ದಾವಣಗೆರೆ | ದೇಶಾದ್ಯಂತ ಮದ್ಯ ನಿಷೇಧಕ್ಕೆ, ಮಹಿಳಾ ಗ್ರಾಮ ಸಭೆಗೆ ಪರಮಾಧಿಕಾರಕ್ಕೆ ಒತ್ತಾಯ

Date:

ಸಂವಿಧಾನದ ಆರ್ಟಿಕಲ್ 47ರಂತೆ ದೇಶಾದ್ಯಂತ ಮದ್ಯ ನಿಷೇಧದತ್ತ ಸಾಗಬೇಕೆಂದು ಮದ್ಯ ನಿಷೇಧ ಆಂದೋಲನ- ಕರ್ನಾಟಕ ವೇದಿಕೆ 2015 ರಿಂದಲೇ ಹೋರಾಡುತ್ತಾ ಬಂದಿದೆ. ಇದನ್ನು ಹಲವಾರು ಪ್ರಗತಿಪರ ವೇದಿಕೆಗಳು, ರೈತ, ದಲಿತ, ಕಾರ್ಮಿಕ ಸಂಘಟನೆಗಳು ಬೆಂಬಲಿಸುತ್ತಿವೆ. ಈ ನಿಟ್ಟಿನಲ್ಲಿ ಮಹಿಳಾ ಗ್ರಾಮ ಸಭೆಗಳ ನಿರ್ಧಾರಕ್ಕೆ ಪರಮಾಧಿಕಾರ ನೀಡಬೇಕೆಂದು ಒತ್ತಾಯಿಸಿ ಗ್ರಾಕೂಸ್ ನ ಅಂಗವಾದ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿತು.

ಈ ವೇಳೆ ಮಾತನಾಡಿದ ಮುಖಂಡರು “ಸಂಘಟನೆಯು ಹಲವಾರು ಮಹಿಳಾ ಸಂಘಟನೆಗಳ ವೇದಿಕೆಯಾಗಿದ್ದು, ನಮ್ಮ ನಿರ್ಧಾರ ದೇಶದಲ್ಲಿ ಮಧ್ಯ ನಿಷೇಧವಾಗಬೇಕು. ಹಾಗಾಗಿ ಹರಿಯಾಣ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿರುವಂತಹ ಮಹಿಳಾ ಗ್ರಾಮ ಸಭೆಗಳಿಗೆ ಕೊಟ್ಟಿರುವ ಪರಮಾಧಿಕಾರದಂತೆ ಇಲ್ಲಿಯೂ ಕೂಡ ರಾಜ್ಯ ಸರ್ಕಾರಗಳು ಯಾವುದೇ ಒಂದು ಮಧ್ಯದ ಅಂಗಡಿಗೆ ಪರವಾನಗಿ ಕೊಡಲು ಅಥವಾ ರದ್ದು ಮಾಡಲು ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು ಎಂದು ಆಗ್ರಹಿಸಿದರು.‌

“ಮಹಿಳಾ ಗ್ರಾಮ ಸಭೆಯ ಒಪ್ಪಿಗೆಯೊಂದಿಗೆ ಮದ್ಯದಲ್ಲಿ ಅಂಗಡಿಗೆ ಪರವಾನಗಿ ನೀಡುವ ಕಾನೂನು 2016ರ ವರೆಗೆ ಇತ್ತು. ಅಂದಿನ ಸರಕಾರ ಇದನ್ನು ತೆಗೆದು ಹಾಕಿದೆ, ಇದನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002982395

“ಅಲ್ಲದೆ ಹಳ್ಳಿಗಳಲ್ಲಿ ಪಾನ್ ಶಾಪ್, ಕಿರಾಣಿ ಅಂಗಡಿ, ಗೋಡಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಆಗುತ್ತಿದೆ.‌ ಸಂಘಟನೆಗಳಿಂದ ಹಲವಾರು ಬಾರಿ ಅಕ್ರಮ ಮಧ್ಯ ಮಾರಾಟದ ಹೆಸರು ಅಂಗಡಿಗಳ ಪಟ್ಟಿ ಪೊಲೀಸರಿಗೆ ಮತ್ತು ಅಬಕಾರಿ ಇಲಾಖೆ ಕೊಟ್ಟಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸಣ್ಣ ಸಣ್ಣ ಮಕ್ಕಳು ಮಧ್ಯ ಸೇವನೆ ಆರಂಭಿಸಿ ಸಮಾಜ ಕೆಟ್ಟದಾಗಿ ಹೋಗುತ್ತಿದೆ.‌ ಯುವಪೀಳಿಗೆಯ ಭವಿಷ್ಯ ನಾಶವಾಗುತ್ತಿದ್ದು ಇದನ್ನು ತಡೆಗಟ್ಟಲು ಪ್ರತಿ ಹಳ್ಳಿಯಲ್ಲಿ ಕೂಡ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ ನೀಡಬೇಕು” ಎಂದು ಒತ್ತಾಯಿಸಿದರು.‌

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿ, ಭಾಷೆ, ಧರ್ಮದ ಸಂಕೋಲೆಯಿಂದ ಹೊರಬಂದು ನಾಗರೀಕರಾಗಿದ್ದೇವೆಯೇ: ಚಿಂತಕ ಹರಿರಾಮ್

“ಈ ಬೇಡಿಕೆಗಳನ್ನು ಸರ್ಕಾರ ತಕ್ಷಣ ಚರ್ಚಿಸಿಲ್ಲವಾದರೆ ನವೆಂಬರ್ 25 ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು” ಎಂದು ಎಚ್ಚರಿಸಿದರು.

ಮದ್ಯ ನಿಷೇಧ ಆಂದೋಲನ- ಕರ್ನಾಟಕ ಮತ್ತು ಗ್ರಾಕೂಸ್ ಸಂಘಟನೆಯ ಮುಖಂಡರಾದ ಸುಧಾ ಪಲ್ಲಾಗಟ್ಟೆ, ಗೀತಾ, ಬಸಮ್ಮ ,ಸುಶೀಲಮ್ಮ, ಪ್ರಿಯಾಂಕ, ಮಂಜಮ್ಮ, ನೀಲಮ್ಮ, ಮಲ್ಲಮ್ಮ ಅಂಬಕ್ಕ, ರೂಪ, ಅಶ್ವಿನಿ, ಯಲ್ಲಮ್ಮ, ಮಾಯಮ್ಮ, ಮಂಜುಳಾ, ರೇಣುಕಮ್ಮ, ರತ್ನಮ್ಮ, ಮಂಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...