ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಂಡಳಿ ಕರೆಯ ಮೇರೆಗೆ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ದಲಿತ, ಆದಿವಾಸಿ ಮತ್ತು ಮಹಿಳೆಯರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ದಾವಣಗೆರೆ ಜಿಲ್ಲಾ ಮಂಡಳಿ ಪ್ರತಿಭಟನೆ ನಡೆಸಿತು.
ದಾವಣಗೆರೆ ನಗರದ ಜಯದೇವ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ದಲಿತರ ಆದಿವಾಸಿಗಳ ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಅಖಿಲ ಭಾರತ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ “ಭಾರತದ ಇತಿಹಾಸದಲ್ಲಿ ಶತಶತಮಾನಗಳಿಂದಲೂ ದಬ್ಬಾಳಿಕೆ ,ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ ,ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ಈ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ. ಬದಲಿಗೆ ಇಂದಿಗೂ ಕೂಡ ಅವುಗಳು ಅವ್ಯಾಹತವಾಗಿ ಮುಂದುವರಿಯುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಭಾರತದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮೃತಿಯ ಆಧಾರದಲ್ಲಿ ಅಂದರೆ, ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠ ಎಂದು ವಿಭಜಿಸಿದೆ, ಆಳುವ ಸರ್ಕಾರಗಳು ಪರೋಕ್ಷವಾಗಿ ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿದ್ದು, ಇದನ್ನು ಆಳುವ ಸರ್ಕಾರಗಳು ಕೈ ಬಿಟ್ಟು ಸಂವಿಧಾನಬದ್ಧವಾಗಿ ಎಲ್ಲರಿಗೂ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ರೈತರ ಭೂಮಿಯೂ ಕಬಳಿಕೆ, ಆರೋಗ್ಯವೂ ಹಾಳು ಚಿತ್ರದುರ್ಗ | ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ರೈತರ ಭೂಮಿಯೂ ಕಬಳಿಕೆ, ಆರೋಗ್ಯವೂ ಹಾಳು
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಮುಖಂಡರುಗಳಾದ ಪಿ ಷಣ್ಮುಖ ಸ್ವಾಮಿ, ಐರಣಿ ಚಂದ್ರು, ಕೆ ಬಾನಪ್ಪ, ಸಿದ್ದಲಿಂಗೇಶ್, ಶೇಖರ ನಾಯಕ, ನರೇಗಾ ರಂಗನಾಥ್, ಕೆರನಹಳ್ಳಿ ರಾಜು, ಬೆಳಗೆರೆ ರುದ್ರಮ್ಮ, ಏ ತಿಪ್ಪೇಶ್, ಜಿ ಎಲ್ಲಪ್ಪ, ಸರೋಜಾ, ಕೆ ಜಿ ಶಿವಮೂರ್ತಿ, ಚಿನ್ನಪ್ಪ, ರಮೇಶ್ ಸಿ ದಾಸರ್, ಹರ್ಷ, ಗದಿಗೇಶ ಪಾಳೇದ, ಹೆಚ್ಎಸ್ ಚಂದ್ರು, ಜಯಪ್ಪ, ಮಹೇಶ್, ನಾಗಮ್ಮ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





