ದಾವಣಗೆರೆ | ಕವಿ, ಶಿಕ್ಷಕ ಡಾ. ಮಂಜುನಾಥ್ ಗೆ ಅಕ್ಕನಮನೆ ಪ್ರತಿಷ್ಠಾನದ ‘ಅಕ್ಕ ರಾಜ್ಯ ಪ್ರಶಸ್ತಿ’

Date:

ಅಕ್ಕನಮನೆ ಪ್ರತಿಷ್ಠಾನ ಬೆಂಗಳೂರು ಹಮ್ಮಿಕೊಂಡಿರುವ “ಸಂಸ್ಕೃತಿ ಸಂಭ್ರಮ- 2025” ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಕೊಡ ಮಾಡುವ ಪ್ರತಿಷ್ಠಿತ “ಅಕ್ಕ ರಾಜ್ಯ ಪ್ರಶಸ್ತಿ” 2025 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಡಾ.ಮಂಜುನಾಥ್ ಎಂ ವಿ ರವರಿಗೆ ಘೋಷಿಸಲಾಗಿದೆ.

2025 ಮಾರ್ಚ್ 7 ಶುಕ್ರವಾರದಂದು ಬೆಂಗಳೂರಿನ ಕನ್ನಡ ಭವನದ’ ನಯನ ರಂಗಮಂದಿರ’ದಲ್ಲಿ ಸಂಜೆ 4 ಗಂಟೆಗೆ ‘ಜಾನಪದ ಸಂಭ್ರಮ ಹಾಗೂ ಸುವರ್ಣ ಕರ್ನಾಟಕ ಸಂಭ್ರಮ’ದ ಸವಿನೆನಪಿಗಾಗಿ ಆಯೋಜಿಸಿರುವ “ಸಂಸ್ಕೃತಿ ಸಂಭ್ರಮ- 2025” ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಕ್ಕನಮನೆ ಪ್ರತಿಷ್ಠಾನವು ವಿವೇಕದಿಂದ ವಿಕಾಸದೆಡೆಗೆ ಎಂಬ ಘೋಷ ವಾಕ್ಯ ದೊಂದಿಗೆ ಕಳೆದ ಹದಿನೈದು ವರ್ಷಗಳಿಂದಲೂ ಈ ನೆಲದ ತಾಯಿಬೇರಾದ ಜಾನಪದ, ಕನ್ನಡ ಸಾಹಿತ್ಯ ಹಾಗೂ ಮಹಿಳಾ ಸ್ವಾವಲಂಬನೆಗಾಗಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಜಾನಪದ ಕಲಾಪ್ರಕಾರಗಳನ್ನು ಈ ನಾಡಿನ ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ ಜಾನಪದ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಹಿರಿಯ ಜನಪದ ಕಲಾವಿದರನ್ನು ಗುರುತಿಸಿ ಸತ್ಕರಿಸಿ, ಜಾನಪದ ಕಲಾವಿದರ ಬದುಕಿನ ಜೊತೆಗೆ ಅವರ ಕಲೆಗಳ ಉಳಿವಿಗಾಗಿ ಸೇವಾ ಕಾರ್ಯ ಕೈಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ದಾವಣಗೆರೆ| ಯುವಜನತೆ ದೇಶದ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ನೆಡೆದುಕೊಳ್ಳುವುದೇ ದೇಶಪ್ರೇಮ: ವಿಧಾನಸಭಾಧ್ಯಕ್ಷ ಯು ಟಿ ಖಾದರ್

ರಾಜ್ಯಮಟ್ಟದ ಸಾಹಿತ್ಯ ಕಮ್ಮಟಗಳು, ಕಾವ್ಯವಾಚನ ಗೋಷ್ಠಿ, ಸಾಹಿತ್ಯಕ ಸ್ಪರ್ಧೆಗಳನ್ನು ಆಯೋಜಿಸಿ ಅಕ್ಕನ ಮನೆ ಪುಸ್ತಕ ಪ್ರಕಾಶನದಿಂದ ಯುವ ಸಾಹಿತಿಗಳಿಗೆ ಉತ್ಸಾಹ ತುಂಬುವ ಕಾರ್ಯ ನಿರಂತರವಾಗಿದೆ. ವಚನ ಸಾಹಿತ್ಯದ ಕೃಷಿ ಕೂಡ ಪ್ರಾರಂಭಿಸುವ ನಿಟ್ಟಿನಲ್ಲಿ ಬಸವಾದಿ ಶರಣರ ಮಾನವತಾ ಸಂದೇಶವನ್ನು ಈಗಿನ ಯುವ ಸಮೂಹಕ್ಕೆ ಮುಟ್ಟಿಸುವ ಕಾರ್ಯ ನಿರ್ವಹಿಸುತ್ತಿದೆ. ಅಕ್ಕನ ಮನೆ ಕ್ರಿಯೇಶನ್ಸ್ ಅಡಿಯಲ್ಲಿ ಮಹಿಳಾ ಸ್ವಾವಲಂಬನೆಯನ್ನು ಗುರಿಯಾಗಿಸಿಕೊಂಡು ಗುಡಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ ನೂರಾರು ಮಹಿಳೆಯರಿಗೆ ತರಬೇತಿ ಕೊಟ್ಟು ಉದ್ಯೋಗ ಕಟ್ಟಿಕೊಡುತ್ತಿದೆ.‌

1001599548

ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಕ್ಕನ ಮನೆ ಪ್ರತಿಷ್ಠಾನ ‘ಸಂಸ್ಕೃತಿ ಸಂಭ್ರಮ- 2025″ ಕಾರ್ಯಕ್ರಮ ಆಯೋಜಿಸಿ ಜಾನಪದ ಸಂಭ್ರಮ ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿಗಾಗಿ ‘ಕನ್ನಡ ಬೋಧಿಸುತ್ತಿರುವ 50 ಜನ ಶಿಕ್ಷಕರಿಗೆ ಗೌರವ ಸಮರ್ಪಣಾ ನೆಡೆಯಲಿದೆ. .ಈ ಕಾರ್ಯಕ್ರಮಕ್ಕೆ ಹಲವಾರು ಕ್ಷೇತ್ರದ ಗಣ್ಯರು ಆಗಮಿಸುತ್ತಿದ್ದು, ಕರ್ನಾಟಕದ 31 ಜಿಲ್ಲೆಯಿಂದಲೂ ಕನ್ನಡ ಶಿಕ್ಷಕರು ಆಯ್ಕೆಯಾಗಿದ್ದು, ಸತ್ಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...