ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮತ್ತು ಪದಾಧಿಕಾರಿಗಳ ಚುನಾವಣೆ ನಡೆಯುತ್ತಿದ್ದು, ದಾವಣಗೆರೆಯಲ್ಲಿಯೂ ಜಿಲ್ಲಾ ಘಟಕದ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಸಂಜೆ ನಾಲ್ಕರಿಂದ ನಡೆದ ಮತ ಎಣಿಕೆಯ ಫಲಿತಾಂಶ ರಾತ್ರಿ 10.30ಕ್ಕೆ ಘೋಷಣೆಯಾಗಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ 15 ಕಾರ್ಯಕಾರಿ ಸಮಿತಿಯ ನಿರ್ದೇಶಕರ 25 ಜನರ ತಂಡ ಆಯ್ಕೆಯಾಗಿದೆ.
ನವೆಂಬರ್ 9 ರಂದು ಬೆಳಿಗ್ಗೆ 9:00 ರಿಂದ ಸಂಜೆ ಮೂರರವರೆಗೆ ಜಿಲ್ಲಾ ವಾರ್ತಾ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಚುನಾವಣೆಗೆ ಮೂರು ತಂಡಗಳಲ್ಲಿ ಒಟ್ಟು 55 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ಒಂದು ಅಧ್ಯಕ್ಷ ಸ್ಥಾನಕ್ಕೆ 3 ಅಭ್ಯರ್ಥಿಗಳು, ಮೂರು ಉಪಾಧ್ಯಕ್ಷ ಸ್ಥಾನಕ್ಕೆ 7 ಅಭ್ಯರ್ಥಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 3, ಖಜಾಂಚಿ ಸ್ಥಾನಕ್ಕೆ 2, ಮೂರು ಕಾರ್ಯದರ್ಶಿ ಸ್ಥಾನಕ್ಕೆ 7, ರಾಜ್ಯ ಸಮಿತಿ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ 2 ಅಭ್ಯರ್ಥಿಗಳು ಸೇರಿದಂತೆ 15 ಕಾರ್ಯಕಾರಿ ಸದಸ್ಯರ ಸ್ಥಾನಕ್ಕೆ 31 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2025ರಲ್ಲಿ ಮತದಾನಕ್ಕೆ ಅರ್ಹವಿದ್ದ 37 ಮಹಿಳೆಯರು ಸೇರಿದಂತೆ ಪತ್ರಕರ್ತರ ಸಂಘದಲ್ಲಿ 356 ಒಟ್ಟು ಮತಗಳಿದ್ದವು. ಚಲಾವಣೆಯಾದವುಗಳಲ್ಲಿ 306 ಮತಗಳು ಸಿಂಧುವಾಗಿದ್ದವು.
ಅಧ್ಯಕ್ಷರಾಗಿ ಮಂಜುನಾಥ್ ಎಂ ಏಕಬೋಟೆ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ, ಸುಭಾನ್ ಖಾನ್, ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬದರಿನಾಥ್, ಖಜಾಂಚಿಯಾಗಿ ವೀರೇಶ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಂದ್ರಪ್ಪ, ಕಾರ್ಯದರ್ಶಿಗಳಾಗಿ ಆಂಜನೇಯ, ವೇದಮೂರ್ತಿ, ಮುದ್ದಯ್ಯ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತರ ಸಾಗುವಳಿ ಭೂಮಿಯ ಅತಿಕ್ರಮಣ; ಅಂದನೂರಿನಲ್ಲಿ ದಲಿತ ಶೋಷಣೆಯ ಮತ್ತೊಂದು ಮಗ್ಗುಲು
15 ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ಚಿದಾನಂದ್ , ಜೈಮುನಿ, ಸುರೇಶ್ ಕುಣೆಬೆಳೆಕೆರೆ, ಪ್ರವೀಣ್, ಕಿರಣ್, ಮಂಜುನಾಥ್ ಕಾಡಜ್ಜಿ, ರಾಘವೇಂದ್ರರಾವ್, ವಿಷ್ಣುಕುಮಾರ್, ವಿಶ್ವನಾಥ್
ಮೈಲಾಳ್, ರಘುಪ್ರಸಾದ್, ಏಕಾಂತಪ್ಪ, ಚನ್ನಬಸಪ್ಪ, ಅಣ್ಣಪ್ಪ, ಚನ್ನಬಸವ ಎಂ ಎಸ್
ಆಯ್ಕೆಯಾಗಿದ್ದಾರೆ. 37 ಮಹಿಳಾ ಸದಸ್ಯರಿರುವ ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿರ್ದೇಶಕರಾಗಿ ಶ್ರೀಮತಿ ಭಾರತಿ ಆಯ್ಕೆಯಾದ ಏಕ ಮಾತ್ರ ಮಹಿಳೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ಕಬ್ಬೂರು ಕಾರ್ಯ ನಿರ್ವಹಿಸಿದ್ದರು.





