ದಾವಣಗೆರೆಯ ಕರ್ನಾಟಕ ವೀರ ಮದಕರಿ ಸೇನೆ ವತಿಯಿಂದ ದಾವಣಗೆರೆ ನಗರದ ನಾಯಕ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶ್ರೀ ರಾಜವೀರ ಮದಕರಿ ನಾಯಕರ 283ನೇ ವರ್ಷದ ಜಯಂತಿಯನ್ನು ಆಚರಿಸಲಾಯಿತು.
ಕರ್ನಾಟಕ ವೀರ ಮದಕರಿ ಸೇನೆಯ ರಾಜ್ಯಾಧ್ಯಕ್ಷರಾದ ಅಣಜಿ ಅಂಜಿನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, “ಶ್ರೀ ರಾಜವೀರ ಮದಕರಿನಾಯಕರ ಜಯಂತಿಯನ್ನು ಪ್ರತಿವರ್ಷವು ಆಚರಿಸಬೇಕು ಹಾಗೂ ರಾಜ್ಯ ಸರ್ಕಾರವು ಕೂಡ ನಾಡ ದೊರೆ ಶ್ರೀ ರಾಜವೀರ ಮದಕರಿನಾಯಕರ ಜಯಂತಿಯನ್ನು ಸಕಲ ಸರ್ಕಾರಿ ಗೌರವಾದರದೊಂದಿಗೆ ಆಚರಿಸಲು ಕ್ರಮ ಕೈಗೊಳ್ಳಬೇಕು” ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹುಲ್ಲುಮನೆ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರಾಜವೀರ ಮದಕರಿನಾಯಕರು ಇತಿಹಾಸದಲ್ಲಿ ಶೌರ್ಯ ಪರಾಕ್ರಮಗಳಿಗೆ ಹೆಸರಾದವರು. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಕೆರೆಯ ನಿರ್ಮಾತೃ ಶ್ರೀ ರಾಜವೀರ ಭರಮಣ್ಣ ನಾಯಕರ ಬೃಹತ್ ಪ್ರತಿಮೆಯನ್ನು ಭರಮಸಾಗರದ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಿರ್ಮಿಸಲು ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆ ಪ್ರಯತ್ನ ಖಂಡಿಸಿ ವಕೀಲನ ಗಡೀಪಾರಿಗೆ ದಸಂಸ ಆಗ್ರಹ
ಕಾರ್ಯಕ್ರಮದಲ್ಲಿ ತಾಲೂಕು ನಾಯಕ ಸಂಘದ ಗೌರವ ಅಧ್ಯಕ್ಷರಾದ ಅಣ್ಣಾಪುರದ ಹೇಮಣ್ಣ, ನಾಯಕ ಹಾಸ್ಟೆಲ್ ನಿರ್ದೇಶಕ ಹಾಗೂ ವಕೀಲರಾದ ಆಂಜನೇಯ ಗುರೂಜಿ, ತಾಲೂಕು ನಾಯಕ ಸಂಘದ ಉಪಾಧ್ಯಕ್ಷರಾದ ಕರೂರು ಗಣೇಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ತುಂಬಿಗೆರೆ ಗಂಗಾಧರಪ್ಪ ಸೇರಿದಂತೆ ಇತರ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.





