ದಾವಣಗೆರೆ ಜಿಲ್ಲಾ ಚಿಲ್ಲರೆ ಮೊಬೈಲ್ ಮಾರಾಟಗಾರರ ಸಂಘ, ಸಗಟು ಮಾರಾಟಗಾರರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ನ.23ರಂದು ನಗರದ ಬಿಐಇಟಿ ಕಾಲೇಜು ಮೈದಾನದಲ್ಲಿ 2ನೇ ವರ್ಷದ ದಾವಣಗೆರೆ ಮೊಬೈಲ್ ಪ್ರೀಮಿಯರ್ ಲೀಗ್-2025 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಇದರ ಅಂಗವಾಗಿ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಬೈಕ್ ರ್ಯಾಲಿಗೆ ದಾವಣಗೆರೆ ಮೊಬೈಲ್ ಮಾರಾಟಗಾರರ ಸಂಘದ ಕಾರ್ಯದರ್ಶಿ ಸಂತೋಷ ಕುಮಾರ್ ಓ ಎಸ್, ಉಪಾಧ್ಯಕ್ಷರ ಶ್ರೀನಿವಾಸ ಪಿಸಾಳೆ ಚಾಲನೆ ನೀಡಿದರು.

ಬೈಕ್ ರ್ಯಾಲಿಯು ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಪಿಬಿ ರಸ್ತೆ, ಎ ವಿ ಕೆ ಕಾಲೇಜ್ ರಸ್ತೆ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ಸರ್ಕಲ್, ಡೆಂಟಲ್ ಕಾಲೇಜ್ ರಸ್ತೆ, ವಿದ್ಯಾನಗರ, ಹದಡಿ ರಸ್ತೆ ಮೂಲಕ ಸಾಗಿ ವಿದ್ಯಾರ್ಥಿಭವನ, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತಕ್ಕೆ ಬಂದು ಸಮಾರೋಪಗೊಂಡಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಲು ಹರಿಹರ ಕನ್ನಡಪರ ಸಂಘಟನೆಗಳ ಆಗ್ರಹhttp://ದಾವಣಗೆರೆ | ರಾಜ್ಯೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಲು ಹರಿಹರ ಕನ್ನಡಪರ ಸಂಘಟನೆಗಳ ಆಗ್ರಹ
ಈ ವೇಳೆ ಸಂಘದ ಖಜಾಂಚಿ ಕಿರಣ್, ರವಿನಾರಾಯಣ, ಶ್ಯಾಮ್ ಸುಂದರ್ ತುಳಸಿಯಾನ್, ಮಲ್ಲಿಕಾರ್ಜುನ ಸ್ವಾಮಿ, ರಾಹುಲ್ ಪವಾರ್, ಅರವಿಂದ, ಗಣೇಶ್ ರಮೇಶ್, ಅಮಿತ್ ಸೇರಿದಂತೆ ಮೊಬೈಲ್ ಮಾರಾಟಗಾರರ ಸಂಘದ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.





