ದಾವಣಗೆರೆ | ಹುಬ್ಬಳ್ಳಿ ಕರ ಸೇವಕರ ಬಂಧನ; ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ

Date:

ಕರ ಸೇವಕರಿಗೆ ತೊಂದರೆ ಕೊಟ್ಟರೆ ಬಿಡೋ ಪ್ರಶ್ನೆ ಇಲ್ಲ. ನಾನೂ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದೆ, ನನ್ನನ್ನು ಬಂಧಿಸಲಿ. ಬೇಕಂತಲೇ ಸುಮಾರು 35 ವರ್ಷಗಳ‌ ಕೇಸನ್ನು ಈಗ ಓಪನ್ ಮಾಡಿದ್ದಾರೆ. ನಮ್ಮ ಕರ ಸೇವಕರನ್ನು ಮುಟ್ಟಲಿ ನೋಡೋಣ ಎಂದು ಸರ್ಕಾರಕ್ಕೆ ಈಶ್ವರಪ್ಪ ಸವಾಲು ಹಾಕಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಭಸ್ಮ ಆಗುವ ತನಕ ಕರ ಸೇವಕರು ಬಿಡೋದಿಲ್ಲ. ಹುಬ್ಬಳ್ಳಿಯಲ್ಲಿ ಅದೊಂದೆ ಫೈಲ್ ಯಾಕೆ ಓಪನ್ ಮಾಡಿದ್ರು. ಇಡೀ ದೇಶ ದೀಪಾವಳಿ ಮಾಡುತ್ತಿದೆ. ರಾಮಭಕ್ತರನ್ನ ಈ ಸಂದರ್ಭದಲ್ಲಿ ಅರೆಸ್ಟ್ ಮಾಡಬೇಕಿತ್ತಾ” ಎಂದು ಪ್ರಶ್ನಿಸಿದರು.

ಕರಸೇವಕರಿಗೆ ತೊಂದರೆ ಮಾಡಿ ರಾಜಕಾರಣ ಮಾಡಬೇಡಿ. ಒಂದು ವೇಳೆ ತೊಂದರೆ ಕೊಟ್ಟರೆ ಕಾಂಗ್ರೆಸ್ ರಾಮ ಭಕ್ತರ ಸಿಟ್ಟಿಗೆ ಒಳಗಾಗಬೇಕು ಎಂದು ಈಶ್ಬರಪ್ಪ ಎಚ್ಚರಿಸಿದರು. ಅದೊಂದೆ ಫೈಲ್ ಯಾಕೆ ಓಪನ್ ಮಾಡಿದ್ರಿ, ಯಾರು ಯಾರು ಭಾಗೀಯಾಗಿದ್ರು ಎಲ್ಲರನ್ನೂ ಅರೆಸ್ಟ್ ಮಾಡಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಮ್ಮನ್ನೇಲ್ಲ ಅರೆಸ್ಟ್ ಮಾಡಿ ನೋಡೋಣ, ಎಂದು ಸವಾಲ್ ಹಾಕಿದರು. ಸಿದ್ದರಾಮಯ್ಯ ಬೇಡ ಅಂದ್ರೂ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಕೋರ್ಟ್‌ನಲ್ಲಿ ಸಮವಸ್ತ್ರ ಹಾಕಿಕೊಂಡು ಹೋಗಬೇಕೆಂದು ಎಂದು ಆದೇಶ ಇತ್ತು. ಆದರೆ, ಇದ್ದಕ್ಕಿದ್ದಂತೆ ಹಿಜಾಬ್ ಓಪನ್ ಅಂದು ಸಿದ್ದರಾಮಯ್ಯ ಕೋಮು ಗಲಭೆ ಹಚ್ಚಿಸಿದ್ರು. ಅಭಿವೃದ್ದಿ ಮೇಲೆ ಚುನಾವಣೆಗೆ ಹೋಗೋಣ ಎಂದರೂ ಓಕೆ. ಹಿಂದುತ್ವದ ಮೇಲೆ ಚುನಾವಣೆ ಅಂದರೆ ಅದುಕ್ಕೂ ನಾವು ತಯಾರು. ಸುಮ್ಮನೆ ಇದ್ದ ಹುಬ್ಬಳಿಗೆ ಗಲಭೆ ಹಚ್ಚಿದ್ದೀರಿ ಎಂದು ಈಶ್ವರಪ್ಪ ಹರಿಹಾಯ್ದರು.‌

ಸಿದ್ದರಾಮಯ್ಯ ಅಯೋಧ್ಯೆಗೆ ಪೂಜೆ ಮಾಡಲ್ಲ ಅಂತಾರೆ. ಮುಲಾಯಂ ಸಿಂಗ್ ಒಂದು ಅಯೋಧ್ಯೆ ಗೆ ಒಂದು ಹಕ್ಕಿ ಹೋಗೋಕೆ ಬಿಡಲ್ಲ ಅಂದಿದ್ರು. ಆದರೆ ರಾಜೀವ ಗಾಂಧಿ, ನರಸಿಂಹರಾವ್ ಸಹಕಾರ ಕೊಟ್ಟಿದ್ದರು ಎಂದು ನೆನಪಿಸಿದರು.

ಹಿಂದುತ್ವ ಜೀವನದ ಪದ್ಧತಿ. ನನ್ನ ಪೂಜೆ ಪದ್ಧತಿಗೆ ಅಡ್ಡ ಬಂದರೆ ಬಿಡಲ್ಲ. ನಾವು ಪೂಜೆ ಮಾಡಿದರೆ ಇವರಿಗ್ಯಾಕೆ ಸಿಟ್ಟು, ಇವರೇನು ಬಾಬರ್ ವಂಶಸ್ಥರಾ ಎಂದು ವ್ಯಂಗವಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಜನಹಳ್ಳಿ ಶಿವಕುಮಾರ್, ಜಯಮ್ಮ ಸೇರಿದಂತೆ ಇತರರು ಹಾಜರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...