ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಯ ಮುಂಭಾಗ ದಸಂಸ ಮುಖಂಡರು, ವಿದ್ಯಾರ್ಥಿಗಳು ಸೇರಿ ನವೆಂಬರ್ 26 ರ ಸಂವಿಧಾನದ ದಿನಾಚರಣೆಯನ್ನು ಆಚರಿಸಲಾಯಿತು.
ಅನೇಕ ಹೋರಾಟಗಾರರ ತ್ಯಾಗದ ಫಲವಾಗಿ ದೇಶ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಗಳಿಸಿದರೂ ದೇಶ ಮುನ್ನಡೆಸಲು ಅಗತ್ಯವಿದ್ದುದು ಕಾನೂನು, ನೀತಿ ನಿರೂಪಣೆಗಳ ಸಂವಿಧಾನ. ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರರ ನೇತೃತ್ವದಲ್ಲಿ ಸತತ ಮೂರ್ನಾಲ್ಕು ವರ್ಷಗಳ ಅಧ್ಯಯನ ಹಾಗೂ ಶ್ರಮದಿಂದ ರಚಿಸಿದ ಸಂವಿಧಾನವನ್ನು ಲೋಕಸಭೆಯಲ್ಲಿ 1949ನವೆಂಬರ್ 26ರಂದು ಮಂಡಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಈ ದಿನ ನಾವು ಅಲ್ಪ ಸ್ವಲ್ಪ ಗೌರವದ, ಸ್ವಾವಲಂಬನೆ ಬದುಕು ಸಾಗಿಸಲು ಸಂವಿಧಾನವೇ ಮುಖ್ಯ ಕಾರಣ ದಸಂಸ ಮುಖಂಡರು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆಭರಣ ತಯಾರಕನ ಚಿನ್ನ ದೋಚಿದ ಆರೋಪ: ಪೊಲೀಸರು ಸೇರಿ ಏಳು ಜನ ವಶಕ್ಕೆ ದಾವಣಗೆರೆ | ಆಭರಣ ತಯಾರಕನ ಚಿನ್ನ ದೋಚಿದ ಆರೋಪ: ಪೊಲೀಸರು ಸೇರಿ ಏಳು ಜನ ವಶಕ್ಕೆ
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಜೈ ಭೀಮ್, ಜೈ ಸಂವಿಧಾನ ಎನ್ನುವ ಘೋಷಣೆ ಮೊಳಗಿಸಿದರು.
ಡಿ ಎಸ್ ಎಸ್ ಹೋರಾಟಗಾರ ಚಿರಂಜೀವಿ, ಬಿ ಹಿರೇಗಂಗೂರು, ರಾಜಪ್ಪ , ತಿಮ್ಮಪ್ಪ , ದೀಕ್ಷಾ, ಧನುಷ್, ಚಂದನ ,ರಂಜಿತ, ಬೈರೇಶ, ಅಂಕಿತಾ, ಶ್ರಾವಣಿ, ಸೃಷ್ಟಿ, ಮತ್ತು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು….





