ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯಿಂದ ಎವಿಕೆ ರಸ್ತೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಆವರಣದ ಡಾ.ಬಿ.ಎಂ.ತಿಪ್ಪೇಸ್ವಾಮಿ ಸ್ಮಾರಕ ಪದವಿಪೂರ್ವ ಪ್ರೌಢಶಾಲೆಯ ಆವರಣದಲ್ಲಿ ಇಂದು 2026 ಮಾರ್ಚ್ 8, ಭಾನುವಾರ ಸಂಜೆ 4 ಗಂಟೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ “ಭೀಮ ಗಾಯನ” ಕಾರ್ಯಕ್ರಮವನ್ನು
ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.

ಅಂಬೇಡ್ಕರ್ ಗೀತೆಗಳ ಮಹೋತ್ಸವ ಭೀಮ್ ರಾವ್ ಅಂಬೇಡ್ಕರರ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಸಮರ್ಪಣೆ ಕಾರ್ಯಕ್ರಮವಾಗಿದ್ದು, ಸಾಮಾಜಿಕ ನ್ಯಾಯದ ಮಹಾ ಚಿಂತಕ, ಹಕ್ಕುಗಳ ಹೋರಾಟದ ಅಮರ ಧ್ವನಿ ಡಾ. ಬಿಆರ್ ಅಂಬೇಡ್ಕರ್ ಅವರ ಚಿಂತನೆಗೆ ಗಾನ ನಮನ ಅರ್ಪಿಸುವ ಮಹಾ ಸಂಗೀತ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹರಿಹರ ರಾಜಕಾಲುವೆ ನಿರ್ಮಾಣ ಕಾಮಗಾರಿ ಒತ್ತುವರೆಗೆ ಸಹಾಯ ಆರೋಪ
ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಕುರಿತು ಕವಿಗಳು, ಹೋರಾಟಗಾರರು ಸೇರಿದಂತೆ ಹಲವರು ರಚಿಸಿರುವ ಹಾಡುಗಳನ್ನು ಹಾಡಲಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಗೌರವ ಸಲ್ಲಿಸಲು ಜಿಲ್ಲಾಡಳಿತ, ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಂಘಸಂಸ್ಥೆಗಳು ಮನವಿ ಮಾಡಿವೆ.





