ದಾವಣಗೆರೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ 6ನೇ ವರ್ಷದ ಕೋರೆಗಾಂವ್ ಸಂಭ್ರಮಾಚರಣೆಯನ್ನು 2026ರ ಜನವರಿ 01ರ ಗುರುವಾರ, ಬೆಳಿಗ್ಗೆ 11-30ಕ್ಕೆ ದಾವಣಗೆರೆ ಬೂದಾಳ್ ರಿಂಗ್ ರೋಡ್ ವೃತ್ತದಲ್ಲಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು “ಕೋರೆಗಾಂವ್ ಯುದ್ಧವು ಭಾರತದಲ್ಲಿರುವ ಜಾತಿವ್ಯವಸ್ಥೆಯಲ್ಲಿ ನಲುಗಿಹೋದ ಶೋಷಿತ ಸಮುದಾಯ ಶೌರ್ಯದಿಂದ ಗೆದ್ದ ಮಹಾನ್ ಹೋರಾಟವೇ ಎನ್ನಬಹುದು. 1818 ಜನವರಿ 1 ರಂದು ನಡೆದ ಆ ಯುದ್ದವು ಇಂದಿಗೂ ಮನುವಾದಿಗಳ ಮತ್ತು ಶೋಷಿತ ಸಮುದಾಯುದ ನಡುವೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿಯು ಕೂಡ ಮುಂದುವರೆಯುತ್ತಲೇ ಇದೆ. ಆದರೆ ಅಂದು ನಡೆದ ಯುದ್ದವು ನಮ್ಮೆಲ್ಲರ ಸ್ವಾಭಿಮಾನ, ಸಮಾನ ಹಕ್ಕುಗಳ ಬದುಕಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿ ಶೌರ್ಯದಿಂದ ಮನುವಾದಿಗಳ ಸೊಲ್ಲಡಗಿಸಿದ ಮಹಾರಾಷ್ಟ್ರದ 500 ಮಹರ್ ಸೇನಾನಿಗಳು ಜಾತೀಯತೆ, ವರ್ಣಾಶ್ರಮ ಪದ್ದತಿ, ಅಸಮಾನತೆಯ ಪ್ರತಿಪಾದಕ 2ನೇ ಬಾಜೀರಾವ ಪೇಶ್ವೆಯ 28000 ಸುಸಜ್ಜಿತ ಸೇನೆಯ ನಡುವೆ ನಡೆದ ಯುದ್ದವಾಗಿದೆ” ಎಂದು ಸ್ಮರಿಸಿದರು.
“ಯುದ್ದದ ಹಿರಿಮೆ ಮತ್ತು ಕುರುಹುಗಳನ್ನು ಪೂನಾ ನಗರ ಪಕ್ಕದಲ್ಲಿ ಹರಿಯುವ ಭೀಮಾ ನದಿಯ ದಂಡೆಯ ಮೇಲೆ ನಿರ್ಮಿಸಿರುವ 72 ಅಡಿ ಸ್ತೂಪದ ಮೇಲೆ ಕೆತ್ತಲಾಗಿದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದರ ಫಲವಾಗಿ ಮುಂದುವರೆದು ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ನೀತಿಯು ಜಾರಿಗೆ ಬಂತು ಕೇವಲ ಸಂಸ್ಕೃತದಲ್ಲಿ ನೀಡುತ್ತಿದ್ದ ಶಿಕ್ಷಣವನ್ನು ಧಿಕ್ಕರಿಸಿ ಮೊದಲ ಬಾರಿಗೆ ಮಹಾತ್ಮ ಜೋತಿ ಬಾ ಪುಲೆಯವರು ಮೆಟ್ರಿಕ್ಯೂಲೇಷನ್ ನಲ್ಲಿ ಉತ್ತೀರ್ಣರಾದ ಮೊದಲಿಗರು. ನಂತರ ಸಾವಿತ್ರಿ ಬಾ ಪುಲೆ ಇವರ ಸಾರಥ್ಯದಲ್ಲಿ ಮಹಿಳೆಯರಿಗೆ ಶಾಲೆ ಪ್ರಾರಂಭಿಸಿದರು” ಎಂದು ತಿಳಿಸಿದರು.
“ಇದು ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಬಾಲ್ಯದಲ್ಲಿ ಶಿಕ್ಷಣ ದೊರೆಯಲು ಒಂದು ಪ್ರೇರಣೆ, ಉನ್ನತ ಶಿಕ್ಷಣ ಪಡೆಯಲು ಕಾರಣವಾಯಿತು. ಮತ್ತು ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗ್ರಂಥಾಲಯದ ಒಂದು ಪುಸ್ತಕದಲ್ಲಿ 1818ರ ಕೋರೆಗಾಂವ್ ಯುದ್ಧದ ಕುರುವು ಸಿಕ್ಕತು. ಅದರ ಇತಿಹಾಸವನ್ನು ಸಂಶೋಧಿಸಿದ ಅಂಬೇಡ್ಕರ್ ಕುರುಹುಗಳ ಮೂಲಕ ಇದನ್ನು ದಾಖಲಿಸಿ, ಆಚರಿಸಿದರು. ಅಂದಿನಿಂದ ಇಂದಿನವರೆಗೂ ಭೀಮಾ ಕೋರೆಗಾಂವ್ ಅವಿಸ್ಮರಣೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ದಲಿತ ಮುಖಂಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಕ್ರಮಕ್ಕೆ ಆಗ್ರಹ
ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಮಿತಿಯ ಆಶ್ಫಾಕ್, ಸತೀಶ್ ಅರವಿಂದ್, ಪವಿತ್ರ, ಆದಿಲ್ ಖಾನ್, ಜಾಫರ್, ಚಂದ್ರು, ಬಸಣ್ಣ ಸಮೀರ್, ಯಲ್ಲಪ್ಪ, ಶಿವು, ಶಿವಕುಮಾರ್, ಹನುಮಂತಪ್ಪ, ರಾಮಾಂಜನೇಯ, ಬಾಷಾ, ಮಲ್ಲಪ್ಪ ಇನ್ನೂ ಮುಂತಾದವರು ಭಾಗವಹಿಸಿದ್ದರು.





