ದಾವಣಗೆರೆ | ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕು ಶೋಷಿಸಿ ಉದ್ಯಮಪರವಾಗಿವೆ: ಎಐಯುಟಿಯುಸಿ ಪ್ರತಿಭಟನೆ

Date:

ಕೇಂದ್ರ ಸರ್ಕಾರದ ಈ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು (ಶ್ರಮ ಸಂಹಿತೆಗಳು)’ ವ್ಯವಹಾರವನ್ನು ಸುಲಭಗೊಳಿಸುವ’ ಹೆಸರಿನಲ್ಲಿ, ಕಾರ್ಮಿಕರ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುವ ಮೂಲಕ, ಬಂಡವಾಳಶಾಹಿ ಮತ್ತು ಉದ್ಯಮ ಪರವಾಗಿವೆ. ಇದು ಪ್ರಗತಿಪರ ಸುಧಾರಣೆಯಲ್ಲ, ಬದಲಿಗೆ ಕಾರ್ಮಿಕ ವಿರೋಧಿ ಶೋಷಿತ ನಡೆ ಎಂದು ವಿರೋಧಿಸಿ ಎಐಯುಟಿಯುಸಿ, ಎಸ್ ಯು ಸಿ ಐ ದಾವಣಗೆರೆ ಜಿಲ್ಲಾ ಸಮಿತಿ ಮುಖಂಡರು, ಕಾರ್ಯಕರ್ತರು ಹಾಗೂ ಕಾರ್ಮಿಕರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಎಸ್ ಯು ಸಿ ಐ (SUCI)ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಡಾ. ಸುನೀತ್ ಕುಮಾರ್ ಮಾತನಾಡಿ “ದೇಶದಾದ್ಯಂತ ಕಾರ್ಮಿಕರ ವ್ಯಾಪಕ ವಿರೋಧ ಇದ್ದರೂ, ಕೇಂದ್ರ ಸರ್ಕಾರವು ಬಂಡವಾಳಶಾಹಿ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಖಂಡನೀಯ. 1991ರ ಹೊಸ ಆರ್ಥಿಕ ನೀತಿಯಿಂದ ಆರಂಭವಾದ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರಿಸಿದ ಸರ್ಕಾರಗಳು, 2019ರಲ್ಲಿ ಬಿಜೆಪಿ ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ — ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ, ಮತ್ತು ಉದ್ಯೋಗದ ಸುರಕ್ಷತೆ– ಏಕೀಕೃತಗೊಳಿಸಿದವು. ಕಾರ್ಮಿಕರ ಭಾರೀ ಹೋರಾಟಗಳಿಂದ ಈ ಸಂಹಿತೆಗಳು ಜಾರಿಯಾಗದೆ ಉಳಿದಿದ್ದರೂ, ಇದೀಗ ಹೋರಾಟಗಳನ್ನು ಲೆಕ್ಕಿಸದೇ, ಕಾರ್ಮಿಕರ ಜೀವನ ಮತ್ತು ಹಕ್ಕುಗಳನ್ನು ಶೋಷಿಸುವ ರೀತಿಯಲ್ಲಿ ಅವನ್ನು ಜಾರಿಗೊಳಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ಕಾರ್ಮಿಕ ಸಂಹಿತೆಗಳಲ್ಲಿ “ಕಾರ್ಮಿಕ ವಿರೋಧಿ ಅಂಶಗಳಿದ್ದು, ಕೈಗಾರಿಕಾ ಸಂಬಂಧಗಳ ಸಂಹಿತೆ (Industrial Relations Code) ಅಡಿಯಲ್ಲಿ, ಉದ್ಯೋಗಿಗಳನ್ನು ವಜಾ ಮತ್ತು ಮುಚ್ಚುವಿಕೆ ಸುಲಭವಿಗಲಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆಯಡಿ, ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಸಂಸ್ಥೆ ಮುಚ್ಚಲು ಸರ್ಕಾರದ ಅನುಮತಿ ಬೇಕಾಗುವ ಗಾತ್ರವನ್ನು 100ರಿಂದ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ–ಮಧ್ಯಮ ಸಂಸ್ಥೆಗಳು ಉದ್ಯೋಗಿಗಳನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯ” ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1003149665

“ಕೈಗಾರಿಕಾ ಸಂಬಂಧಗಳ ಸಂಹಿತೆಯು “ಮುಷ್ಕರ” ಎಂಬ ಪದದ ವ್ಯಾಖ್ಯೆಯನ್ನು ವಿಸ್ತರಿಸಿದೆ. ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುತ್ತದೆ. ಮತ್ತು ಮುಷ್ಕರಕ್ಕೆ ಹೋಗುವ ಮೊದಲು 14-ದಿನಗಳ ನೋಟಿಸ್ ಕಡ್ಡಾಯಗೊಳಿಸಿದೆ. ಇದು ಮುಷ್ಕರ ನಡೆಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಕಾರ್ಮಿಕರ ಸಂಘಟಿತ ಚೌಕಾಸಿ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಕಾರ್ಮಿಕ ಕಾಯಿದೆಗಳನ್ನು ಕೇಂದ್ರೀಕರಿಸುವುದರಿಂದ, ಸಂಸ್ಥೆಗಳು ಮತ್ತು ಮಾಲೀಕರು ಕಡಿಮೆ ನಿಯಂತ್ರಣ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತಾರೆ. ಸಂಹಿತೆಗಳು ಅನುಸರಣೆಯನ್ನು ಸರಳಗೊಳಿಸುವುದಾಗಿ ಹೇಳಿದರೂ, ಇದು ವಾಸ್ತವವಾಗಿ ದುರ್ಬಲ ಕಾರ್ಮಿಕ ಶ್ರಮ ಪರಿಶೀಲನಾ ವ್ಯವಸ್ಥೆಗೆ ಕಾರಣವಾಗುತ್ತದೆ”ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಾಮಾಜಿಕ ಭದ್ರತಾ ಸಂಹಿತೆ (Code on Social Security) ಗುತ್ತಿಗೆ ಕಾರ್ಮಿಕರು ಮತ್ತು ಗಿಗ್ ವರ್ಕರ್ಸ್ ಬಗ್ಗೆ ಮಾತನಾಡಿದರೂ, ಎಲ್ಲಾ ಕಾರ್ಮಿಕರಿಗೆ ಸಮಗ್ರ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದಿಲ್ಲ ಎಂದು ಹಲವರು ವಿಶ್ಲೇಷಿಸಿದ್ದಾರೆ”ಎಂದು ತಿಳಿಸಿದರು.

“ವೇತನ ಸಂಹಿತೆ ಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿನ ಬದಲಾವಣೆಗಳು, ಕೆಲವೊಮ್ಮೆ, ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡಿ ಕಾರ್ಮಿಕರ ಕೆಲಸದ ಸಮಯದ ಹೆಚ್ಚಿಸುವ ಆತಂಕವಿದೆ (ವಾರದ ಒಟ್ಟು ಕೆಲಸದ ಸಮಯವನ್ನು ಬದಲಾಯಿಸದಿದ್ದರೂ ಸಹ), ಇದು ಕಾರ್ಮಿಕರ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಈ ಸಂಹಿತೆಗಳು ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಅನ್ನು ಸಾಧಿಸಲು ‘ಈಸ್ ಆಪ್ ಫೈರಿಂಗ್ ವರ್ಕರ್ಸ್’ ( ಕಾರ್ಮಿಕರನ್ನು ವಜಾ ಮಾಡುವ ಸುಲಭ) ಮಾರ್ಗವನ್ನು ಆರಿಸಿಕೊಂಡಿದೆ ಮತ್ತು ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಹಾಗಾಗಿ ಕಾರ್ಮಿಕರು ಕೂಡಲೇ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು” ಎಂದು ಕರೆ ನೀಡಿದರು.

1003149666

ಕಾರ್ಮಿಕ ಮುಖಂಡ, ಜಿಲ್ಲಾ ಜಂಟಿ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ,”ಕಾರ್ಮಿಕರ ಪ್ರಮುಖ ಬೇಡಿಕೆಗಳಾದ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಎಲ್ಲಾ ವರ್ಗದ ಕಾರ್ಮಿಕರಿಗೆ ಪಿಎಫ್, ಇಎಸ್ ಐ, ಗ್ರಾಚ್ಯುಟಿ ಮುಂತಾದ ಸಾಮಾಜಿಕ ಭದ್ರತೆ ಸೌಲಭ್ಯಗಳು, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಅಗತ್ಯ ಕಾನೂನು ಮಾಡುವುದು, ಸ್ಕಿಮ್ ನೌಕರರಾದ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಕಾರ್ಮಿಕರನ್ನಾಗಿ ಮಾಡಿ ಸೇವಾ ಭದ್ರತೆ ಒದಗಿಸುವುದು ಮತ್ತು ಎಲ್ಲಾ ಗಿಗ್/ಪ್ಲಾಟ್ ಫಾರ್ಮ್ ಕಾರ್ಮಿಕರನ್ನು ಕಂಪನಿಗಳ ಖಾಯಂ ಉದ್ಯೋಗಿಗಳಾಗಿಸುವ ಬದಲು ಕೇಂದ್ರ ಸರ್ಕಾರವು ತದ್ವಿರುದ್ಧವಾಗಿ ನಡೆದುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಾಲ್ಕು ಕಾರ್ಮಿಕ ಸಂಹಿತೆಗಳು ನಿಜಕ್ಕೂ ಖಾಸಗಿ ಬಂಡವಾಳಗಾರರ ಅಭಿವೃದ್ಧಿಗೆ ಹಾಗೂ ವ್ಯಾಪಾರ ಸುಲಭಗೊಳಿಸುವಿಕೆಗೆ ಪೂರಕವಾಗಿವೆ. ಇನ್ನೊಂದೆಡೆ ಇದು ಕಾರ್ಮಿಕರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಅವರನ್ನು ಅಭದ್ರತೆಗೆ ತಳ್ಳುತ್ತದೆ. ಇದರಿಂದಾಗಿ ಮೂಲಭೂತ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಹಜ ನ್ಯಾಯದ ತತ್ವಗಳು ಕಣ್ಮರೆಯಾಗುವ ಅಪಾಯವಿದೆ. ಆದ್ದರಿಂದ ಈ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು, ಎಲ್ಲಾ ಕಾರ್ಮಿಕರು ಅಂತಿಮ ಹೋರಾಟಕ್ಕೆ ಸಿದ್ಧರಾಗಬೇಕು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಮ್ಮೆಟ್ಟಿಸಲು ಬಲಿಷ್ಠ ಚಳುವಳಿಗೆ ಒಗ್ಗೂಡಬೇಕು” ಎಂದು ಕರೆ ನೀಡಿದರು.

ಉ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆಪಿಎಸ್ ಶಾಲೆಗಾಗಿ ಸರ್ಕಾರಿ ಶಾಲೆ ಮುಚ್ಚುವ ನೀತಿ ಖಂಡಿಸಿ ಎಐಡಿಎಸ್ಓ ಪ್ರತಿಭಟನೆ

ಈ ಪ್ರತಿಭಟನೆಯಲ್ಲಿ ಡಾ. ಸುನೀತ್ ಕುಮಾರ್, ರಾಜ್ಯ ನಾಯಕರು SUCI ಕಮ್ಯುನಿಸ್ಟ್, ತಿಪ್ಪೇಸ್ವಾಮಿ ಅಣಬೇರು, ಜಿಲ್ಲಾ ಜಂಟಿ ಕಾರ್ಯದರ್ಶಿ ಎಐಯುಟಿಯುಸಿ, ಶಿವಾಜಿರಾವ್, ಜಿಲ್ಲಾ ಉಪಾಧ್ಯಕ್ಷರು, ರಾಘವೇಂದ್ರ, ಮುಖಂಡರು ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್, ಕಾರ್ಗಿಲ್ ಎಂಪ್ಲಾಯೀಸ್ ಯೂನಿಯನ್ ನಿಂದ ಸಂಜಯ್, ಬಸವರಾಜ್, ಮೋಹನ್, ಇನ್ನಿತರರು, ದಾವಣಗೆರೆ ವಿಶ್ವವಿದ್ಯಾಲಯ ದಿಂದ ಶಿವಾಜಿರಾವ್, ರೇವಣಸಿದ್ದೇಶ್, ಸುಮೀತ್ರಾ, ಯುಬಿಡಿಟಿ ಕಾಲೇಜ್ ನಿಂದ ವಿಶ್ವನಾಥ್, ಮಲ್ಲೇಶಪ್ಪ, ಪರಮೇಶ್ವರಪ್ಪ, ವಿನೋದಮ್ಮ, ರವಿ ಕುಮಾರ್, ಹಾಸ್ಟೆಲ್ ಸಂಘದಿಂದ ರವಿನಾಯ್ಕ, ರಂಗನಾಥ್, ಹರೀಶ್, ನವೀನ್, ಗದಿಗೆಪ್ಪ, ಚನ್ನಬಸವರಾಜ, ನರಸಿಂಹಮೂರ್ತಿ ಇನ್ನೂ ಮುಂತಾದ ಕಾರ್ಮಿಕರು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...