ದಾವಣಗೆರೆ ವಿಶ್ವವಿದ್ಯಾನಿಲಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಯ ಅಭಿವೃದ್ಧಿ ಘಟಕ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣ ಹಾಗೂ ಬೀರೂರು ಸಮಸಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ನೂರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಗೌರವ ಸೂಚಕದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಅಭಿಯಾನ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರೈತಸಂಘದ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಸುವರ್ಣಸೌಧ ಚಲೋ
ಕಾರ್ಯಕ್ರಮದಲ್ಲಿ ಕುಲ ಸಚಿವ ಎಸ್ ಬಿ ಘಂಟಿ, ಹಿರಿಯ ಪ್ರಾಧ್ಯಾಪಕರಾದ ಲೋಕೇಶ್, ಫಕೀರೇಶ ಹಳ್ಳಳ್ಳಿ, ಸೆಲ್ವ, ಪಟವರ್ಧನ್ , ಪಲಾಟೆ ವಿಎಂ, ಮಾನವ ಬಂಧುತ್ವ ವೇದಿಕೆಯ ಶಿವಕುಮಾರ್ ಮಾಡಾಳ್, ಶುಕ್ರಸಾಬ್, ಮೈಲಾರಿ, ರಮೇಶ್ ಹಾಗೂ ಹಿರಿಯ ಮತ್ತು ಸಹಾಯಕ ಪ್ರಾಧ್ಯಾಪಕರು ಸಂಶೋಧನಾರ್ಥಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





