ದಾವಣಗೆರೆ | ಕಾರ್ಮಿಕರ ಹಕ್ಕುಗಳಿಗೆ ರಾಜ್ಯಾದ್ಯಂತ ಆಂದೋಲನ ಹಾಗೂ ಬೆಂಗಳೂರು ಚಲೋ

Date:

“ಕಾರ್ಮಿಕರ ಐಕ್ಯತೆ ಮತ್ತು ಹಕ್ಕುಗಳಿಗಾಗಿ ರಾಜ್ಯಾದ್ಯಂತ ಪ್ರಚಾರ ಆಂದೋಲನ ಹಾಗೂ 2025, ನವೆಂಬರ್ 26 ಕ್ಕೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ದಾವಣಗೆರೆಯ ಜಯದೇವ ವೃತ್ತದಿಂದ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ದಾವಣಗೆರೆಯ ಜಗಳೂರು, ಹೊನ್ನಾಳಿ ಸೇರಿದಂತೆ ಎಲ್ಲಾ ತಾಲೂಕು, ಹೋಬಳಿಗಳಲ್ಲಿ ಚಾಲನೆ ನೀಡಲಾಗುವುದು” ಎಂದು ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನ ಸಮಿತಿಯ ಮುಖಂಡರು ತಿಳಿಸಿದರು.‌

1003089796

ಇಂದು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನ ಹೋರಾಟ ಸಮಿತಿಯ ಮುಖಂಡರು “ಕಳೆದ 10 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶಿಯ ಮತ್ತು ವಿದೇಶಿಯ ಬಂಡವಾಳಶಾಹಿಯ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆ.‌ ಕರೋನಾ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಬೀದಿಯಲ್ಲಿ ಸಾವಿರಾರು ಕಿ.ಮೀ ಆಹಾರಕ್ಕಾಗಿ ಅಲೆದು ಪ್ರಾಣ ತೆತ್ತರೂ ಸಹ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದೆಯೇ ದುಡಿಯುವ ಜನರೆಲ್ಲ ಮನೆಯಲ್ಲಿ ಇರುವ ಸಂದರ್ಭವನ್ನೇ ಉಪಯೋಗಿಸಿಕೊಂಡು ಕೊರೋನಾ ಕಾಲದಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರು ಹಲವಾರು ವರ್ಷಗಳ ಹೋರಾಟದಿಂದ ಪಡೆದ ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸಿ 4 ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಬಂಡವಾಳಶಾಹಿಗಳಿಗೆ ಸಹಸ್ರಾರು ಕೋಟಿಗಳ ಲಾಭವನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.‌

1003089794

“ಇಂದು ದುಡಿಯುವ ಜನರ ಜೀವನವು ಹಿಂದೆಂದಿಗಿಂತಲೂ ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿದೆ. ಎಲ್ಲ ಕ್ಷೇತ್ರದಲ್ಲೂ ಗುತ್ತಿಗೆ ಪದ್ಧತಿ ಹೆಸರಲ್ಲಿ ದುಡಿಯುವ ಜನರನ್ನೆಲ್ಲಾ ಗುಲಾಮರನ್ನಾಗಿ ಮಾಡಲಾಗಿದೆ. ಪರ್ಮನೆಂಟ್ ಕೆಲಸ ಎಂಬುದು ಕನಸಾಗಿಯೇ ಉಳಿದಿದೆ. ಕನಿಷ್ಟ ವೇತನವೂ ಜಾರಿಯಾಗುತ್ತಿಲ್ಲ, ಇ.ಎಸ್.ಐ ಮತ್ತು ಪಿ.ಎಫ್ ಎಂಬುದು ಮರಿಚೀಕೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಅಂಗನವಾಡಿ-ಬಿಸಿಯೂಟ-ಆಶಾದಂತಹ ಸ್ಕೀಂ ಕೆಲಸಗಾರರು, ಐಟಿ-ಬಿಟಿ ಕಾಲ್ ಸೆಂಟರ್ ಕೆಲಸದವರು, ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು/ಜೀತದಾಳುಗಳು/ತೋಟ-ಪ್ಲಾಂಟೇಷನ್ ಕಾರ್ಮಿಕರಿಗೆ ಯಾವುದೇ ಕಾನೂನುಗಳ ರಕ್ಷಣೆಗಳು ಇಲ್ಲದಂತಾಗಿದೆ. ಕಟ್ಟಡ ಕಾರ್ಮಿಕರಿಗೆ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಅಸಂಘಟಿತ ವಲಯದ ಹಮಾಲರು-ಟೈಲರ್-ಮೆಕಾನಿಕ್-ಮನೆಕೆಲಸ-ಹೋಟೆಲ್-ಕಲ್ಯಾಣ ಮಂಟಪ-ನೇಕಾರರು-ಬೀದಿಬದಿ ವ್ಯಾಪಾರದ ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಭಿಪ್ರಾಯಪಟ್ಟರು.

1003089797

“ಹೊಸ ಕಾರ್ಮಿಕ ಕಾನೂನುಗಳಿಂದ ಕಾರ್ಮಿಕ ಸಂಘಗಳನ್ನು ರಚಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಮಾಲೀಕರ ಮತ್ತು ಕಾರ್ಮಿಕರ ನಡುವಿನ ಸಾಮೂಹಿಕ ಚೌಕಾಸಿಯು ಮೊಟಕುಗೊಂಡಿದೆ. ಅಲ್ಲದೆ ಕಾರ್ಮಿಕರು ಪ್ರತಿಭಟನೆ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಹಾಗೂ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗುತ್ತದೆ. ಹೀಗೆ ಹಲವಾರು ಕಾನೂನುಗಳನ್ನು ಪಡೆದ ಶ್ರಮಿಕ ವರ್ಗವು ಹೊಸ ಕಾರ್ಮಿಕ ಸಂಹಿತೆಗಳಿಂದ ಎಲ್ಲವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ದುಡಿಯುವ ವರ್ಗ ಬಹು ದೊಡ್ಡ ಬಿಕ್ಕಟ್ಟಿಗೆ ಸಿಲುಕಲಿದ್ದು, ಬಂಡವಾಳಶಾಹಿ ವರ್ಗದಿಂದ ನಿರಂತರವಾಗಿ ಶೋಷಣೆಗೆ ಒಳಗಾಗಲಿದೆ. ಈ ಎಲ್ಲಾ ಕಾರಣಗಳಿಂದ ಇಂದು ಮತ್ತೆ ಕಾರ್ಮಿಕ ವರ್ಗವು ಐಕ್ಯ ಹೋರಾಟಕ್ಕೆ ತನ್ನನ್ನು ತಾನು ಸಂಘಟಿಸಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.

1003089793

“ದುಡಿಯುವ ವರ್ಗದ ಮೇಲಿನ ನಿರಂತರ ದಾಳಿಯ ವಿರುದ್ಧ ಹೋರಾಟವನ್ನು ಮುನ್ನಡೆಸುವ ಕೆಲಸವನ್ನು ಕರ್ನಾಟಕದಾದ್ಯಂತ ಗುತ್ತಿಗೆ ಮತ್ತು ಅಸಂಘಟಿತ ಕಾರ್ಮಿಕರ ಮಧ್ಯೆ ಕೆಲಸ ಮಾಡುತ್ತಿರುವ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನವನ್ನು ಪ್ರಾರಂಭಿಸಿವೆ. ಅದರ ಮೊದಲ ಭಾಗವಾಗಿ ಇದೇ ಅಕ್ಟೋಬರ್ 26 ರಿಂದ ಉದ್ಘಾಟನೆಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕರಲ್ಲಿ ಪ್ರಚಾರಾಂದೋಲವನ್ನು ಹಮ್ಮಿಕೊಂಡಿದ್ದು, ನವೆಂಬರ್ 26 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಮಾವೇಶಗೊಳ್ಳಲಿದೆ. ಎಲ್ಲಾ ದುಡಿಯುವ ಜನರು ಈ ಪ್ರಚಾರಾಂದೋಲನದಲ್ಲಿ ಪಾಲ್ಗೊಂಡು ಅಸುರಕ್ಷಿತ ಕಾರ್ಮಿಕರ ಐಕ್ಯ ಆಂದೋಲನವನ್ನು ಮುನ್ನಡೆಸಬೇಕು” ಎಂದು ಮನವಿ ಮಾಡಿದರು.

“ಅಲ್ಲದೆ ನಮ್ಮ ಹಕ್ಕೊತ್ತಾಯಗಳಾದ “ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಕೆ ಮಾಡಿರುವುದನ್ನು ರದ್ದು ಪಡಿಸಬೇಕು. ಗುತ್ತಿಗೆ ಪದ್ದತಿ ರದ್ದುಮಾಡಿ ಪೌರ ಕಾರ್ಮಿಕರ ಮಾದರಿಯಲ್ಲಿ ಡಿ.ಪಿ.ಎಸ್ ಯೋಜನೆ ಜಾರಿ ಮಾಡಬೇಕು. ಅಸಂಘಟಿತ ವಲಯದ ಹಮಾಲಿ, ಟೈಲರ್, ಮನೆಕೆಲಸ, ಹೋಟೆಲ್, ಕಲ್ಯಾಣ ಮಂಟಪ, ನೇಕಾರರಿಗೆ ಕಲ್ಯಾಣ ಮಂಡಳಿ ರಚಿಸಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣದಾವಣಗೆರೆ | ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗೆರೆ | ನರೇಗಾ ಕೂಲ

ಪ್ರಚಾರಾಂದೋಲನದ ಕಾರ್ಯಕ್ರಮದಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್, ಇಪ್ಟಾ ಕಲಾವಿದರಾದ ಷಣ್ಮುಖಸ್ವಾಮಿ, ಪವಿತ್ರ, ಸೈಯದ್ ಅಶ್ಫಾಕ್, ಅಂಜಿನಪ್ಪ, ರವೀಂದ್ರ, ಜಾಫರ್, ಮುರುಗೇಶ್, ಚಂದ್ರು, ಸಮೀರ್, ರಮೇಶ್, ಷಣ್ಮುಖ, ಆಂಜನೇಯ, ಅತ್ತು, ಸುಧಾ, ನಾಜೀಮಾ ಬಾನು, ನಸೀಮಾ ಬಾನು, ಗೀತಾ, ಶೃತಿ, ಗೌಸಿಯಾ ಬಾನು, ಕೃಷ್ಣಬಾಯಿ, ಕೌಸರ್, ಸಲ್ಮಾ ಸೇರಿದಂತೆ ಹಲವು ಕಾರ್ಮಿಕ ಮತ್ತು ಇತರೆ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...