ದಾವಣಗೆರೆ | ಸಂವಿಧಾನ ಸಂರಕ್ಷಣೆ ಅಂಗವಾಗಿ ಸಂವಿಧಾನ ಪೆರೇಡ್.

Date:

ಸಂವಿಧಾನವೆಂದರೆ ಬಹುವರ್ಣ, ಬಹುತ್ವದ ಸಂಕೇತ ಅದರ ಸಂಕೇತವಾಗಿಯೇ ದಾವಣಗೆರೆಯ ಸಂವಿಧಾನ ಸಂರಕ್ಷಕರ ಪರೇಡ್ ನಲ್ಲಿ ಹಲವು ಬಣ್ಣಗಳ ಬಾವುಟ ಗಳನ್ನು ಹಿಡಿದು ಸಂವಿಧಾನ ಪ್ರಿಯರು, ಸಂರಕ್ಷಕರು, ಅಂಬೇಡ್ಕರ್ ಅಭಿಮಾನಿಗಳು ಸಂವಿಧಾನ ಸಂರಕ್ಷಣೆಗಾಗಿ ಕಾರ್ಯಪಡೆ ಕಟ್ಟುವ ಮಹತ್ವದ ಕಾರ್ಯಕ್ಕೆ ಒಟ್ಟಾಗಿ ಹೆಜ್ಜೆ ಹಾಕಿದರು.

1001896251

ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕದ ಸಮಾವೇಶದಲ್ಲಿ ಬೆಳಿಗ್ಗೆ 11ಕ್ಕೆ ಆರಂಭವಾದ ಸಂವಿಧಾನದಲ್ಲಿ ಸಾವಿರಾರು ಸಂವಿಧಾನದ ಅಭಿಮಾನಿಗಳು ಹೆಜ್ಜೆ ಹಾಕುವ ಮೂಲಕ ಸಂವಿಧಾನ ರಕ್ಷಣೆಗೆ ನಾವು ಬದರಿದ್ದೇವೆ ಯಾವುದೇ ಬೆಲೆ ಎತ್ತಾದರೂ ಸಂವಿಧಾನವನ್ನು ರಕ್ಷಿಸಿಕೊಳ್ಳಲು ನಾವು ಸಿದ್ದ ಎಂದು ದೃಢ ಹೆಜ್ಜೆ ಹಾಕಿದರು.

1001896234

ಸಂವಿಧಾನದ ಸಂರಕ್ಷಕರ ಸಮಾವೇಶ ಆಯೋಜಿಸಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಿಂದ ಸಂವಿಧಾನದ ಮಹತ್ವ ಸಾರುವ ಟ್ಯಾಬ್ಲೆನೊಂದಿಗೆ ಹೊರಟ ಸಂವಿಧಾನದ ಪೆರೇಡ್ ಎವಿಕೆ ಕಾಲೇಜು ಮಾರ್ಗವಾಗಿ ಸಾಗಿದ ಪೆರೇಡ್ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪೆರೇಡ್ ಮತ್ತು ಸಮಾವೇಶಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಂವಿಧಾನ ಸಂರಕ್ಷಣೆಯ ಒಂದೇ ಉದ್ದೇಶದಿಂದ ದಾವಣಗೆರೆಗೆ ಬಂದು ಸೇರಿದ ನಾಗರಿಕರು ಸಂವಿಧಾನ ಸಂರಕ್ಷಕರು ಜಾತಿ, ಧರ್ಮ, ಮತ ಭೇದ ಮರೆತು ‘ಮನುಜಮತ ವಿಶ್ವಪಥ, ಎಲ್ಲರೂ ಒಂದೇ’ ಎಂದು ಬೆರೆತು ಸಾಗಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1001896249

ಪೆರೇಡ್ ನಲ್ಲಿ ಭಾಗವಹಿಸಿದ ಸಂವಿಧಾನ ಪ್ರೀಯರು ಶಿಸ್ತುಬದ್ಧವಾಗಿ ರಸ್ತೆ ಒಂದು ಬದಿಯಲ್ಲಿ ಹೆಜ್ಜೆ ಹಾಕುವ ಮೂಲಕ ರಾಷ್ಟ್ರಧ್ವಜ ಮತ್ತು ಬಾವುಟಗಳನ್ನು ಹಿಡಿದು ಅಂಬೇಡ್ಕರ್ ಮತ್ತು ಸಂವಿಧಾನದ ಮಹತ್ವ ಸರ್ವ ಘೋಷಣೆಗಳನ್ನು ಕೂಗುವ ಮೂಲಕ ಶಿಸ್ತು ಬದ್ಧವಾಗಿ ಸಾಗಿದರು. ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ನಂತರ ಜಯದೇವ ವೃತ್ತ, ನಗರಸಭೆ ಮುಂಭಾಗದ ಮೂಲಕ ಬೀರಲಿಂಗೇಶ್ವರ ಆವರಣಕ್ಕೆ ಸಮಾವೇಶಗೊಂಡಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಸಂವಿಧಾನ ರಕ್ಷಣೆಗಾಗಿ ಸಂರಕ್ಷಕರ ಸಮಾವೇಶ, ಸಂವಿಧಾನ ರಕ್ಷಣೆಗೆ ಕಾರ್ಯಪಡೆ ಬದ್ದ.

ತಮಟೆ, ಡೊಳ್ಳು, ಕಹಳೆ, ನಗಾರಿ ಹಾಗೂ ವಿವಿಧ ನೆಲಸಂಸ್ಕೃತಿಯ ಕಲಾವಿದರು ಪೆರೇಡ್ ನಲ್ಲಿ ಸಾಗಿದರು. ‘ನಮ್ಮ ಸಂವಿಧಾನದ ರಕ್ಷಣೆ ನಮ್ಮಿಂದಲೇ’ ಸಂವಿಧಾನ ಸಂರಕ್ಷಣೆಗೆ ನಾವು ಬದ್ಧ’ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ನಗರದಲ್ಲಿ ಸಂವಿಧಾನ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಿದರು.

1001896250

ಸಂವಿಧಾನ ಪೆರೇಡ್‌ನಲ್ಲಿ ಎದ್ದೇಳು ಕರ್ನಾಟಕ ಸೆಂಟ್ರಲ್ ವರ್ಕಿಗ್ ಕಮಿಟಿ ಸದಸ್ಯ ತಾರಾ ರಾವ್, ಹಿರಿಯ ದಲಿತ ನಾಯಕ ಎನ್‌. ವೆಂಕಟೇಶ್‌, ಜಮಾತ್-ಎ-ಇಸ್ಲಾಮಿ-ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮದ್ ಯೂಸಫ್‌ ಖನ್ನಿ, ಕಾನೂನು ವಿಶ್ವವಿದ್ಯಾಲಯದ ನಿರ್ದೆಶಕ ಸೇಂಟ್ ಜೋಸೆಫ್, ಫಾದರ್ ಝೆರಾಲ್ಡ್‌ ಡಿಸೋಜಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಕರಿಬಸಪ್ಪ, ಸತೀಶ್ ಅರವಿಂದ್, ಎಪಿಸಿಆರ್‌ ಜಿಲ್ಲಾ ಕಾರ್ಯದರ್ಶಿ ನಿಜಾಮುದ್ದೀನ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಅಂಬಣ್ಣ ಅರೋಲಿಕರ್, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ನೂರಾರು ಚಿಂತಕರು, ಸಂವಿಧಾನ ಪ್ರಿಯರು, ಬರಹಗಾರರು, ಹೋರಾಟಗಾರರು ಹಾಗೂ ಪತ್ರಕರ್ತರು ಪರೇಡ್‌ನಲ್ಲಿ ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಿಬಿ ರಸ್ತೆಯಲ್ಲಿ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ

ಪವಿತ್ರ ರಂಜಾನ್ (ಈದ್ ಉಲ್ ಫಿತುರ್) ಆಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ...

ದಾವಣಗೆರೆ | ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಮರ್ಥ್ ಶಾಮನೂರು: ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್...

ದಾವಣಗೆರೆ | ದಕ್ಷಿಣ ಕ್ಷೇತ್ರ ಉಪಚುನಾವಣೆ; ಎಸ್ ಟಿ ಮೋರ್ಚಾದ ಶ್ರೀನಿವಾಸ್ ಗೆ ಒಲಿದ ಬಿಜೆಪಿ ಟಿಕೆಟ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮ...

ದಾವಣಗೆರೆ | ಒಳಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯಕ್ಕೆ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಹೋರಾಟ

ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠವು ಒಳ ಮೀಸಲಾತಿ ವರ್ಗೀಕರಣ ಹಾಗೂ ಜಾರಿಯ...