ದಾವಣಗೆರೆ | ಸಂವಿಧಾನದ ಅಡಿಯಲ್ಲಿ ಸಮುದಾಯಗಳ ಸಂಘಟನೆಗಾಗಿ ಅಹಿಂದ ಚಳವಳಿ ಸಂಘಟನೆ

Date:

ಬುದ್ಧ, ಮಹಮ್ಮದ್ ಪೈಗಂಬರ್, ಯೇಸು ಕ್ರಿಸ್ತರ ಶಾಂತಿ, ಬಸವೇಶ್ವರರ ಸಮಾನತೆ, ಮಹಾತ್ಮ ಗಾಂಧೀಜಿಯವರ ಅಹಿಂಸೆ ಡಾ.ಬಿ.ಆರ್. ಅಂಬೇಡ್ಕರರ ಸಂವಿಧಾನ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾನತೆಯ ಭಾರತ ರಾಷ್ಟ್ರ ನಿರ್ಮಾಣ ಅಹಿಂದ ಚಳುವಳಿ ಸಂಘಟನೆಯ ಧ್ಯೇಯೋದ್ದೇಶ, ತತ್ವ, ಸಿದ್ಧಾಂತಗಳು ಮತ್ತು ಮೂಲಮಂತ್ರಗಳಾಗಿವೆ ಎಂದು ದಾವಣಗೆರೆ, ಹಾವೇರಿ ಜಿಲ್ಲೆಯ ಉಸ್ತುವಾರಿ ದೇವರಾಜ್ ಪ್ರಸಾದ್ ತಿಳಿಸಿದರು.

1001703016

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಹಿಂದ ಚಳುವಳಿ ಸಂಘಟನೆಯ ಈ
ಧ್ಯೇಯೋದ್ದೇಶಗಳೊಂದಿಗೆ ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಸಂಘಟಿಸುವ ಉದ್ದೇಶದಿಂದ ಅಹಿಂದ ಚಳುವಳಿ ಸಂಘಟನೆಯನ್ನು ಆರಂಭಿಸಲಾಗಿದೆ. ಮಾತ್ರವಲ್ಲದೆ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ಆರಂಭ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಅಹಿಂದ ಸಮುದಾಯಗಳ ಸದಸ್ಯರೇ ಸಂಪೂರ್ಣ ಅಧಿಕಾರ ಹೊಂದಿರುವ, ನಿರ್ವಹಿಸುವ ಮತ್ತು ನಿಯಂತ್ರಿಸುವ, ಸ್ವಸಹಾಯ ಮತ್ತು ಪರಸ್ಪರ ನೆರವಿನ ಮೇಲೆ ಆಧಾರಿತವಾದ ಭಾರತ ಸಂವಿಧಾನ ಮತ್ತು ಸಹಕಾರಿ ತತ್ವಗಳನ್ನು ಬೆಂಬಲಿಸುವ ಅಹಿಂದ ಸಮುದಾಯಗಳನ್ನು ಸಂಘಟಿಸಲಾಗುತ್ತದೆ.
ಅಹಿಂದ ಸಮುದಾಯಗಳ ಒಳಗೆ ಬಡತನದಲ್ಲಿರುವವರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಅವರ ಕುಂದುಕೊರತೆಗಳ ನಿವಾರಣೆ, ಹಿತಾಸಕ್ತಿಗಾಗಿ ದುಡಿಯುವುದು. ಖಾಸಗಿ ವ್ಯಕ್ತಿ ಮತ್ತು ಸಂಸ್ಥೆಗಳಿಂದ ನೆರವು ಪಡೆದು ಈ ಸಮುದಾಯಗಳ ಬಡವರಿಗೆ ಸಹಾಯ ನೀಡಲಾಗುವುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೇಂದ್ರ, ರಾಜ್ಯ ಸರ್ಕಾರಗಳ, ಸರ್ಕಾರಿ ಸ್ವಾಮ್ಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಅಥವಾ ಯೋಜನೆಗಳನ್ನು ಸಂಘಟನೆ ಮೂಲಕ ಆಹಿಂದ ಸಮುದಾಯಗಳ ಸದಸ್ಯರ ಕಲ್ಯಾಣಕ್ಕಾಗಿ, ಅನುಷ್ಠಾನ ಗೊಳಿಸಲಾಗುವುದು” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಂಜಾನ್ ಮಾಸ; ಮಸೀದಿಯಲ್ಲಿ ಸರ್ವಧರ್ಮಿಯರ ಇಫ್ತಾರ್ ಕೂಟ.

“ರಾಜ್ಯಾದ್ಯಂತ ಆಸಕ್ತ ಅಹಿಂದ ಕಾರ್ಯಕರ್ತರನ್ನು ಗುರುತಿಸಿ. ಎಲ್ಲ ಸಮುದಾಯಗಳ ಪ್ರತಿನಿಧಿಗಳನ್ನು
ಒಳಗೊಂಡ ರಾಜ್ಯ ಸಮಿತಿ, ಜಿಲ್ಲಾ ಸಮಿತಿ. ಮಾಡುವುದು. ತಾಲ್ಲೂಕು ಸಮಿತಿ ಗಳೆಂದು ಕೇಡರ್‌ಗಳನ್ನು ರಚನೆ ವಿಧಾನಸಭಾ ಕ್ಷೇತ್ರವಾರು ಸಮಿತಿಗಳನ್ನು ಸಮಿತಿಗಳನ್ನು ರಚನೆ ಮಾಡಿ, ತರಬೇತಿ ಶಿಬಿರ ಏರ್ಪಡಿಸುವುದು. ಅಹಿಂದ ವರ್ಗಗಳಿಗೆ ವಿದ್ಯಾರ್ಜನೆ ಕೊಡಿಸುವುದು ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯುವ ಬಗೆಗಳನ್ನು ತಿಳಿಸುವುದು ನಮ್ಮ ಸಂಘಟನೆಯ ಉದ್ದೇಶಗಳಾಗಿವೆ” ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಎನ್.ಅಜ್ಜಪ್ಪ, ಡಿ.ಎನ್.ಹಾಲೇಶ್, ಬ್ಯೂನಿಯನ್ ಭಾಸ್ಕರ, ಬಾಬು ರಾವ್ ಸುತ್ರಾವೆ, ಸಿದ್ದನೂರು ಬಸವರಾಜ್, ಶಿವಾನಂದಪ್ಪ ಇತರರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆಗೆ ಸಮರ್ಥ್, ಬಾಗಲಕೋಟೆಗೆ ಉಮೇಶ್: ಕಾಂಗ್ರೆಸ್ ಅಧಿಕೃತ ಘೋಷಣೆ

ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದ್ದು, ದಾವಣಗೆರೆ...

ದಾವಣಗೆರೆ | ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಬಳಿ ಈದ್ಗಾ ಮೈದಾನದಲ್ಲಿ...

ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ

ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ...

ಹಾವೇರಿ ವಿವಿ ಎಡವಟ್ಟು: ತಿಂಗಳಾದರೂ ಕೈಸೇರದ ಪಠ್ಯಪುಸ್ತಕ, ವಿದ್ಯಾರ್ಥಿಗಳ ಆತಂಕ!

ಕಿರುಪರೀಕ್ಷೆಗಳ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳಿಗೆ ದೋಷಮುಕ್ತ ಅಧಿಕೃತ ಪಠ್ಯಪುಸ್ತಕಗಳನ್ನು ಒದಗಿಸುವುದು ವಿವಿಯ ಆದ್ಯತೆಯಾಗಬೇಕಿದೆ....