ಕೋಲಾರ: ನಗರದ ಹೊರವಲಯದ ಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದ್ದು ಏಪ್ರಿಲ್ 14 ರ ಅವರ ಜಯಂತಿ ದಿನದಂದೇ ಅನಾವರಣಗೊಳಿಸಲು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ನಚಕೇತನ ನಿಲಯದ ಆವರಣದಲ್ಲಿ ಸೋಮವಾರ ದಮನಿತರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮೇಡಹಾಳ ಮುನಿಅಂಜಿನಪ್ಪ ಮಾತನಾಡಿ ಅಂಬೇಡ್ಕರ್ ಪುತ್ಥಳಿ ದಲಿತ ಸಂಘಟನೆಗಳ ಬಹುದಿನ ಬೇಡಿಕೆಯಾಗಿದ್ದು ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಅವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ಅದು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿದ ನಂತರ ಸ್ಥಾಪಿಸಲು ಅನುಮತಿ ನೀಡಿದ್ದಾರೆ ಅವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಕೂಡಲೇ ಪೂರ್ವ ಸಿದ್ದತೆ ಮಾಡಿಕೊಂಡು ಏಪ್ರಿಲ್14 ರಂದು ಅನಾವರಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದರಕಾಸ್ತು ಸಮಿತಿ ಸದಸ್ಯ ಖಾದ್ರಿಪುರ ಬಾಬು ಮಾತನಾಡಿ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸಂವಿಧಾನವನ್ನು ಬರೆದು ಕೊಟ್ಟು ಭಾರತದ ಸಂವಿಧಾನಾತ್ಮಕ ಆಡಳಿತ ನಡೆಸಲು ಸಹಕಾರಿಯಾಗಿದ್ದಾರೆ ಅಭಿವೃದ್ಧಿ ಭಾರತ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಧೀಮಂತ ನಾಯಕರಾಗಿದ್ದು ಅವರ ಪುತ್ಥಳಿ ಅನಾವರಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ 50 ಲಕ್ಷ ಎಂಎಲ್ಸಿಗಳಾದ ಎಂ.ಎಲ್ ಅನಿಲ್ ಕುಮಾರ್ ಹಾಗೂ ನಸೀರ್ ಅಹಮದ್ ತಲಾ 12 ಲಕ್ಷ ಕೊಟ್ಟಿದ್ದಾರೆ ಅವರಿಗೆ ಸಂಘಟನೆಗಳ ಪರವಾಗಿ ಧನ್ಯವಾದಗಳು ಉಳಿಕೆದ್ದು ಸರ್ಕಾರದ ಅನುದಾನ ಬಳಸಿ ಕೂಡಲೇ ಪುತ್ಥಳಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ ತುಳಿತಕ್ಕೊಳಪಟ್ಟ ಶೋಷಿತರ ಸಮಾನತೆಯ ಸಮಬಾಳು ಸಮಪಾಲು ದೊರಕಿಸಿಕೊಟ್ಟಿದ್ದು ಹಾಗೂ ದೇಶಕ್ಕೆ ಅಪಾರ ಕೊಡುಗೆ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ಜಿಲ್ಲಾಡಳಿತ ಭವನದಲ್ಲಿ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರ ಮೂಲಕ ಸರ್ಕಾರಕ್ಕೆ ಅರ್ಜಿಸಿದ್ದು ಸರ್ಕಾರವು ಸ್ಪಂದಿಸಿದ್ದು ಕೂಡಲೇ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? 25000 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಐತಿಹಾಸಿಕ ಕ್ಷಣಕ್ಕೆ ಪಾತ್ರವಾದ ಚಿಕ್ಕಬಳ್ಳಾಪುರ
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಸೂಲೂರು ಅಂಜಿನಪ್ಪ, ಮುಖಂಡರಾದ ಡಿಪಿಎಸ್ ಮುನಿರಾಜು, ಬೈರಂಡಹಳ್ಳಿ ನಾಗೇಶ್, ಈನೆಲ ಈಜಲ ವೆಂಕಟಾಚಲಪತಿ, ಆರ್.ನಾರಾಯಣಪ್ಪ, ರಾಂಪುರ ಮುನಿರಾಜು, ಗದ್ದೆಕಣ್ಣೂರು ನಾರಾಯಣಪ್ಪ, ಶಿವಣ್ಣ, ಬೆಟ್ಟಹೊಸಪುರ ರವಿ, ನಾಗೇಂದ್ರ, ಕಲ್ಕರೆ ನಾರಾಯಣಸ್ವಾಮಿ, ಮೋಚಿಪಾಳ್ಳ ನಾಗೇಶ್, ಅಂಬೇಡ್ಕರ್ ನಗರ ರವಿ, ಮುಂತಾದವರು ಇದ್ದರು





