77ನೇ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ದಾವಣಗೆರೆ ಜಿಲ್ಲೆ ಜಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕನ್ನಡ ಸಾಂಸ್ಕೃತಿಕ ಭವನದ ಧ್ವಜಾರೋಹಣ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿ ಭಾವಚಿತ್ರ ಇರಿಸದೇ ಅವಮಾನ ಮಾಡಲಾಗಿದೆ. ಇವರಿಗೆ ಅಂಬೇಡ್ಕರ್, ಗಾಂಧೀ ಎಂದರೆ ತಾತ್ಸಾರ ಮನೋಭಾವ ಯಾಕೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜಗಳೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಂಸ್ಕೃತಿಕ ಭವನದ ಮುಂದೆ 77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ದ್ವಜಾರೋಹಣ ಮಾಡಿದ್ದು ಶ್ಲಾಘನೀಯ. ಆದರೆ ಡಾ. ಬಿಆರ್ ಅಂಬೇಡ್ಕರ್, ಗಾಂಧೀಜಿಯಂತಹ ಮಹನೀಯರ ಪೋಟೋ ಇಡದೇ ಅಗೌರವ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಅಧ್ಯಕ್ಷೆ ಶಿಕ್ಷಕಿ ಗೀತಾಮಂಜುರವರಿಗೆ ಸಾಮಾನ್ಯ ಜ್ಘಾನವಿಲ್ಲವೇ? ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರ ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಭಾವಚಿತ್ರ ಇರಿಸದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನರೇಗಾ ಮರುಜಾರಿಗೆ ಒತ್ತಾಯಿಸಿ ಗ್ರಾಕೂಸ್ ನಿಂದ ಜಗಳೂರು ಶಾಸಕರಿಗೆ ಮನವಿ
ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚಿಸದೇ ಹೋಗಿದ್ದರೆ ಮಹಿಳೆಯರು ಶಿಕ್ಷಣ ಪಡೆಯುತ್ತಿರಲಿಲ್ಲ. ಮತದಾನದ ಹಕ್ಕು ವಂಚಿತವಾಗಿ ಕೇವಲ ಮನುಸ್ಮುತಿ ಹೇರಲ್ಪಟ್ಟ ನಂಬಿಕೆಗಳಿಗೆ ಬಲಿಯಾಗಿ ಅವಮಾನಗಳ ಮಧ್ಯೆ ಕಳೆದು ಹೋಗುತ್ತಿದ್ದರು. ಗಾಂಧೀಜಿಯವರು ರಾಷ್ಟ್ರ ಸ್ವಾತ್ರಂತ್ರ್ಯಕ್ಕಾಗಿ ಹೋರಾಟ ನಡೆಸದೆ ಹೋಗಿದ್ದರೆ ಸ್ವಾತ್ರಂತ್ರ್ಯ ನಮಗೆ ಸುಲಭವಾಗಿ ಸಿಗುತ್ತಿರಲಿಲ್ಲ. ಮಹಿಳೆಯರು ಸ್ವತಂತ್ರವಾಗಿ ಬದುಕಲು ಸಾದ್ಯವಾಗುತ್ತಿರಲಿಲ್ಲ ಎಂಬುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಜಗಳೂರು ತಾಲೂಕಿನ ಪ್ರಗತಿಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೀತಾ ಮಂಜು “ನಾನು ಬೆಳಗ್ಗೆ ಸಾಂಸ್ಕೃತಿಕ ಭವನಕ್ಕೆ ತೆರಳಿದಾಗ ಬೇರೆ ಯಾವುದೇ ಪದಾಧಿಕಾರಿಗಳು, ನೌಕರರು ಇರಲಿಲ್ಲ. ಭವನದ ಬಾಗಿಲು ತೆರೆದು ಒಳಗೆ ಹೋಗಿ ಫೋಟೋ ತಂದು ಇಡಲು ನನಗೆ ಧೈರ್ಯ ಸಾಲಲಿಲ್ಲ. ಈ ಹಿನ್ನೆಲೆಯಲ್ಲಿ ಈ ತಪ್ಪು ನಡೆದಿದೆ” ಎಂದು ಹೇಳಿದರು. ಆದರೆ ಚಿತ್ರದಲ್ಲಿ ಶೆಟರ್ ತೆರೆದಿರುವ ಚಿತ್ರ ಸ್ಪಷ್ಟವಾಗಿ ಕಾಣುತ್ತಿದೆ.