ದೆಹಲಿ ಸ್ಫೋಟದಲ್ಲಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ದಾವಣಗೆರೆ ನಗರ ಮತ್ತು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ. ಪ್ರೇಕ್ಷಣೀಯ ಸ್ಥಳಗಳು, ಪ್ರಮುಖ ಜನಸಂದಣಿ ಸ್ಥಳಗಳಾದ ರೈಲ್ವೇ ಸ್ಟೇಷನ್, KSRTC ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಎ ಎಸ್ ಸಿ (anti-sabotage check) ಹಾಗೂ ಶ್ವಾನದಳ ತಂಡಗಳು ತಪಾಸಣೆ ನಡೆಸಿ ಪರಿಶೀಲಿಸಿರುತ್ತಾರೆ.

ದೆಹಲಿ ಸ್ಪೋಟದ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು, ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಸೂಚನೆಯಂತೆ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಬಂದೋಬಸ್ತ್ ಕೈಗೊಂಡಿದ್ದಾರೆ.

ದಾವಣಗೆರೆ ನಗರದಲ್ಲಿ ಪ್ರಮುಖ ಜನಸಂದಣಿ ಸ್ಥಳಗಳಾದ ರೈಲ್ವೇ ಸ್ಟೇಷನ್, KSRTC ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಗಾಜಿನ ಮನೆ, ಹಾಗೂ ಹರಿಹರದ ಶ್ರೀ ಹರಿಹರೇಶ್ವರ ದೇವಾಸ್ಥಾನ, ರೈಲ್ವೇ ನಿಲ್ದಾಣ, KSRTC ಬಸ್ ನಿಲ್ದಾಣ, ಗುತ್ತೂರು ಪವರ್ ಹೌಸ್, ಹೊನ್ನಾಳಿಯಲ್ಲಿನ ತುಂಗಾಭದ್ರಾ ನದಿ ಸೇತುವೆ, KSRTC ಬಸ್ ನಿಲ್ದಾಣ, ಕೋರ್ಟ್, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ, KSRTC ಬಸ್ ನಿಲ್ದಾಣ, ಕೋರ್ಟ್, ಸಂತೆಬೆನ್ನೂರು ಪುಷ್ಕರಣಿ ಸೇರಿದಂತೆ ಇತರೆ ಜಿಲ್ಲೆಯಾದ್ಯಂತ ಜನಸಂದಣಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರತ್ಯೇಕ ತಂಡಗಳಾಗಿ ASC(anti-sabotage check) ತಂಡಗಳು ಹಾಗೂ ಶ್ವಾನದಳ ತಂಡಗಳು ತಪಾಸಣೆ ನಡೆಸಿ ಪರಿಶೀಲಿಸಿರುತ್ತಾರೆ. ಬಾಂಬ್ ಪತ್ತೆ, ಅಪಾಯಕಾರಿ ಸ್ಫೋಟಕ ಪತ್ತೆ ಹಚ್ಚಿ ಸುರಕ್ಷತೆ ಕಾಪಾಡಲು ನುರಿತ ತಜ್ಞರ ತಂಡ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು






