಾರ ಸಿಗುತ್ತ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತನ ಮನೆ ಬಾಗಿಲಿಗೆ ನೋಟೀಸ್, ರೈತ ಸಂಘ ಆಕ್ರೋಶ, ಫೈನಾನ್ಸ್ ಗೆ ಮುತ್ತಿಗೆ.

‘ಕಳ್ಳತನ ಮಾಡಿ ಓಡಿಹೋಗಿರುವ ಕಳ್ಳರನ್ನು ಪೊಲೀಸ್ ಇಲಾಖೆಯು ಹಿಡಿದು, ಕಳೆದುಕೊಂಡಿರುವಂತ ಆಭರಣಗಳು ಹಾಗೂ ನಗದು ಮರಳಿ ಕೊಡಿಸುವಂತಾಗಲಿ” ಎಂದು ಆಭರಣ ಕಳೆದುಕೊಂಡ ನೊಂದವರು ಅಳಲು ತೋಡಿಕೊಂಡಿದ್ದಾರೆ.

ವರದಿ: ಸಿಟಿಜನ್‌ ಜರ್ನಲಿಸ್ಟ್‌- ಅಜ್ಜಯ್ಯ ಮದಕರಿ, ಬಿಳಿಚೋಡು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...