“ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ರೈತರು ಮತ್ತು ಕಾರ್ಮಿಕರು ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೀದಿ ಹೋರಾಟ ಮುಕ್ತಗೊಳಿಸಲು ರೈತ, ಕಾರ್ಮಿಕರು ಅಧಿಕಾರಕ್ಕೆ ಬರಬೇಕು” ಎಂದು ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲೂಕು ಸಮ್ಮೇಳನದಲ್ಲಿ ಕಾರ್ಮಿಕ ಮುಖಂಡ ಆವರಗೆರೆ ಚಂದ್ರು ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ, ಭಾರತ ಕಮ್ಯುನಿಸ್ಟ್ ಪಕ್ಷದ ಚನ್ನಗಿರಿ ತಾಲೂಕು 2ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು “ಆಳುವ ಸರ್ಕಾರಗಳು ಬಂಡವಾಳಶಾಹಿ ವ್ಯವಸ್ಥೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ, ದುಡಿಯುವ ವರ್ಗದ ಜನರನ್ನು ಕಡೆಗಣಿಸುತ್ತಿದ್ದಾರೆ, ರೈತರು ಮತ್ತು ಕಾರ್ಮಿಕಪರ ಹೋರಾಟಗಳ ಬೀದಿ ಹೋರಾಟಕ್ಕೆ ಮುಕ್ತಿ ಹಾಡಲು ರೈತ ಕಾರ್ಮಿಕರು ಅಧಿಕಾರಕ್ಕೆ ಬರಬೇಕು” ಎಂದು ಆಶಯ ವ್ಯಕ್ತಪಡಿಸಿದರು.

“ಆದ್ದರಿಂದ ಭಾರತ ಕಮ್ಯುನಿಸ್ಟ್ ಪಕ್ಷದ ಅಂತಿಮ ಗುರಿ ರಾಜಕೀಯ ಅಧಿಕಾರ ಹಿಡಿಯುವುದಾಗಿದೆ. ಎಲ್ಲರೂ ಕಮ್ಯುನಿಸ್ಟ್ ಪಕ್ಷವನ್ನು ಬಲಪಡಿಸುವುದರೊಂದಿಗೆ ಆಶಯ ಭಾವನೆಯೊಂದಿಗೆ ಮುನ್ನಡೆಯೋಣ” ಎಂದರು.
ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್ ಮಾತನಾಡಿ “ಪಕ್ಷದ ಎಲ್ಲಾ ಸಾಮೂಹಿಕ ಸಂಘಟನೆಗಳನ್ನು ಬಲಪಡಿಸುವುದರೊಂದಿಗೆ ಪಕ್ಷವನ್ನು ವಿಸ್ತರಿಸೋಣ. ಇದಕ್ಕಾಗಿ ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು” ಎಂದರು.

ಸಮ್ಮೇಳನದ ಧ್ವಜಾರೋಹಣವನ್ನು ಹಿರಿಯ ಮುಖಂಡರಾದ ಉಬೇದುಲ್ಲ, ಜಿ ಯಲ್ಲಪ್ಪ ನೆರವೇರಿಸಿದರು. ಇಪ್ಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಷಣ್ಮುಖಸ್ವಾಮಿ, ಜಗಲೂರು ತಾಲೂಕು ಸಿಪಿಐ ತಾಲೂಕು ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ ಸೇರಿದಂತೆ ಇತರರು ಮಾತನಾಡಿದರು. ಹಿರಿಯ ಕಾರ್ಮಿಕ ಮುಖಂಡರಾದ ಹನುಮಂತರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಐರಣಿ ಚಂದ್ರು ಮತ್ತು ಗೆಳೆಯರು ಜಾಗೃತಿ ಗೀತೆಗಳನ್ನು ಹಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭೂಮಿ,ವಸತಿ ರಹಿತರ ಬಗರ್ ಹುಕುಂ ಮಂಜೂರಾತಿಗಾಗಿ ನವೆಂಬರ್ 26ಕ್ಕೆ ಬೆಂಗಳೂರು ಚಲೋ
ಸಮ್ಮೇಳನದಲ್ಲಿ ಪಿ ಎಸ್ ಮಧು, ಜೈನುಲ್ಲಾ ಖಾನ್, ಮಂಜುಳಾ, ಸೈಯದ್ ಮುನಾವರ್,ಸೈಯದ್ ಗೌಸ್ ಪೀರ್,ಮಹಮದ್ ರಫೀಕ್,ಕಲೀಂ ಖಾನ್,ಕಲಿಗಾರ್ ರಫಿವುಲ್ಲಾ,ಕಾಂ ಲೋಕೇಶ್,ಸೈಯದ್ ಇಲಿಯಾಜ್, ಎಂ ಡಿ ರಫೀಕ್,ಕೆರನಹಳ್ಳಿ ರಾಜು,ಎ ತಿಪ್ಪೇಶ್,ಬೆಳಲಗೆರೆ ರುದ್ರಮ್ಮ, ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜಾ, ರಂಗಸ್ವಾಮಿ, ಹೆಚ್ ಎಸ್ ಚಂದ್ರು,ದಾದಾಪೀರ್,ಕೆ ಬಾನಪ್ಪ,ಲೋಕಿಕೆರೆ ರುದ್ರೇಶ್ ಭಾಗವಹಿಸಿದ್ದರು.





