ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿಜೆಐ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆದಿರುವ ವಕೀಲನ ಕೃತ್ಯವನ್ನು ಖಂಡಿಸಿ ಕರ್ನಾಟಕ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ, ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್‌ನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ ಎಂ ಅವರಿಗೆ ಮನವಿ ಸಲ್ಲಿಸಿತು.
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಧೀಶರಾದ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಸಂವಿಧಾನ ಮತ್ತು ಆಡಳಿತಾತ್ಮಕ ಕಾನೂನಿನಲ್ಲಿ ವ್ಯಾಪಕ ಅನುಭವವನ್ನು ಗವಾಯಿಯವರು ಹೊಂದಿದ್ದಾರೆ. ಬುದ್ದ, ಅಂಬೇಡ್ಕರ್ ಹಾಗೂ ಅವರ ತಂದೆಯವರಿಂದ ಸ್ಪೂರ್ತಿಗೊಂಡು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅಂತಹವರ ಮೇಲೆ ಧಾರ್ಮಿಕ ಮೂಲಭೂತವಾದಿಗಳು, ಮನುವಾದಿಗಳು ಶೂ ಎಸೆದಿದ್ದಾರೆ. ಈ ಕೃತ್ಯವನ್ನು ಕರ್ನಾಟಕ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಶೂ ಎಸೆದಿರುವ ವಿಚಾರ ಸಂವಿಧಾನಕ್ಕೆ ಹಾಗೂ ಈ ನೆಲದ ಕಾನೂನಿಗೆ ಮಾಡಿದಂತಹ ಹೇಯಕೃತ್ಯ. ವಕೀಲನನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಮಾಳ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ, ಸ್ಥಳೀಯ ಆಡಳಿತದ ದೌರ್ಜನ್ಯ ಆರೋಪ
ಮನವಿ ಸಲ್ಲಿಸಿದ ವೇಳೆ ಲಿಂಗರಾಜ ಎಂ ಗಾಂಧಿನಗರ, ರಾಕೇಶ್ ಕಕ್ಕರಗೊಳ್ಳ, ಪ್ರವೀಣ್ ಕಕ್ಕರಗೊಳ್ಳ, ನಾಗೇಶಣ್ಣ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.





