ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಕಡಿಗೇಡಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರನ್ನು ಗಡಿಪಾರು ಮಾಡಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಚಿಂಚೋಳಿಯಲ್ಲಿ ಪ್ರತಿಭಟನೆ ನಡೆಸಿರುವ ಒಕ್ಕೂಟ ಕಾರ್ಯಕರ್ತರು ಚಿಂಚೋಳಿ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಜನವರಿ 22ರಂದು ಕಲಬುರಗಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ವಿಕೃತ ಮನಸಿನ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ. ಆ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಂಬೇಡ್ಕರ್ ಪ್ರತಿಮೆಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಿವನಂದ ಮಾಲಿ ಪಾಟೀಲ್, ಅಂಬ್ರೇಶ್ ತೆಳಕೇರಿ, ಸಂತೋಷ ತೆಳಕೇರಿ, ಮೋಹನ್ ಐನಾಪೂರ, ಚಂದ್ರಕಾಂತ ಗಡಿನಿಂಗದಳ್ಳಿ, ಅಭಿಷೇಕ್ ಕಟ್ಟಿ, ಪಪ್ಪು ಮೇಲಕೆರಿ, ಪ್ರವೀಣ್ ನಂದಗಾಂವ್, ಸಚಿನ್ ಮೇಲಕೆರಿ, ಸಂತೋಷ್ ಮುದ್ನಾಳ್, ಗೋಪಾಲ್ ಎಂ.ಪಿ, ವೆಂಕಟ ಕಂದಗೂಳು ಇನ್ನಿತರರು ಉಪಸ್ಥಿತರಿದ್ದರು.




