ಬೀದರ್‌ | ಜಾಗತಿಕ ಮಟ್ಟದಲ್ಲಿ ಬಸವ ಚಿಂತನೆ ತಲುಪಿಸುವುದು ಇಂದಿನ ತುರ್ತು : ಆರ್.ಕೆ.ಹುಡುಗಿ

Date:

12ನೇ ಶತಮಾನದಿಂದ ಬಂದ ಬಸವ ದರ್ಶನ ಮುಂದಿನ ಸಾವಿರ ವರ್ಷಗಳ ನಂತರವೂ ಹೊಸದಾಗಿ ಕಾಣುತ್ತದೆ. ಬಸವ ಚಿಂತನೆಯನ್ನು ಜಾಗತಿಕ ನೆಲೆಗೆ ತಲುಪಿಸುವುದು ಇಂದಿನ ತುರ್ತು ಕಾರ್ಯವಾಗಿದೆ ಎಂದು ಚಿಂತಕ ಆರ್.ಕೆ.ಹುಡುಗಿ ಹೇಳಿದರು.

ಹುಲಸೂರ ಪಟ್ಟಣದ ಅಲ್ಲಮಪ್ರಭು ಮಠದ ಆವರಣದಲ್ಲಿ ಬಸವ ಜಯಂತಿ ಸಮಿತಿಯಿಂದ ಆಯೋಜಿಸಿದ್ದ ʼಬಸವ ಜಯಂತಿʼ ಸಮಾರಂಭದಲ್ಲಿ ಮಾತನಾಡಿ, “ಸರ್ವಸಮಾನತೆ, ಸ್ವಾಭಿಮಾನ, ಸ್ತ್ರೀ-ಸಮಾನತೆ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯೇ ಬಸವ ದರ್ಶನವಾಗಿದೆ” ಎಂದರು.

“ಶ್ರಮಿಕ ವರ್ಗಕ್ಕೆ ಅಕ್ಷರ ಕಲಿಸಿ, ಸ್ಥಾಪಿತ ತಾತ್ವಿಕ ಬುನಾದಿಗೆ ಪ್ರಶ್ನಿಸುವ ಮನೋಭಾವ ಹುಟ್ಟು ಹಾಕಿದ್ದಕ್ಕೆ ಕ್ರಾಂತಿ ನಡೆಯಿತು. ಒಂದು ಭುಜದ ಮೇಲೆ ಬುದ್ಧ, ಮತ್ತೊಂದು ಭುಜದ ಮೇಲೆ ಬಸವಣ್ಣ, ಎದೆಯೊಳಗೆ ಅಂಬೇಡ್ಕರ್‌ ಅವರನ್ನು ಇರಿಸಿಕೊಂಡು ಕಣ್ಣೊಳಗೆ ವೈಜ್ಞಾನಿಕ, ಸಮಾಜವಾದದ ಬೆಳಕಿನಲ್ಲಿ ನಾವೆಲ್ಲರೂ ಮುನ್ನಡೆಯಬೇಕು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಸವಣ್ಣ ಕ್ರಾಂತಿಕಾರಿ ಚಿಂತಕ ಮತ್ತು ಸಾಂಸ್ಕೃತಿಕ ನಾಯಕರಾಗಿದ್ದಾರೆ. ಜಗತ್ತಿನ ಎಲ್ಲ ಕ್ರಾಂತಿಗಳಿಗಿಂತ ಇದು ಏಕೆ ಭಿನ್ನವಾಗಿದೆ ಎಂದರೆ ದುಡಿಯುವ ಜನರಿಗೆ ಅಕ್ಷರ ಮತ್ತು ಅರಿವು ನೀಡಿದ ಚಳುವಳಿಯಾಗಿತ್ತು. ಬದುಕಿನ ಎಲ್ಲ ಕ್ಷೇತ್ರಗಳ ಬದಲಾವಣೆಗೆ ನಾಂದಿ ಹಾಡಿದ ಕ್ರಾಂತಿಯಾಗಿತ್ತು” ಎಂದು ವಿಶ್ಲೇಷಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಬಸವರಾಜ ಧನ್ನೂರ ಮಾತನಾಡಿ, “ಬಸವಾದಿ ಶರಣರು ಮೌಢ್ಯ, ಕಂದಾಚಾರ ವಿರೋಧಿಸಿದರು. ದೇವರ ಹೆಸರಿನಲ್ಲಿ ನಡೆಯುವ ಅನಿಷ್ಥ ಪದ್ಧತಿ ಹಾಗೂ ಶೋಷಣೆಯನ್ನು ಕಠೋರವಾಗಿ ಖಂಡಿಸಿದರು. ದೇವಾಲಯವನ್ನು ದೇಹಕ್ಕೆ ಸ್ಥಳಾಂತರಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಬಸವಾದಿ ಶರಣರು ಸಮ-ಸಮಾಜದ ಕನಸು ಹೊತ್ತು ಬದುಕಿನುದ್ದಕ್ಕೂ ಹೋರಾಡಿ ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸಿದರು” ಎಂದು ನುಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಿಸುವುದು ಬಸವಣ್ಣ ಹಾಗೂ ಸಮಕಾಲೀನ ಶರಣರ ಘನವಾದ ಆಶಯವಾಗಿತ್ತು. ಬಸವಾದಿ ಶರಣರ ಚಿಂತನೆಗಳು ಸರ್ವಕಾಲೀಕ ಸತ್ಯವಾಗಿವೆ” ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, “ಬಸವಣ್ಣನವರಿಂದ ನಮ್ಮ ನಾಡು ಜಗತ್ತಿಗೆ ಪರಿಚಿತವಾಗಿದೆ. ಶರಣರ ಚಿಂತನೆ ಮೈಗೂಡಿಸಿಕೊಂಡರೆ ಪ್ರತಿಯೊಬ್ಬರ ಬದುಕಿನಲ್ಲಿ ಅಗಾಧವಾದ ಬದಲಾವಣೆಯಾಗುತ್ತದೆ. ಲಿಂಗಾಯತ ಚಳವಳಿಗೆ ನಾನು ಸದಾ ಬೆಂಬಲಿಸುವೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?

ಸಮಾರಂಭದಲ್ಲಿ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ನೇತ್ರತ್ವ ವಹಿಸಿ ಮಾತನಾಡಿದರು. ಶರಣ ಶಿವಾನಂದ ಹೈಬತ್‌ಪುರೆ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಸದಸ್ಯ ಮಲ್ಲಿಕಾರ್ಜುನ ಧಬಾಲೆ, ಸುಧೀರ ಕಾಡಾದಿ, ಶಾಲುಬಾಯಿ ಬನಸೂಡೆ, ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಕಲಬುರ್ಗಿಯ ಧನರಾಜ ತಾಂಬೊಳೆ, ರೇಣುಕಾ ಸಿಂಗೆ ಗ್ರಾಪಂ ಉಪಾಧ್ಯಕ್ಷ ಸರಸ್ವತಿ ಬಾಬುರಾವ ಬಾಲಕುಂದೆ ಸೇರಿದಂತೆ ಪ್ರಮುಖರಾದ ಬಸವರಾಜ ಮುಕ್ತಾ, ಪ್ರವೀಣ ಕಾಡಾದಿ, ಶಿವರಾಜ ಖಪಲೆ, ಆಕಾಶ ಖಂಡಾಳೆ, ಸಚೀನ ಕವಟೆ, ಲೊಕೇಶ ಧಬಾಲೆ, ಶಿವರಾಜ ಚಾಕೋತೆ, ಸಚೀನ ವಗ್ಗೆ, ಲವೀತ ಧರಮಾಣೆ ಹಾಗೂ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...