ದಾವಣಗೆರೆ | ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ, ಕಚೇರಿ ಉದ್ಘಾಟನೆ.

Date:

ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ (ಡಿಐಸಿಸಿಐ-ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಡಾ.ಬಿಆರ್ ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಇದೇ ವೇಳೆ ದಾವಣಗೆರೆ ನಗರದ ಸರಸ್ವತಿ ನಗರದ ದುರ್ಗಾಂಬಿಕಾ ಸ್ಕೂಲ್ ಎದುರು ಮಂಡಳಿಯ ನೂತನ ಕಚೇರಿಯನ್ನು ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಉದ್ಘಾಟಿಸಿದರು.

1001860946
ದಲಿತ ಕೈಗಾರಿಕೋದ್ಯಮಿಗಳ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಐಸಿಸಿಐ ರಾಜ್ಯಾಧ್ಯಕ್ಷ ಬೆಳ್ಳಿ ಗಂಗಾಧರ್, “ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ 2005ರಲ್ಲಿ ಪುಣೆಯಲ್ಲಿ ಪ್ರಾರಂಭವಾಯಿತು. ಇಡೀ ದೇಶದಲ್ಲಿ ದಲಿತರನ್ನು ಉದ್ಯಮಿಗಳನ್ನಾಗಿಸುವ,ಅವರ ಉದ್ಧಾರಕ್ಕಾಗಿ ದೇಶದೆಲ್ಲೆಡೆ ಶಾಖೆ ಪ್ರಾರಂಭಿಸಲಾಯಿತು. ಇದರ ಮುಂದುವರಿದ ಭಾಗವಾಗಿ 2012ರಲ್ಲಿ ಕರ್ನಾಟಕ ಶಾಖೆ ಪ್ರಾರಂಭವಾಗಿದ್ದು, ಇಂದು 2500 ಜನ ಉನ್ನತ ಉದ್ಯಮಿಗಳಿದ್ದಾರೆ. ಮಂಡಳಿಯಲ್ಲಿ ಇಂದು 3500 ಸದಸ್ಯರಿದ್ದಾರೆ. ಎಲ್ಲರೂ ದಲಿತ ಉದ್ಯಮಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

1001860944
ಡಾ.ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ

ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಕೆ ಎಸ್ ಬಸವಂತಪ್ಪ, “ರಾಷ್ಟ್ರ ಮಟ್ಟದಲ್ಲಿ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯ ಸರ್ಕಾರಗಳು ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ಸೈಟ್ ಮಾಡುತ್ತಿದೆ. ಸಬ್ಸಿಡಿ 75% ಕೊಡುತ್ತಿದ್ದು, ಅದರ ಉಪಯೋಗ ಪಡೆಯಬೇಕು. ಎಸ್ಸಿ ಪಿಎಸ್ಟಿ ಹಣವನ್ನು ದಲಿತ ಅಭಿವೃದ್ಧಿಯ ನಿಗಮಗಳ ಮೂಲಕ ಹಂಚಿಕೆ ಆಗಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಯವರಿಗೆ ಮಾಡಲಾಗಿದೆ. ದಲಿತರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದು, ಉತ್ತಮ ಕೈಗಾರಿಕಾ ಪ್ರದೇಶದಲ್ಲಿ ದಲಿತರಿಗೆ ಕೈಗಾರಿಕಾ ಸೈಟ್ ನೀಡಲು ಚರ್ಚೆ ನೆಡೆಸಲಾಗಿದೆ. ಹಣಕಾಸಿನ ತೂಂದರೆಯಿಂದ ಬಳಲುವ ದಲಿತ ಉದ್ಯಮಿಗಳಿಗೆ ಬಡ್ಡಿ ರಿಯಾಯಿತಿಗೆ ಒತ್ತಾಯಿಸಲಾಗಿದೆ. ಕೈಗಾರಿಕಾ ಉದ್ದೇಶಕ್ಕೆ ದಲಿತರ ಫಲವತ್ತಾದ ಭೂಮಿ ಕೈಗಾರಿಕೆಗೆ ವಶಪಡಿಸಿಕೊಳ್ಳಲು ನೀವು ತಡೆ ಹಾಕಬೇಕು. ಆ ನಿಟ್ಟಿನಲ್ಲಿ ಡಿಐಸಿಸಿಐ ಕಾರ್ಯನಿರ್ವಹಿಸಬೇಕು” ಎಂದು ಅಭಿಪ್ರಾಯಪಟ್ಟರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಶಯ ನುಡಿಗಳನ್ನಾಡಿದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಂಜಣ್ಣ, “ಘನತೆಯ ಬದುಕನ್ನು ಬದುಕಬೇಕು” ಎನ್ನುವ ಅಂಬೇಡ್ಕರ್ ಹೇಳಿಕೆಯಂತೆ ಅರ್ಥಪೂರ್ಣವಾಗಿ ಬದುಕಬೇಕು. ಬ್ಲೇಸರ್ ಹಾಕುವುದು ಅಂಬೇಡ್ಕರರಿಗೆ ಜಾಗೃತ ಪ್ರಜ್ಞೆಯಾಗಿತ್ತು. ನನ್ನ ಜನ ಕೂಡ ಇದೇ ರೀತಿ ಬದುಕಲು ಮಾದರಿಯಾಗಲಿ ಎನ್ನುವುದು ಅವರ ಆಶಯವಾಗಿತ್ತು ಎಂದು ಸ್ಮರಿಸಿದರು.

1001860947

“ಅಂಬೇಡ್ಕರರಿಗೆ ಸಾಮಾಜಿಕ ಸಮಾನತೆಯೇ ದೃಡ ನಿರ್ಧಾರವಾಗಿತ್ತು. ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಅಂಬೇಡ್ಕರ್ ನಿಲುವು ಚಿಂತನೆ ಯಾಗಿತ್ತು. ಇದರಿಂದಾಗಿಯೇ ದಲಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ. ದಲಿತರು ಪ್ರಸ್ತುತ
ರಾಜಕೀಯ, ಶೈಕ್ಷಣಿಕ ಸಮಾನತೆ ಸ್ವಲ್ಪ ಮಟ್ಟಿಗೆ ಸಿಕ್ಕಿದೆ. ಆದರೆ ಉದ್ಯೋಗದಲ್ಲಿ ಮುಂದುವರೆದಿಲ್ಲ. ಈ ನಿಟ್ಟಿನಲ್ಲಿ ಮಂಡಳಿ ಕಾರ್ಯ ಶ್ಲಾಘನೀಯ. ಸಮುದಾಯಕ್ಕೆ ದಾರಿದೀಪ. ದಲಿತರು ಇಂದು ಉದ್ಯಮಿಗಳಾಗಿ ಸಮುದಾಯಕ್ಕೆ ಉದ್ಯೋಗ ನೀಡಬೇಕು. ಆಗ ನಮ್ಮ ಸಮಾಜದಲ್ಲಿ ಮುಂದುವರಿಯಲು ಸಹಾಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಜಾತಿ ವ್ಯವಸ್ಥೆ ಪ್ರತಿಭೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆ ಕಾರಣ ಮೀಸಲಾತಿಯಿಂದ ಬಂದವರಿಗೆ ಪ್ರತಿಭೆ ಇಲ್ಲ ಎನ್ನುವುದು. ಈ ಅಪವಾದದಿಂದ ದಲಿತ ಪ್ರತಿಭೆಗಳಿಗೆ ಅವಕಾಶ ನೀಡುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಮೀಸಲಾತಿ ನೀಡದಿರುವುದು ದುರಂತ. ಇದು ಅಸಮಾನತೆಗೆ ದಾರಿ ಮಾಡಿಕೊಡುತ್ತದೆ. ಜಾಗತೀಕರಣದಿಂದ ಸಮಾನತೆ ಸಾಧಿಸುವುದು ಆಶಯವಾಗಿತ್ತು. ಅದು ಕೂಡ ಜಾತಿ ತೊಲಗಿಸಲು ಸಾದ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸದೃಢವಾದರೆ ಸಾಮಾಜಿಕ ಸಮಾನತೆ ಹಂತಹಂತವಾಗಿ ನೆಲೆಗೊಳ್ಳಲಿದೆ ಎನ್ನುವುದು ಅಂಬೇಡ್ಕರ್ ಚಿಂತನೆಯಾಗಿತ್ತು” ಎಂದು ಅಭಿಪ್ರಾಯಪಟ್ಟರು.

1001860945

ಹಿರಿಯ ಪತ್ರಕರ್ತ ಬಸವರಾಜು ದೊಡ್ಡಮನಿ ಮಾತನಾಡಿ, “ನಾವು ಹಳ್ಳಿಗಳಲ್ಲಿ ಕೆಳಮಟ್ಟದಲ್ಲಿದ್ದ ಜನ. ಉದ್ಯಮಿಗಳಾಗುವ ಕನಸು ಬಿತ್ತುವ ಕೆಲಸ ಮಂಡಳಿ ಮಾಡುತ್ತಿರುವುದು ಶ್ಲಾಘನೀಯ. ಅಂಬೇಡ್ಕರ್ ತನ್ನಂತೆ ಸಮುದಾಯ ಇರಲಿ ಎನ್ನುವ ಕನಸಿನೊಂದಿಗೆ ಬದುಕಿದರು. ಎಲ್ಲಾ ಸಮಾಜದಲ್ಲಿಯೂ ಒಂದಷ್ಟು ಜನ ದುಷ್ಕರ್ಮಿಗಳು ಇದ್ದಾರೆ. ದಲಿತ ಸಮುದಾಯ ದುಶ್ಚಟಗಳಿಂದ ಹೊರಬಂದು ದುಡಿಮೆ, ಉದ್ಯಮ, ಉದ್ಯೋಗ ಕೈಗೊಳ್ಳಬೇಕು” ಎಂದು ಆಶಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆಯ ಸಹೋದರನ ಹಸ್ತಕ್ಷೇಪ, ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಬೀಗ.

ಡಿಐಸಿಸಿಐ ಬುಡಕಟ್ಟು ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜಾನಾಯಕ ಮಾತನಾಡಿ, “ದಲಿತರು ಇಂದು ಉದ್ಯಮಿಗಳಾಗಿ ಉದ್ಯೋಗ ಕೊಡುತ್ತಿದ್ದಾರೆ. ಇಂದು ಸರ್ಕಾರಗಳು ದಲಿತರಿಗೆ ಕೋಟಿ ಕೋಟಿ ಸಾಲನೀಡುತ್ತಿವೆ. ಕಾರಣ ದಲಿತರ ಮರು ಪಾವತಿ ಉತ್ತಮವಾಗಿದೆ. ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಮನಸ್ಥಿತಿಯಿಂದ ಹೊರಬಂದು ಉದ್ಯಮಿಗಳಾಬೇಕು. ದಾವಣಗೆರೆ ದಲಿತ ಕೈಗಾರಿಕೋದ್ಯಮಿಗಳು ಮಾದರಿಯಾಗಬೇಕಿದೆ” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಕೇಶ್ ಶಾನುಭೋಗ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, ಮಹಾಂತೇಶ, ಡಿಐಸಿಸಿಐ ಜಿಲ್ಲಾಧ್ಯಕ್ಷ ಮಂಜುನಾಥ್ ವೈ. ಕಬ್ಬೂರು, ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿ. ಗೋಶಾಲೆ ಸೇರಿದಂತೆ ಇತರ ಸದಸ್ಯರು ಹಾಜರಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನದಲ್ಲಿ ಹೆಜ್ಜೇನು ದಾಳಿ

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಆನಗೋಡು ಬಳಿ ಈದ್ಗಾ ಮೈದಾನದಲ್ಲಿ...

ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ

ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ...

ದಾವಣಗೆರೆ | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಮರ್ಥ್ ಶಾಮನೂರು: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್...

ದಾವಣಗೆರೆ | ದಕ್ಷಿಣ ಕ್ಷೇತ್ರ ಉಪಚುನಾವಣೆ; ಎಸ್ ಟಿ ಮೋರ್ಚಾದ ಶ್ರೀನಿವಾಸ್ ಗೆ ಒಲಿದ ಬಿಜೆಪಿ ಟಿಕೆಟ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ...