ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

Date:

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ ನ್ಯಾಯಾಲಯಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಕಾಯ್ದೆಯ ವಿರುದ್ಧ ತೀರ್ಪು ನೀಡಿರುವುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಮನವಿ ರವಾನಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಮನಿತರ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಮೇಡಹಾಳ ಮುನಿಅಂಜಿನಪ್ಪ ಮಾತನಾಡಿ ದಲಿತರ ಪರವಾದ ಪಿ.ಟಿ.ಸಿ.ಎಲ್ ಕಾಯ್ದೆಯ ಮೂಲ ಉದ್ದೇಶದ ವಿರುದ್ಧವಾಗಿ ಮತ್ತು ಸಂವಿಧಾನ ಆಶಯಗಳ ವಿರುದ್ಧವಾಗಿ ತೀರ್ಪು ನೀಡುತ್ತಿದ್ದಾರೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳು ಭೂಮಿಯುನ್ನು ಕಳೆದುಕೊಂಡು ಮತ್ತೆ ಭೂರಹಿತರಾಗುವುವಂತೆ ಮಾಡಿ ದಲಿತರಿಗೆ ಮರಣ ಶಾಸನದ ತೀರ್ಪು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಚುನಾವಣೆ ಪೂರ್ವದಲ್ಲಿ ನುಡಿದಂತೆ ನಡೆದು ಮುಖಮಂತ್ರಿಗಳು ಕೊಟ್ಟ ಮಾತಿನಂತೆ ಘನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ದಲಿತರ ಭೂಮಿಗಳನ್ನು ರಕ್ಷಣೆ ಮಾಡುವ ಸದುದ್ದೇಶದಿಂದ 2023 ರಲ್ಲಿ ಘನ ರಾಜ್ಯ ಸರ್ಕಾರ ಪಿ.ಟಿ.ಸಿ.ಎಲ್ ಕಾಯ್ದೆ ಕಲಂ 5(1) ಸಿ ಕಾಲಮಿತಿ ಅನ್ವಯವಾಗುವುದಿಲ್ಲವೆಂದು ತಿದ್ದುಪಡಿ ತಂದು ತುಳಿತಕ್ಕೊಳಾಗದ ಸಮುದಾಯಕ್ಕೆ ಆಸರೆಯಾದ ಕಾಂಗ್ರೆಸ್ ಸರ್ಕಾರಕ್ಕೆ ಸಮುದಾಯದ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸರ್ಕಾರದ ಸದರಿ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳು ಅಧೀನ ನ್ಯಾಯಾಲಗಳಲ್ಲಿ ಹಾಗು ರಾಜ್ಯದ ಕಂದಾಯ ನ್ಯಾಯಾಲಯಗಲ್ಲಿ ನಡೆಯುತ್ತಿರುವ ದಾವೆಗಳಿಗೂ ಬಾಕಿ ಇರುವ ಎಲ್ಲಾ ಪ್ರಕರಣಗಳಿಗೂ ಅನ್ವಯವಾಗುವಂತೆ ತಿದ್ದುಪಡಿಯಾಗಿದರು ಸಹ ಇದರ ವಿರುದ್ಧವಾಗಿ ಉದ್ದೇಶ ಪೂರ್ವಕವಾಗಿ ಜಾತಿವಾದಿಗಳು ರಾಜ್ಯ ಸರ್ಕಾರದ ಪಿ.ಟಿ.ಸಿ.ಎಲ್. ಕಾಯ್ದೆಯ ಆಶಯದ ವಿರುದ್ಧವಾಗಿ ಕಾಲಮಿತಿ ಅನ್ವಯಿಸಿ ಮತ್ತು ಕಾರಣಗಳೇ ಇಲ್ಲದ ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಎಲ್ಲಾ ನ್ಯಾಯಾಲಯಗಳಲ್ಲಿ ಡಿಸಿ, ಎಸಿ, ಉಚ್ಚ ನ್ಯಾಯಾಲಯಗಳು ಸುಪ್ರೀಂಕೋರ್ಟಿನ ನ್ಯಾಯಾಲಯಗಳು ದಲಿತರ ವಿರುದ್ಧವಾಗಿ ದುರುದ್ದೇಶದಿಂದ ದಲಿತರ ವಿರುದ್ಧ ಬಲಾಡ್ಯರ ಕುತಂತ್ರಗಳಿಗೆ ಮಣೆ ಹಾಕಿ 2023 ರ ಪಿ.ಟಿ.ಸಿಎಲ್. ಕಾಯ್ದೆ ತಿದ್ದು ಪಡಿಯ ವಿರುದ್ಧವಾಗಿ ಹಾಗು ದಲಿತ ಸಮುದಾಯಗಳು ಭೂರಹಿತರಾಗಲು ಆದೇಶಗಳನ್ನೂ ಸದರಿ ನ್ಯಾಯಾಲಯಗಳು ಮಾಡುತ್ತಿವೆ ಎಂದು ಆರೋಪಿಸಿದರು

ನ್ಯಾಯಾಲಯಗಳಲ್ಲಿ ಸರ್ಕಾರದಿಂದ ಮಂಜೂರಾಗಿದ್ದರೂ ಸಹ (ಇನಾಂ, ಜಿಎಂಎಸ್, ಕನಿಷ್ಠ ಬೆಲೆ, ಮಾರುಕಟ್ಟೆ, ಬೆಲೆಗಿಂತ ಕಡಿಮೆ ಬೆಲೆ ನಿರ್ದಿಷ್ಟ ಬೆಲೆ ಇತ್ಯಾದಿ. ಭೂಮಿಗಳನ್ನು ಉದ್ದೇಶ ಪೂರ್ವಕವಾಗಿ ಕಾಯಂ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ವಜಾ ಮಾಡುತ್ತಿದ್ದಾರೆ. ಕಲಂ 311 ನಲ್ಲಿ ಎಲ್ಲಾ ಸರ್ಕಾರದಿಂದ ಮಂಜೂರಾದ ಜಮೀನುಗಳು ಎಂದು ಇದರೂ ಸಹ ನ್ಯಾಯಾಲಯಗಳು ಮರುದೋಷದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರಿಂದ ಎಲ್ಲಾ ಮಂಜೂರಾದ ಭೂಮಿಗಳ ಬಗ್ಗೆ ಸರಿಪಡಿಸಿ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ..? ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ 77ನೇ ಗಣರಾಜ್ಯೋತ್ಸವ ಆಚರಣೆ.

ಈ ಸಂದರ್ಭದಲ್ಲಿ ಮುಖಂಡರಾದ ಪಿಟಿಸಿಎಲ್ ಮಂಜುನಾಥ್, ಮಾಯಮ್ಮ, ರಾಘವೇಂದ್ರ, ರತ್ನಯ್ಯ, ಗಂಗುಲಪ್ಪ, ನಳನಿ, ವಿಜಯಲಕ್ಷ್ಮಿ, ಮುನಿರಾಜು, ಮೋಟಪ್ಪ, ಅಂಬರೀಶ್ ಮುಂತಾದವರು ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...