ದಾವಣಗೆರೆ | ಅಂತರ್ಜಾತಿ ವಿವಾಹ ಅಂದು ಕಲ್ಯಾಣ ಕ್ರಾಂತಿಗೆ ಇಂದು ಮರ್ಯಾದಾ ಹತ್ಯೆಗೆ ದಾರಿ: ಎಚ್ಎಲ್ ಪುಷ್ಪ

Date:

“ಒಂದು ಅಂತರ್ಜಾತಿಯ ವಿವಾಹ 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣವಾದಂತೆ ಇಂದು ಅದೇ ಅಂತರ್ಜಾತಿ ವಿವಾಹಗಳು ಮರ್ಯಾದಾ ಹತ್ಯೆಗೆ ದಾರಿಯಾಗುತ್ತಿವೆ. ಹೀಗಿರುವಾಗ ನಾವು ಕಾಲ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾಗಿದೆಯೇ ಎಂದು ಪ್ರಶ್ನಿಸಿಕೊಳ್ಳುವ ಸ್ಥಿತಿ ಇದೆ. ಇಂದು ಕೂಡ ಮಹಿಳೆಯರನ್ನು ಹತ್ತಿಕ್ಕುವ ಸನ್ನಿವೇಶವನ್ನು ಇದೆ.‌ ಹಿಂದೆ ಹೆಣ್ಣನ್ನು ಸಂಪತ್ತು, ಲೈಂಗಿಕ ಆಸ್ತಿ ಎನ್ನುವ ರೀತಿ ಬರೆಯುತ್ತಿದ್ದ ಕಾಲವಿತ್ತು.‌ ಇತ್ತೀಚಿಗೆ ನನ್ನ ದೇಹ ನನ್ನ ಹಕ್ಕು ಎನ್ನುವ ಚರ್ಚೆ ಪ್ರಾರಂಭವಾಗಿದೆ. ಹೆಣ್ಣು ತಾನು ಹೇಗಿದ್ದಾಳೋ ಹಾಗೆಯೇ ತೋರಿಸಿಕೊಳ್ಳುವ ಕಾಲ, ಅದನ್ನು ಸಮಾಜ ಸ್ವೀಕರಿಸುವ ಮನಸ್ಥಿತಿ ಬಂದಾಗ ಮಾತ್ರ ಹೆಣ್ಣಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ದೊರಕಲಿದೆ” ಎಂದು ದಾವಣಗೆರೆಯ ಕಾರ್ಯಕ್ರಮದಲ್ಲಿ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್ ಎಲ್ ಪುಷ್ಪ ಅಭಿಪ್ರಾಯಪಟ್ಟರು.

1003151060
ಕಾರ್ಯಕ್ರಮದಲ್ಲಿ ಲೇಖಕಿ, ಎಚ್ ಎಲ್ ಪುಷ್ಪ

ಬೇರು, ಚಿಗುರು-ಕನ್ನಡ ಸಾಹಿತ್ಯ ಸಂಶೋಧನಾ ವಿಚಾರ ವೇದಿಕೆ, ಎ ವಿ ಕೆ ಕಾಲೇಜು ಸಹಯೋಗದಲ್ಲಿ ಎವಿಕೆ ಕಾಲೇಜು ಸಭಾಂಗಣ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ “ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು- ರಾಷ್ಟ್ರೀಯ ವಿಚಾರ ಸಂಕಿರಣ” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು”ದಾವಣಗೆರೆಯಲ್ಲಿ ವೈಚಾರಿಕ ಲೇಖಕರು ಹೆಚ್ಚು.‌ ಸಾಹಿತ್ಯಿಕವಾಗಿ ವೈಚಾರಿಕವಾಗಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯದ ಮುಖ್ಯ ತಿರುಳು ಸಂಬಂಧ ಮತ್ತು ಮಾನವೀಯತೆಯನ್ನು ಗಟ್ಟಿಗೊಳಿಸುವುದಾಗಿದೆ. ಸಾಹಿತ್ಯವು ಕಾಲಕಾಲಕ್ಕೆ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ದಾಖಲಿಸುತ್ತಾ ಬಂದಿದೆ. ಬೇರು ಮತ್ತು ಚಿಗುರು ಹೆಸರೇ ಅರ್ಥಪೂರ್ಣವಾಗಿದ್ದು ಇಲ್ಲಿ ಉಪನ್ಯಾಸಕರು ಬೇರಿನ ರೀತಿ ಮಾಗಿದ್ದಾರೆ, ವಿದ್ಯಾರ್ಥಿಗಳು ಚಿಗುರು ರೀತಿಯಲ್ಲಿ ಹೊಸತನವನ್ನು ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003151059

“ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಲ್ಲದಿದ್ದ ಸಮಯದಲ್ಲಿ 12ನೇ ಶತಮಾನದಲ್ಲಿ ವಚನಕಾರ್ತಿಯರು ಸಾಹಿತ್ಯವನ್ನು ಬರೆದಿದ್ದಾರೆ. ಅನಕ್ಷರಸ್ಥರಾಗಿದ್ಧ ವಚನಗಾರ್ತಿಯರು ಅಂದು ಎಲ್ಲರೂ ಸಮಾನರು ಎಂದು ಬರೆಯಲು ಪ್ರಾರಂಭಿಸುತ್ತಾರೆ. ಅನಕ್ಷರಸ್ಥರಾಗಿದ್ದ ವಚನಗಾರ್ತಿಯರು ಬರೆದ ವಚನಗಳು ಆಯಾ ಕಾಲಕ್ಕೆ ತಕ್ಕಂತೆ ಸಂಕಷ್ಟಗಳಿಗೆ ತೆರೆದುಕೊಳ್ಳುತ್ತವೆ. ಹನ್ನೆರಡನೇ ಶತಮಾನದ ನಂತರ ಬರವಣಿಗೆ ಮತ್ತೆ ಮಹಿಳೆಯರಲ್ಲಿ ಕಾಣೆಯಾಗಿದ್ದು, ಬ್ರಿಟಿಷರು ಬಂದ ನಂತರ ಶಿಕ್ಷಣ ಪಡೆದು ಸಾಹಿತಿಗಳು ಕವಿಗಳು ಪತ್ರಕರ್ತರಾಗಿ ಕೆಲವೇ ಮಹಿಳೆಯರು ಮಾತ್ರ ಹುಟ್ಟಿಕೊಳ್ಳುತ್ತಾರೆ. ಬರೆಯಲೇಬೇಕಾದ ಅನಿವಾರ್ಯತೆಗಳಿಂದ ಮಹಿಳೆಯರು ಲೇಖಕಿಯರಾಗಿ, ಕವಿಯಾಗಿ ಬರೆದಿದ್ದಾರೆ. ವಿಮರ್ಶೆಯಿಂದ ಲೇಖಕಿಯರು ದೂರ ಇದ್ದಾರೆ. ಪ್ರಭುದ್ಧ ಮಹಿಳಾ ವಿಮರ್ಶಕರು ಮತ್ತು ಕವಯತ್ರಿಯರ ಕೊರತೆಯಿದ್ದು, ಮಹಿಳೆಯರ ಕ್ಷೇತ್ರದಲ್ಲಿ ವಿಮರ್ಶಕರು ಹೆಚ್ಚಾಗಬೇಕಿದೆ” ಎಂದು ಅಭಿಪ್ರಾಯಪಟ್ಟರು.

“ಬಂಡಾಯ ಸಾಹಿತ್ಯದ ನಂತರ ಮಹಿಳೆಯರು ಹೆಚ್ಚು ಹೆಚ್ಚಾಗಿ ಪಡೆಯಲು ಪ್ರಾರಂಭಿಸಿದರು. ‘ಮಹಿಳೆಯರು ಬರೆಯುವುದೇ ಸವಾಲು’ ಎನ್ನುವಂತಹ ಪರಿಸ್ಥಿತಿಯಲ್ಲಿ ಸಂಕಷ್ಟದ ಕಾಲದಲ್ಲೂ ಕೂಡ ಬರೆಯುತ್ತಾ ಬಂದಿದ್ದಾರೆ. ಅಡಿಗೆ ಮನೆಯಿಂದಲೇ ಬರೆಯಲು ಪ್ರಾರಂಭಿಸಿ, ಸೀತೆ ಅಹಲ್ಯೆಯ ರೀತಿಯ ಮುಖವಾಡವನ್ನು ಹೊತ್ತು ಬರೆದು ನಂತರ ಅದನ್ನು ಕಿತ್ತೊಗೆದು ತಮ್ಮ ಸಂಕಟಗಳನ್ನು, ನೋವುಗಳನ್ನು ಬರೆಯುತ್ತಾ ಬಂದಿದ್ದಾರೆ” ಎಂದು ತಿಳಿಸಿದರು.

1003151052

“ಮಹಿಳೆಯರನ್ನು ಪುರಾಣಕಾಲದಿಂದಲೂ ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣಲಾಗುತ್ತಿದೆ. ಸ್ತ್ರೀಯರಿಗೆ ಪುರಾಣಗಳಲ್ಲಿ ಯಾವುದೇ ಮಹತ್ವ ನೀಡಿಲ್ಲ. ಮಹಿಳೆಯರು ತಮ್ಮ ಸಂಕಷ್ಟ ನೋವುಗಳನ್ನು ಅನಾದಿಕಾಲದಿಂದಲೂ ಜನಪದಗಳಲ್ಲಿ ತೋಡಿಕೊಂಡಿದ್ದಾರೆ. ಕವಿತೆಗೆ ಒಂದು ಸಿದ್ಧತೆ ಬೇಕು, ಅದು ಯಾವ ಕಾಲಕ್ಕೂ ತನ್ನ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವಂತಿರಬೇಕು. ಅವು ಆಯ ಕಾಲದ ಸಂಕಟಗಳು ಆಶಯಗಳನ್ನು ಕಟ್ಟಿಕೊಡಬೇಕು” ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯ, ಚಿತ್ರದುರ್ಗದ ಸರ್ಕಾರಿ ಕಾಲೇಜು ಪ್ರಾಂಶುಪಾಲರಾದ ಕರಿಯಪ್ಪ ಮಾಳಿಗೆ ಮಾತನಾಡಿ “ಮಹಿಳೆಯರು ಇಂದು ಸಂಶೋಧಕಿಯರಾಗಿ, ವಿಮರ್ಶಕರಾಗಿ ಹೆಸರು ಮಾಡಿದಿದ್ದಾರೆ. ಇದು ಸಂತಸ ಪಡುವ ವಿಷಯ. 20ನೇ ಶತಮಾನದ ಮಧ್ಯ ಭಾಗದಿಂದಲೂ ಮಹಿಳಾ ಲೇಖಕರು, ಸಾಹಿತಿಗಳು ಮತ್ತು ಸಂಶೋಧಕರು ಹುಟ್ಟಿಕೊಳ್ಳುತ್ತಿದ್ದಾರೆ. ಇಂದು ಪುರುಷರು ಮಹಿಳೆಯರ ಆತ್ಮಕಥನಗಳನ್ನು ಓದಿಕೊಳ್ಳಬೇಕು. ಆಗ ಮಾತ್ರವೇ ಅವಳ ಆತಂಕ, ದುಗುಡ, ಸಂಕಟಗಳನ್ನು ಅರಿಯಲು ಸಾಧ್ಯ. ಅವಳೆಡೆಗಿನ ಕೀಳು ಭಾವನೆ ತೊಲಗಿಸಿ ಒಳ್ಳೆಯ ಭಾವನೆ ಬರಲು ಸಾಧ್ಯವಾಗುತ್ತದೆ. ಬಿಕ್ಕಟ್ಟುಗಳ ಮಧ್ಯೆ ಚಲನಶೀಲ ಸಂಘಟನೆಗಳ ಅಗತ್ಯವಿದೆ. ಇದಕ್ಕೆ ತಳಹದಿಯನ್ನು ಹಾಕಿಕೊಟ್ಟಿದ್ದು ಬುದ್ಧ ಗುರು. ನಾವು ಇಂದು ಅಧ್ಯಯನವಿಲ್ಲದೆ ವಿಘಟನೆಗೆ ಒಳಗಾಗುತ್ತಿದ್ದೇವೆ, ಮಾತು ಕಳೆದುಕೊಂಡು ಅನುಸಂಧಾನವಿಲ್ಲದೆ ಹಿನ್ನೆಲೆಗೆ ಸರಿಯುತ್ತಿದ್ದೇವೆ. ಇದಕ್ಕೆ ಪರಿಹಾರವಾಗಿ ಸಾಹಿತ್ಯ, ಕವಿತೆಗಳೊಂದಿಗೆ ಅನುಸಂಧಾನ ಮಾಡಿಕೊಳ್ಳಬೇಕಿದೆ. ಆಗ ಮಾತ್ರ ನಮ್ಮಲ್ಲಿ ಸೃಜನಶೀಲತೆ ಮತ್ತು ಜನಪದರ ಕೂಡುವ ಸಂಸ್ಕೃತಿ ಬೆಳೆಯಲಿದೆ” ಎಂದು ಅಭಿಪ್ರಾಯ ಪಟ್ಟರು.

1003151054

ಪ್ರಾಸ್ತಾವಿಕವಾಗಿ ಮಾತನಾಡಿದ ಬೇರು ಚಿಗುರು ಸಂಸ್ಥೆಯ ಕಾರ್ಯದರ್ಶಿ, ಉಪನ್ಯಾಸಕರಾದ ಅಂಜನಪ್ಪ ಮಾತನಾಡಿ “ಚರಿತ್ರೆಯನ್ನು ತಿಳಿದಷ್ಟು ಕನ್ನಡದ ಸಾಹಿತ್ಯದ ಬೇರು ಭದ್ರವಾಗುತ್ತಾ ಹೋಗುತ್ತದೆ. ಹೊಸ ಚಿಗುರುಗಳನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ. ಇಂದು ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಅಸಮಾನತೆ ಸಮಾಜದ ಬಹುದೊಡ್ಡ ಸವಾಲು. ಇದರ ಬಗ್ಗೆ ಅರಿವು ಮೂಡಿಸದೇ ಹೋದರೆ ಸಾಮಾಜಿಕ ಸಂಕಷ್ಟಗಳಿಗೆ ದಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಎವಿಕೆ ಕಾಲೇಜು ಪ್ರಾಂಶುಪಾಲರಾದ ಕಮಲ ಸೊಪ್ಪಿನ್ ಮಾತನಾಡಿ “ಎಂಎಂಕಲ್ಬುರ್ಗಿ ಚಿದಾನಂದ ಮೂರ್ತಿ ಅಂತವರು ವಿಮರ್ಶೆಯ ಮಾನದಂಡವನ್ನು ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳುವಲ್ಲಿ ಮುಂದಾಗಬೇಕು. ಈ ಮೂಲಕ ತಮ್ಮ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕಿದೆ” ಎಂದು ಕರೆ ನೀಡಿದರು

1003151053

ಹಿರಿಯ ಲೇಖಕಿ ಸುಶೀಲಾ ದೇವಿ ಮಾತನಾಡಿ ” “ಮಹಿಳೆಯರು ನಿರ್ಲಕ್ಷ್ಯಕ್ಕೆ ಒಳಗಾಗಿ ಬೇಗನೆ ಮದುವೆ, ಸಂಸಾರ ಇದರ ಬಿಕ್ಕಟ್ಟಿನಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇದರ ಮಧ್ಯೆ ಕೆಲವರು ಬರೆದರೆ ಅದು ಅಡಿಗೆ ಮನೆಯ ಸಾಹಿತ್ಯ ಎನ್ನುವ ಪುರುಷ ಪ್ರಧಾನ ಸಮಾಜವಿದೆ. ಇದನ್ನು ಮೀರಿ ವಾಣಿ, ಅನುಪಮಾ, ತ್ರಿವೇಣಿ ಅಂತಹ ಹಿರಿಯ ಲೇಖಕಿಯರು ಮಹಿಳೆಯರ ದೌರ್ಜನ್ಯ ಸಮಸ್ಯೆಯ ಸಂಕಟಗಳ ಬಗ್ಗೆ ಧ್ವನಿಯಾಗಿ, ಆಕ್ರೋಶವಾಗಿ ಬರೆದಿದ್ದಾರೆ” ಎಂದು ಅಭಿಪ್ರಾಯಪಟ್ಟರು.‌

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕು ಶೋಷಿಸಿ ಉದ್ಯಮಪರವಾಗಿವೆ: ಎಐಯುಟಿಯುಸಿ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಬೇರು ಚಿಗುರು ಸಂಸ್ಥೆಯ ಅಧ್ಯಕ್ಷ, ಉಪನ್ಯಾಸಕ ಡಾ.ವಿಜಯ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಜಯಪ್ರಕಾಶ್ ಶೆಟ್ಟಿ ಪ್ರೊ. ಶುಭ ಮರವಂತೆ, ಪ್ರೊ. ತಾರಿಣಿ ಶುಭದಾಯಿನಿ, ಹಾಗೂ ಡಾ.ಕವಿತಾ ಡಾ. ಲೋಹಿತ್ ಹೆಚ್ ಎಂ, ಡಾ.ಅಜಯ್ ಕುಮಾರ್ ವಿಹೆಚ್, ಡಾ. ಜಿಕೆ ಪ್ರೇಮ, ನಾಗೇಶಪ್ಪ, ತಿಪ್ಪೇಸ್ವಾಮಿ, ನಾಗರಾಜ, ಸಂತೋಷ್ ಕುಮಾರ್ ಬಿಪಿ, ಸಚಿನ್ ಸೇರಿದಂತೆ ಎವಿಕೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...