ದಾವಣಗೆರೆ | ಮಹಿಳೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿ ಎಐಎಂಎಸ್ಎಸ್ ಸಹಿ ಸಂಗ್ರಹ

Date:

ದೆಹಲಿಯ ದಶಕಗಳ ಹಿಂದೆ ದೆಹಲಿಯಲ್ಲಿ ನಡೆಯುತ್ತಾ ನಿರ್ಭಯ ಹತ್ತಿರ ಪ್ರಕರಣದ ದಿನವಾದ ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಇಂದು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ವಿರೋಧಿ ದಿನವಾಗಿ ಮಹಿಳೆಯರ ದೌರ್ಜನ್ಯ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯಿಸಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದು, ಇದರ ಭಾಗವಾಗಿ ದಾವಣಗೆರೆಯ ಪ್ರೌಢಶಾಲಾ ಮೈದಾನದ ಎದುರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಒತ್ತಾಯಿಸಿದರು.

ಎಐಎಂಎಸ್ಎಸ್ ನ (AIMSS) ಮಹಿಳಾ, ಮಕ್ಕಳ ದೌರ್ಜನ್ಯ ವಿರೋಧಿ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕುಕ್ಕವಾಡ ಮಾತನಾಡಿ,
“ಇಂದಿಗೂ ಕೂಡ ಪುರುಷರ ಅಧೀನದಲ್ಲಿ ಹೆಣ್ಣು ಇರಬೇಕು ಎನ್ನುವ ಅಲಿಖಿತ ಕಾನೂನನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಹೆಣ್ಣು ಬಾಲ್ಯಾವಸ್ಥೆಯಲ್ಲಿ ತಂದೆಯ ಆಶ್ರಯದಲ್ಲಿ, ಯೌವನಾವಸ್ಥೆಯಲ್ಲಿ ಗಂಡನ, ಮುಪ್ಪಿನ ಕಾಲದಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಇರಬೇಕು ಎನ್ನುವ ಸ್ತ್ರೀ ವಿರೋಧಿ ಕಾನೂನನ್ನು ಈ ಪುರುಷ ಪ್ರಧಾನ ಸಮಾಜ ಮೊದಲಿನಿಂದಲೂ ಸಮಾಜದ ಮೇಲೆ ಹೇರಿಕೊಂಡು ಬಂದಿದೆ. ಸಮಾಜದಲ್ಲಿ ಗಂಡು ಮಾತ್ರ ಶ್ರೇಷ್ಠ, ಹೆಣ್ಣು ನಿಕೃಷ್ಟ ಎನ್ನುವ ಮನಸ್ಥಿತಿ ಸಮಾಜದಲ್ಲಿ ನಿರ್ಮಿತವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

1003400874

“ಎಲ್ಲಿಯವರೆಗೂ ಈ ಸಮಾಜದಲ್ಲಿ ಗಂಡು ಹೆಣ್ಣಿಗೆ ಸರಿಸಮಾನಳು ಎನ್ನುವ ಸತ್ಯವನ್ನು ಪುರುಷ ಸಮಾಜ ಮತ್ತು ಪುರುಷ ಪ್ರಧಾನ ವ್ಯವಸ್ಥೆ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆ, ಅತ್ಯಾಚಾರದಂತಹ ಶೋಷಣೆಗಳು ನಡೆಯುತ್ತಲೇ ಇರುತ್ತವೆ. ಅಲ್ಲಿಯವರೆಗೂ ಕೂಡ ಈ ಸಮಾಜ ಮುಂದುವರೆದ ಸಮಾಜವಾಗಿ ಬದಲಾಗುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸ್ತ್ರೀಯರನ್ನು ಕನಿಷ್ಠ ಮತ್ತು ಎರಡನೇ ದರ್ಜೆಯ ಪ್ರಜೆಯಂತೆ ಕಾಣುವ ಪುರುಷ ಪ್ರಧಾನದ ವ್ಯವಸ್ಥೆಯಿಂದಾಗಿಯೇ ಹಿಂದು ಸಮಾಜದಲ್ಲಿ ಹಾಡುಹಗಲೇ ಅತ್ಯಾಚಾರ, ಕೊಲೆಯಂತ ಪ್ರಕರಣಗಳು ನಡೆಯುತ್ತಿವೆ. ಮೂರು ವರ್ಷದ ಎಳೆಗೂಸು, ಯುವತಿಯರ, ಮಹಿಳೆಯರು ಹಾಗೂ ಮುದುಕಿಯರನ್ನು ಕೂಡ ಬಿಡದೆ ಲೈಂಗಿಕ ದೌರ್ಜನ್ಯವನ್ನು ಎಸಗಲಾಗುತ್ತಿದೆ” ಎಂದು ಅಸಮಾಧಾನ, ಕಳವಳ ವ್ಯಕ್ತಪಡಿಸಿದರು.

“ಇತ್ತೀಚೆಗೆ ತಾನೇ ಹುಬ್ಬಳ್ಳಿಯಲ್ಲಿ ನಡೆದ ಯುವತಿ ಒಬ್ಬಳ ಕೊಲೆಯೊಂದನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಇದು ಪುರುಷ ಪ್ರಧಾನ ಸಮಾಜದ ಅತ್ಯಂತ ಅಪಾಯಕಾರಿ ಮನಸ್ಥಿತಿಯನ್ನು ತೋರಿಸುತ್ತದೆ. ಕೇವಲ ದಲಿತ ಯುವಕನೋರ್ವನನ್ನು ವಿವಾಹವಾದಳು ಎನ್ನುವ ಕಾರಣ ಮುಂದಿಟ್ಟುಕೊಂಡು ತನ್ನ ರಕ್ತವನ್ನೇ ಹಂಚಿಕೊಂಡು ಹುಟ್ಟಿದ ಮಗಳು, ಕರುಳು ಸಂಬಂಧಿ ಎನ್ನುವ ಕನಿಷ್ಠ ಕನಿಕರವೂ ಇಲ್ಲದೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಪುರುಷಪ್ರಧಾನ ವ್ಯವಸ್ಥೆಯ ಫಲವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಭಾರತಿ ಮಾತನಾಡಿ,
“ಡಿಸೆಂಬರ್ 29ರಂದು ದೆಹಲಿಯಲ್ಲಿ ನಿರ್ಭಯ ಎನ್ನುವ ಯುವತಿಯ ಅತ್ಯಾಚಾರ ನಡೆದು ಮೃತರಾದ ದಿನ ಇದಾಗಿದೆ. ಈ ರೀತಿಯ ಪ್ರಕರಣಗಳು ಮಹಿಳೆಯರಿಗೆ, ಸಮಾಜಕ್ಕೂ ಬರಬಾರದು ಎನ್ನುವ ಕಾರಣದಿಂದ ಈ ದಿನವನ್ನು ಮಹಿಳಾ ದೌರ್ಜನ್ಯ ವಿರೋಧಿ ಸಹಿಸಂಗ್ರಹ ಅಭಿಯಾನವನ್ನಾಗಿ ಮಾಡಿದ್ದೇವೆ. ಈ ರೀತಿಯ ಪ್ರಕರಣಗಳು ಮುಂದೆ ಜರುಗಬಾರದು ಎನ್ನುವ ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ.‌ ಯಾವ ಸರ್ಕಾರಗಳೂ ಕೂಡ ಗಂಭೀರವಾಗಿ ಮಹಿಳೆಯರ ದೌರ್ಜನ್ಯಗಳನ್ನು ಅತ್ಯಾಚಾರಗಳನ್ನು ಪರಿಗಣಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ತಂದೆ, ಸಹೋದರ, ಚಿಕ್ಕಪ್ಪ, ಸ್ನೇಹಿತರಂತಹ ಸಂಬಂಧಿಗಳಿದಲೇ ಈ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ. ಕನಿಷ್ಠ ಮಾನವೀಯತೆಯ ಸಂಬಂಧಗಳನ್ನು ಕಡೆಗಣಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

1003400879

“ಇಂದು ಬಹುಪಾಲು ಮೊಬೈಲ್ ಆಪ್ ಗಳಲ್ಲಿ ಅಶ್ಲೀಲ ವಿಡಿಯೋಗಳು ಬಿತ್ತರವಾಗುತ್ತವೆ.‌ ಜಾಹೀರಾತಿನ ನೆಪದಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಲಾಗುತ್ತಿದೆ. ಇವುಗಳಿಂದಾಗಿ ಯುವಕರ, ಹರೆಯದವರ ಮನಸ್ಥಿತಿ ಹಾಳಾಗುತ್ತಿದ್ದು, ಇವುಗಳು ಬಹುಪಾಲು ಮಹಿಳಾ ದೌರ್ಜನ್ಯಕ್ಕೆ, ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇವುಗಳನ್ನು ಪರಿಣಾಮಕಾರಿಯಾಗಿ ತಡೆಯಲು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ಮತ್ತು ಇತರ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶೂದ್ರರಿಗೆ ಗೌರವ ಸ್ಥಾನಮಾನ ಸಿಗಲು ಅಂಬೇಡ್ಕರ್ ಕಾರಣ:ಐಜಿಪಿ ಡಾ.ಬಿಆರ್ ರವಿಕಾಂತೇಗೌಡ

ಸಹಿ ಸಂಗ್ರಹ ಅಭಿಯಾನದಲ್ಲಿ AIMSS ಜಿಲ್ಲಾ ಅಧ್ಯಕ್ಷರು ರಶ್ಮಿ ಕುಕ್ಕುವಾಡ, ಕಾರ್ಯದರ್ಶಿ ಭಾರತಿ, ಉಪಾಧ್ಯಕ್ಷರು ಬನಶ್ರೀ, ಮಮತ, ಕವಿತ. ಉಪಸ್ಥಿತರಿದ್ದರು. ಸಾವಿರಾರು ಜನ ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದರು.‌

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...