ದಾವಣಗೆರೆ | ಚನ್ನಗಿರಿಯ ಮಿಲ್ಲತ್ ಶಾದಿಮಹಲ್ ನಲ್ಲಿ ನಾಗರಿಕ ಅಧಿಕಾರ ಸಂರಕ್ಷಣಾ ಕಾರ್ಯಕ್ರಮ

Date:

ನಾಗರೀಕ ಅಧಿಕಾರ ಸಂರಕ್ಷಣಾ ಅಸೋಸಿಯೇಷನ್ ದಾವಣಗೆರೆ ವತಿಯಿಂದ ಚನ್ನಗಿರಿಯ ಮಿಲ್ಲತ್ ಶಾದಿಮಹಲ್ ನಲ್ಲಿ ನಾಗರೀಕ ಹಕ್ಕು ಅಧಿಕಾರ ಸಂರಕ್ಷಣಾ ಕಾರ್ಯಕ್ರಮ ಮತ್ತು ಪದಗ್ರಹಣ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುರುಕುಲ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಮಾತನಾಡಿ “ನಾಗರೀಕ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಇಂದು ಸಮಾಜದಲ್ಲಿ ನಡೆಯಬೇಕಿದೆ. ಇಂದಿನ ದಿನಗಳಲ್ಲಿ ಇದರ ಅಗತ್ಯ ಹೆಚ್ಚು ಹೆಚ್ಚಾಗಿದೆ” ಎಂದು ಅಭಿಪ್ರಾಯಪಟ್ಟರು.

1002430648

ರೈತ ಹೋರಾಟಗಾರರಾದ ಬಸಾಪುರ ರಂಗನಾಥ್ ಮಾತನಾಡಿ “ಜಾತಿ ಧರ್ಮ ಮೀರಿ ಅನ್ಯಾಯದ ವಿರುದ್ಧ ದನಿ ಎತ್ತುವ ಅಗತ್ಯವಿದೆ. ಇಂದು ಧರ್ಮಸ್ಥಳ ಸೌಜನ್ಯಾ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಕುರಿತು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ನ್ಯಾಯಕ್ಕಾಗಿ ಹೋರಾಡಿದವರ ಧರ್ಮ ದ್ರೋಹಿಗಳು ಎನ್ನುವ ನಿಂದನೆಗಳಿಗೆ ಒಳಗಾಗುತ್ತಾರೆ. ಅದನ್ನು ಮೀರಿ ನಾಗರಿಕರ ಅಧಿಕಾರ ಹಕ್ಕು ಸಂರಕ್ಷಣೆ ಆಗಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002430601 1

ಕೇದಾರಲಿಂಗ ಶಾಂತವೀರ ಶ್ರೀಗಳು ಮಾತನಾಡಿ “ಮಾನವತೆಯ ಕಲ್ಯಾಣ ಬಹಳ‌ ಮುಖ್ಯ. ಸಮಾಜದ ಎಲ್ಲರೂ ನಾಗರೀಕ ಹಕ್ಕುಗಳನ್ನು ಶೋಷಿತರಿಗೆ, ಕಷ್ಟದಲ್ಲಿರುವ ಜನರಿಗೆ ತಲುಪಿಸುವ ಕೆಲಸ ಮಾಡಬೇಕು.ನಾಗಾಲೋಟದಲ್ಲಿ ಮಾನವನ ಅಭಿವೃದ್ಧಿ ಪಥ ಓಡುತ್ತಿದೆ. ಆದರೂ ಮಾನಸಿಕ ನೆಮ್ಮದಿ ಇಲ್ಲವಾಗಿದೆ. ಏನು ಕಾರಣ, ನ್ಯೂನತೆ ಏನು ಎಂದು ಹುಡುಕಬೇಕಿದೆ.
ಎಷ್ಟು ದುಡಿದರೂ ಅದರ ಮಧ್ಯೆ ಸಂತೋಷ ಕಳೆದುಕೊಳ್ಳುವತ್ತ ಮಾನವ ಸಾಗುತ್ತಿದ್ದಾನೆ. ದುರಾಸೆ ದುರ್ನೀತಿಗೆ ಒಳಗಾಗಿ ಆತ್ಮಕಲ್ಯಾಣ, ಸಂತೋಷ ಮರೆತಿದ್ದಾರೆ. ಮಹಾತ್ಮರ ಆದರ್ಶ ಸಿದ್ದಾಂತಗಳನ್ನು ಅನುಸರಿಸಬೇಕು.‌ ಆಯಾ ಧರ್ಮಗಳು ಬೋಧಿಸಿದ ಉತ್ತಮ ಅಂಶಗಳನ್ನು ಅನುಸರಿಸಿದಾಗ ಉತ್ತಮ ಶಾಂತಿಯ ಜೀವನ ಪಡೆಯಲು ಸಾದ್ಯ. ಮಾನವರ ಕಲ್ಯಾಣಕ್ಕಾಗಿ ನಾಗರೀಕರಿಗೆ ಅಧಿಕಾರ ಹಕ್ಕುಗಳು ಸಿಗಬೇಕು” ಎಂದು ಅಭಿಪ್ರಾಯಪಟ್ಟರು.

1002430602

ಸಂಸ್ಥೆಯ ಕಾರ್ಯದರ್ಶಿ ಷಹಬ್ಬಾಜ್ ಖಾನ್ ಮಾತನಾಡಿ, “ನಾಗರಿಕರ ಹಕ್ಕು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.‌ ಹಕ್ಕು ಅಧಿಕಾರ ಸಂರಕ್ಷಣೆ ಬಗ್ಗೆ ನಾಗರಿಕರು ಎಚ್ಚೆತ್ತು ಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ನೆಡೆಯುವ ಉತ್ತಮ ಕೆಲಸ ಕಾರ್ಯ ಗಳಿಗೆ ಸಹಕಾರ ನೀಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಅರಿವು ಮುಖ್ಯ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಗೆ ಹೋರಾಟ ಸಮಿತಿ ವತಿಯಿಂದ ಹೊನ್ನಾಳಿಯ ಕನಕದಾಸ ವೃತ್ತದಲ್ಲಿ ಪ್ರತಿಭಟನೆ.

ಗೌರವಾಧ್ಯಕ್ಷ ಅಲ್ಲಾಭಕ್ಷೀ ಮಾತನಾಡಿ “ನಾಗರೀಕ ಹಕ್ಕುಗಳನ್ನು ಗೌರವಿಸಲು, ಅಧಿಕಾರ ಸಂರಕ್ಷಣೆ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರಣದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...